ಕೆ.ಆರ್.ಪೇಟೆ-ಹಿರಿಯ ಪತ್ರಕರ್ತರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯಆರ್.ಶ್ರೀನಿವಾಸ್ ಹುಟ್ಟುಹಬ್ಬ ಸಂಭ್ರಮಾಚರಣೆ

ಕೆ.ಆರ್.ಪೇಟೆ: ತಾಲ್ಲೂಕಿನ ಹಿರಿಯ ಪತ್ರಕರ್ತರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಾದ ಆರ್.ಶ್ರೀನಿವಾಸ್ ಅವರ ಹುಟ್ಟು ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಯಿತು.

ಸಮಾಜ ಸೇವಕರು ಹಾಗೂ ಉದ್ಯಮಿಗಳಾದ ಹೊಸಹೊಳಲು ನಂಜುಂಡಸ್ವಾಮಿ ಮತ್ತು ಅವರ ಸ್ನೇಹ ಬಳಗದ ಸದಸ್ಯರು ಶ್ರೀನಿವಾಸ್ ಅವರಿಗೆ ಮೈಸೂರು ಪೇಟ ತೊಡಿಸಿ ಸನ್ಮಾನಿಸಿ ಕೇಕ್ ಕತ್ತರಿಸುವ ಮೂಲಕ ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರಿದರು.


ಪಟ್ಟಣದ ಜಯನಗರದ ಆರ್.ಟಿ.ಓ.ಮಲ್ಲಿಕಾರ್ಜುನ್ ಅಭಿಮಾನಿಗಳ ಬಳಗದ ಅಧ್ಯಕ್ಷರಾದ ಗಂಜಿಗೆರೆ ಮಹೇಶ್ ನೇತೃತ್ವದಲ್ಲಿ ಹಿರಿಯ ಪತ್ರಿಕಾ ವರದಿಗಾರರು ಹಾಗೂ ಅಗ್ರಹಾರಬಾಚಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀನಿವಾಸ್ ಅವರ ಹುಟ್ಟು ಹಬ್ಬದ ಅಂಗವಾಗಿ ಮೈಸೂರು ಪೇಟ ತೊಡಿಸಿ ಸನ್ಮಾನಿಸಿ ಗೌರವಿಸಿ, ಕಲ್ಲಂಗಡಿ ಹಣ್ಣನ್ನು ಕತ್ತರಿಸಿ ತಿನ್ನಿಸುವ ಮೂಲಕ ವಿಶೇಷವಾಗಿ ಹುಟ್ಟು ಹಬ್ಬವನ್ನು ಆಚರಣೆ ಮಾಡಲಾಯಿತು. ಈ‌ ಮೂಲಕ ಕಲ್ಲಂಗಡಿ ಬೆಳೆದ ರೈತನಿಗೂ ಒಂದು ಹುಟ್ಟು ಹಬ್ಬದಲ್ಲಿ ಬೆಲೆ ಸಿಗುವಂತಾಗುತ್ತದೆ ಎಂದು ಆರ್.ಟಿ.ಓ. ಮಲ್ಲಿಕಾರ್ಜುನ್ ಅಭಿಮಾನಿಗಳ ಬಳಗದ ಅಧ್ಯಕ್ಷ ಗಂಜಿಗೆರೆ ಮಹೇಶ್ ಹೇಳಿದರು.

ಸುಮಾರು 18ವರ್ಷಗಳಿಂದ ಪತ್ರಿಕಾ ಕ್ಷೇತ್ರದಲ್ಲಿ ಮೈಸೂರುಮಿತ್ರ, ವಿಜಯವಾಣಿ, ಆಂದೋಲನ, ಉದಯಕಾಲ, ಪ್ರಜಾನುಡಿ, ವೈಬ್ರೆಂಟ್ ಮೈಸೂರು ಪತ್ರಿಕೆ ಸೇರಿದಂತೆ ವಿವಿಧ ಪತ್ರಿಕೆಗಳಲ್ಲಿ ಕೆಲಸ ಮಾಡಿರುತ್ತಾರೆ. ಇಂದಿಗೂ ಪತ್ರಿಕೆಯ ವರದಿಗಾರರಾಗಿ ಪ್ರಾಮಾಣಿಕವಾಗಿ, ಅರ್ಪಣಾ ಭಾವನೆಯಿಂದ ಕೆಲಸ ಮಾಡುತ್ತಾ ತಾಲ್ಲೂಕಿನಲ್ಲಿ ಉತ್ತಮ ಹೆಸರು ಗಳಿಸಿದ್ದಾರೆ.

ಹಲವಾರು ಶಿಷ್ಯರನ್ನು ತಾಲ್ಲೂಕಿನ ಪತ್ರಿಕಾ ಕ್ಷೇತ್ರದಲ್ಲಿ ಪರಿಚಯಿಸುವ ಮೂಲಕ ಪತ್ರಿಕಾ ಕ್ಷೇತ್ರಕ್ಕೆ ಹಲವು ಯುವ ಪತ್ರಕರ್ತರನ್ನು ನೀಡಿದ ಹೃದಯವಂತಿಕೆ ಶ್ರೀನಿವಾಸ್ ಅವರಲ್ಲಿದೆ. ತಾಲ್ಲೂಕಿನಾಧ್ಯಂತ ಪೇಪರ್ ಸೀನಣ್ಣ ಎಂದೇ ಖ್ಯಾತಿ ಪಡೆದಿರುವ ಶ್ರೀನಿವಾಸ್ ಅವರಿಗೆ ದೇವರು ಆಯಸ್ಸು, ಆರೋಗ್ಯ ನೀಡಿ ಕಾಪಾಡಲಿ ಎಂದು ಮಹೇಶ್ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಪತ್ರಕರ್ತರಾದ ಕೆ.ಎಸ್.ಚಂದ್ರು,ಮನು ಮಾಕವಳ್ಳಿ, ಕೆ.ಪಿ.ಮಂಜುನಾಥ್, ಜಗದೀಶ್, ರಂಗನಾಥ್, ಶ್ಯಾರಹಳ್ಳಿ ಗೋವಿಂದರಾಜು, ಪೋಲೀಸ್ ಸತೀಶ್, ವಿಜಿಯಣ್ಣ, ಆರ್.ಟಿ.ಓ ಪ್ರತಿನಿಧಿ ಸಂಜಯ್ ಸೇರಿದಂತೆ ಹಲವು ಯುವ ಪತ್ರಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *