ಕೆ.ಆರ್.ಪೇಟೆ – ತಾಲ್ಲೂಕಿನ ಗಡಿ ಗ್ರಾಮ ದಡಿಘಟ್ಟದ ಶಿವಜ್ಯೋತಿಪಣ ಸಮುದಾಯದ ಹಿರಿಯ ಮುಖಂಡರಾದ ಪಾಪಶೆಟ್ಟಿ (85) ಅವರು ಗುರುವಾರ ಸಂಜೆ ನಿಧನ ಹೊಂದಿದ್ದಾರೆ.
ಅವರಿಗೆ ಸುಮಾರು 85 ವರ್ಷ ವಯಸ್ಸಾಗಿತ್ತು. ಮೃತರು ಧರ್ಮಪತ್ನಿ ಲಕ್ಷ್ಮಮ್ಮ, ಇಬ್ಬರು ಪುತ್ರರು—ಗಣಪತಿ ದೇವಾಲಯದ ಅರ್ಚಕ ಜಯರಾಮ ಶೆಟ್ಟಿ ಹಾಗೂ ಗಂಗಧರ್—ಮೂವರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಅಂತ್ಯಕ್ರಿಯೆ ಮೇ 9, ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಸ್ವಗ್ರಾಮ ದಡಿಘಟ್ಟದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ಪಾಪಶೆಟ್ಟಿ ಅವರ ನಿಧನಕ್ಕೆ ವಿವಿಧ ಗಣ್ಯರು ಮತ್ತು ದಡಿಘಟ್ಟ ಗ್ರಾಮಸ್ಥರು ಸಂತಾಪ ವ್ಯಕ್ತಪಡಿಸಿದ್ದಾರೆ.
- ಶ್ರೀನಿವಾಸ್ ಆರ್.