
ಕೆ.ಆರ್.ಪೇಟೆ-ತಾಲ್ಲೂಕು ಹೊಸಹೊಳಲು ಗ್ರಾಮದಲ್ಲಿರುವ ಶ್ರೀ ಕೋಟೆ ಭೈರವೇಶ್ವರ ದೇವಸ್ಥಾನದ ರಾಜಗೋಪುರ ಹಾಗೂ ಸಮುದಾಯ ಭವನದ ಉದ್ಘಾಟನಾ ಕಾರ್ಯಕ್ರಮವನ್ನು ಇದೇ ಫೆ.16ರಿಂದ 18ವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಕೋಟೆ ಭೈರವೇಶ್ವರ ದೇವಾಲಯ ಟ್ರಸ್ಟಿನ ಗೌರವಾಧ್ಯಕ್ಷರು ಹಾಗೂ ಶಾಸಕರಾದ ಹೆಚ್.ಟಿ.ಮಂಜು ತಿಳಿಸಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆದಿಚುಂಚನಗಿರಿ ಪೀಠಾಧ್ಯಕ್ಷ ಶ್ರೀ ಶ್ರೀ ಡಾ. ನಿರ್ಮಲಾನಂದನಾಥಸ್ವಾಮೀಜಿ, ಕೆಂಗೇರಿಯ ವಿಶ್ವ ಒಕ್ಕಲಿಗರ ಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಶ್ರೀ ಡಾ.ನಿಶ್ಚಲಾನಂದನಾಥಸ್ವಾಮೀ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಹೆಚ್ ಡಿ ಕುಮಾರಸ್ವಾಮಿಯವರು, ಮಾಜಿ ಸಚಿವರಾದ ಸಾ.ರಾ.ಮಹೇಶ್ ಸೇರಿದಂತೆ ಅನೇಕ ಗಣ್ಯರು ಈ ಕಾರ್ಯಕ್ರಮಕ್ಕೆ ಆಗಮಿಸುತ್ತಾರೆ.
ಐತಿಹಾಸಿಕ ಇತಿಹಾಸವುಳ್ಳ ಹೊಯ್ಸಳರ ನೆಲೆಬೀಡು ಗ್ರಾಮದಲ್ಲಿ 23 ವರ್ಷಗಳ ಬಳಿಕ ಅದ್ದೂರಿಯಾಗಿ ನನ್ನ ಕುಲದೇವರು ಹಾಗೂ ಜನತೆಯ ಇಷ್ಟಾರ್ಥಸಿದ್ದಿ ಕಲ್ಪಿಸುವ ಶ್ರೀ ಕೋಟೆ ಬೈರವೇಶ್ವರ ದೇವಾಲಯದ ಮೂರು ದಿನದ ಅದ್ದೂರಿ ಜಾತ್ರಾ ಮಹೋತ್ಸವ ಹಾಗೂ ರಾಜಗೋಪುರ ಸಮುದಾಯದ ಭವನ ಕಾರ್ಯಕ್ರಮ ಜರುಗಲಿದೆ ಭಕ್ತಾದಿಗಳು ಸಾರ್ವಜನಿಕರು ಆಗಮಿಸಿ ಭಗವಂತನ ಕೃಪೆಗೆ ಪಾತ್ರರಾಗಬೇಕು ಎಂದು ಹೆಚ್.ಟಿ ಮಂಜು ಮನವಿ ಮಾಡಿಕೊಂಡರು.
ಶ್ರೀ ಕೋಟೆ ಭೈರವೇಶ್ವರ ಸ್ವಾಮಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷೆ ಮಂಜುಳ ಮಾತನಾಡಿ,ಹೊಸಹೊಳಲು ಗ್ರಾಮದ ಶ್ರೀ ಕೋಟೆ ಭೈರವೇಶ್ವ ರಸ್ವಾಮೀ ದೇವಸ್ಥಾನದ ರಾಜಗೋಪುರ ಹಾಗೂ ಸಮುದಾಯದ ಭವನ ಉದ್ಘಾಟನೆ ಮತ್ತು ಪರ ಕಾರ್ಯಕ್ರಮ ಫೆ. 16-2-2025 ರಿಂದ 18-2-2025 ವರೆಗೆ ಮೂರು ದಿನಗಳ ಕಾಲ ಅದ್ದೂರಿಯಾಗಿ ನಡೆಯಲಿದೆ. ಈ ವಿಶೇಷ ದೇವತಾ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಆದಿಚುಂಚನಗಿರಿ ಮಹಾ ಸಂಸ್ಥಾನ ಮಠ ಶ್ರೀ ಶ್ರೀ ಶ್ರೀ ಡಾ: ನಿರ್ಮಲಾನಂದನಾಥ ಮಹಾಸ್ವಾಮಿಗಳು ಹಾಗೂ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾಪನ ಮಠ ಶ್ರೀ ಡಾ:ನಿಶ್ಚಲಾನಂದನಾಥ ಸ್ವಾಮಿಗಳು ವಹಿಸಲಿದ್ದಾರೆ.

ಉದ್ಘಾಟನೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆ ಹೆಚ್.ಟಿ ಮಂಜು, ಮುಖ್ಯ ಅತಿಥಿಗಳಾಗಿ ಸಚಿವ ಎನ್.ಚಲುವರಾಯಸ್ವಾಮಿ,ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರ ನಿಖಿಲ್ ಕುಮಾರಸ್ವಾಮಿ, ಮಾಜಿ ಸಚಿವರಾದ ಸಿ ಎಸ್ ಪುಟ್ಟರಾಜು, ಸಾ.ರಾ ಮಹೇಶ್, ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ ಹಾಗಾಗಿ ಸಾರ್ವಜನಿಕ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ ಉಪಾಧ್ಯಕ್ಷ ಬೋರೇಗೌಡ, ಶಾಸಕರ ಆಪ್ತ ಸಹಾಯಕ ಅರಳಕುಪ್ಪೆ ಪ್ರತಾಪ್ ಸೇರಿದಂತೆ ಉಪಸ್ಥಿತರಿದ್ದರು.
-ವರದಿ-ಶ್ರೀನಿವಾಸ್ ಆರ್