ಕೆ.ಆರ್.ಪೇಟೆ-ಶ್ರೀ ಕಾಳಿದಾಸ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಕೆ.ಎನ್.ಕಾಳೇಗೌಡ (ಈರುಳ್ಳಿ ಕಾಳಪ್ಪ) ಹಾಗೂ ಉಪಾಧ್ಯಕ್ಷರಾಗಿ ಚೌಡೇನಹಳ್ಳಿ ಮಂಜೇಗೌಡ ಆಯ್ಕೆಯಾಗಿದ್ದಾರೆ.
ಈ ಹಿಂದೆ ಅಧ್ಯಕ್ಷರಾಗಿದ್ದ ಮಾರ್ಗೋನಹಳ್ಳಿ ಜವರೇಗೌಡ ಹಾಗೂ ಉಪಾಧ್ಯಕ್ಷರಾಗಿದ್ದ ಕೋಡಿಮಾರನಹಳ್ಳಿ ಚಿಕ್ಕೇಗೌಡ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಗಳಿಗೆಚುನಾವಣೆ ನಿಗಧಿಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಸಂಘದ ಸಂಸ್ಥಾಪಕ ಅಧ್ಯಕ್ಷ ಮೂಡನಹಳ್ಳಿ ಎಂ.ಆರ್.ರಂಗಸ್ವಾಮಿ ಹಾಗೂ ಕಾಳೇಗೌಡ ಉಪಾಧ್ಯಕ್ಷ ಸ್ಥಾನಕ್ಕೆ, ಮಂಜೇಗೌಡ, ಕೋಡಿಮಾರನಹಳ್ಳಿ ಚಿಕ್ಕೇಗೌಡ, ಚೌಡೇನಹಳ್ಳಿ ಚಿಕ್ಕೇಗೌಡ ತಮ್ಮ ನಾಮಪತ್ರ ಸಲ್ಲಿಸಿದ್ದರು.
ಸಂಸ್ಥೆಯಲ್ಲಿ ಒಟ್ಟು 15 ನಿರ್ದೇಶಕರಿದ್ದು, ಎಲ್ಲಾ ನಿರ್ದೇಶಕರೂ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. 8 ಮತಗಳನ್ನು ಕೆ.ಎನ್.ಕಾಳೇಗೌಡ ಪಡೆದು ಆಯ್ಕೆಯಾದರು. ಪ್ರತಿಸ್ಪರ್ಧಿ ಎಂ.ಆರ್.ರಂಗಸ್ವಾಮಿ 7 ಮತಗಳನ್ನು ಪಡೆದರು.
ಹಾಗೆಯೇ ಉಪಾಧ್ಯಕ್ಷರ ಸ್ಥಾನಕ್ಕೆ ಸ್ಥರ್ಧಿಸಿದ್ದ ಕೋಟಿ ಮಂಜೇಗೌಡ 8 ಮತಗಳು ಹಾಗೂ ಚಿಕ್ಕೇಗೌಡ 7 ಮತಗಳನ್ನು ಪಡೆದರು. ಒಂದು ಮತಗಳ ಅಂತರದಿಂದ ಕೋಟಿ ಮಂಜೇಗೌಡ ಆಯ್ಕೆಯಾದರು. ಪುನರಾಯ್ಕೆ ಬಯಸಿ ಉಪಾಧ್ಯಕ್ಷರ ಸ್ಥಾನಕ್ಕೆ ನಾಮ ಪತ್ರ ಸಲ್ಲಿಸಿದ್ದ ಚಿಕ್ಕೇಗೌಡರಿಗೆ ಹಿನ್ನೆಡೆಯಾಯಿತು.
ಆಯ್ಕೆಯ ನಂತರ ನೂತನ ಅಧ್ಯಕ್ಷ ಕಾಳೇಗೌಡ ಮಾತನಾಡಿ ಸರ್ವ ಸದಸ್ಯರ ಸಲಹೆ ಸಹಕಾರದೊಂದಿಗೆ ಸಂಘದ ಏಳ್ಗೆಗೆ ಶ್ರಮಿಸುತ್ತೇನೆ.ನಾನು ಅಧ್ಯಕ್ಷನಾಗಲೂ ಮತ ಚಲಾಯಿಸಿದ ನಿರ್ದೇಶಕರು ಹಾಗೂ ಮುಖಂಡರಿಗೆ ಧನ್ಯವಾದ ಸಮರ್ಪಿಸುತ್ತೇನೆ ಎಂದರು.
ನೂತನ ಅಧ್ಯಕ್ಷ,ಉಪಾಧ್ಯಕ್ಷರಿಗೆ ತಾಲ್ಲೂಕು ಕುರುಬ ಸಂಘದ ಅಧ್ಯಕ್ಷ ಕೆ.ಪುರುಷೋತ್ತಮ್, ಹಿರೀಕಳಲೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಮತ ರಘು, ಸದಸ್ಯರಾದ ತೇಗನಹಳ್ಳಿ ಮಹೇಶ್, ಹಿರೀಕಳಲೆ ರಾಮಕೃಷ್ಣ, ಭಾರತೀಪುರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬೆಡದಹಳ್ಳಿ ಸುನೀಲ್, ಸಂಘದ ನಿಕಟಪೂರ್ವ ಅಧ್ಯಕ್ಷ ಮಾರ್ಗೋನಹಳ್ಳಿ ಜವರೇಗೌಡ, ನಿರ್ದೇಶಕರಾದ ಶೆಟ್ಟಹಳ್ಳಿ ನಂಜೇಗೌಡ, ಆದಿಹಳ್ಳಿ ರಾಜೇಗೌಡ, ಕೆ.ಆರ್.ಪೇಟೆ ವಿಶಾಲಾಕ್ಷಿ ರಾಜು, ಕೆ.ಎಸ್.ಚಂದ್ರು, ಯುವ ಕುರುಬ ಸಂಘದ ಕಾರ್ಯಾಧ್ಯಕ್ಷ ಅಣೇ ಚೌಡೇನಹಳ್ಳಿ ರವಿ, ತಾಲ್ಲೂಕು ಕುರುಬ ಸಂಘದ ನಿರ್ದೇಶಕರಾದ ರಾಮನಹಳ್ಳಿ ಕುಮಾರ್, ತೇಗನಹಳ್ಳಿ ನಂಜೇಗೌಡ, ಹಿರೀಕಳಲೆ ಯೋಗಣ್ಣ ಮತ್ತಿತರರು ಅಭಿನಂದನೆ ಸಲ್ಲಿಸಿದರು.
——————-ಶ್ರೀನಿವಾಸ್ ಕೆ ಆರ್ ಪೇಟೆ