ಕೆ.ಆರ್.ಪೇಟೆ-:ರಾಜ್ಯದಲ್ಲಿ ಒಳ ಮೀಸಲಾತಿ ಜಾರಿ ಸಂಬಂಧ ಪರಿಶಿಷ್ಟ ಜಾತಿಗಳ ಸಮೀಕ್ಷೆ ನಡೆಸಲು ರಾಜ್ಯ ಸರ್ಕಾರ ತೀರ್ಮಾನಿಸಿರುವ ಹಿನ್ನೆಲೆಯಲ್ಲಿ ಈಗಾಗಲೇ ಪ್ರಾರಂಭವಾಗಿರುವ ಸಮೀಕ್ಷೆಯಲ್ಲಿ ಮಾದಿಗ ಸಮುದಾಯವು ಉಪಜಾತಿ ಕಾಲಂನಲ್ಲಿ ‘ಮಾದಿಗ 61’ ಎಂದು ಬರೆಸಬೇಕು ಹಾಗೆ ನಮ್ಮ ಮಾದಿಗ ಸಮುದಾಯವು ಅತ್ಯಂತ ಹಿಂದುಳಿದಿದೆ.
ಸರ್ಕಾರಿ ಸವಲತ್ತು ಪಡೆಯುವಲ್ಲಿ ವಿಫಲವಾಗಿದೆ. ಇತರ ಸಮಾಜದಂತೆ ನಾವು ಸಹ ಅಭಿವೃದ್ಧಿಯತ್ತ ಸಾಗಲು ಸತತ ಹೋರಾಟ ಮಾಡಿದ್ದರ ಫಲವಾಗಿ ಒಳ ಮೀಸಲಾತಿ ಜಾರಿಗೆ ಸಮೀಕ್ಷೆ ನಡೆಸಲಾಗುತ್ತಿದೆ. ಈ ಸಮೀಕ್ಷೆ ಬಳಿಕ ಸಿಗುವ ಅಂಕಿ ಅಂಶ ಆಧರಿಸಿ ಮೀಸಲಾತಿ ಪ್ರಮಾಣ ಸಿಗುತ್ತದೆ.

ಹೀಗಾಗಿ ನಮ್ಮ ಮಾದಿಗ ಸಮುದಾಯದ ಬಾಂಧವರು ಜಾತಿ ಕಾಲಂನಲ್ಲಿ ‘ಮಾದಿಗ 61’ ಎಂದು ಮಾತ್ರ ಬರೆಸಬೇಕೆಂದು ಮಾದಿಗ ಸಮುದಾಯದ ಯುವ ಮುಖಂಡ ನಾರ್ಗೊನಹಳ್ಳಿ ಸಾಯಿಕುಮಾರ್. ಎನ್. ಕೆ. ರವರು ತಿಳಿಸಿದರು,
– ಶ್ರೀನಿವಾಸ್ ಆರ್.