ಕೆ.ಆರ್.ಪೇಟೆ-ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಸೋಮನಹಳ್ಳಿ ಗ್ರಾಮ ಪಂಚಾಯಿತಿಯ ನೂತನ ಉಪಾಧ್ಯಕ್ಷರಾಗಿ ಎಸ್.ಎಂ.ಕಾoತರಾಜು ಆಯ್ಕೆಯಾಗಿದ್ದಾರೆ.
ಗ್ರಾ.ಪಂ.ಹಿoದಿನ ಉಪಾಧ್ಯಕ್ಷೆ ಕೋಕಿಲ ಪುಟ್ಟಸ್ವಾಮಿಗೌಡ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಇಂದು ಚುನಾವಣೆ ನಿಗಧಿಯಾಗಿತ್ತು. ಉಪಾಧ್ಯಕ್ಷ ಸ್ಥಾನ ಬಯಸಿ ಮಂಜುಳ ಮಹೇಶ್ ಹಾಗೂ ಎಸ್.ಎಂ.ಕಾoತರಾಜು ನಾಮಪತ್ರ ಸಲ್ಲಿಸಿದ್ದರು.
ಎಸ್.ಎಂ.ಕಾoತರಾಜು 10 ಮತಗಳ ಪಡೆದು ಗೆಲುವು ಸಾಧಿಸಿದರೆ,ಮಂಜುಳ ಮಹೇಶ್ 9 ಮತಗಳ ಪಡೆದುಕೊಂಡು ಒಂದು ಮತದ ಅಂತರದಿಂದ ಪರಾಭವಗೊಂಡರು.
ಚುನಾವಣಾಧಿಕಾರಿಯಾಗಿ ಪಶುವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎ.ಎಸ್.ದೇವರಾಜು, ಸಹ ಚುನಾವಣಾಧಿಕಾರಿಗಳಾಗಿ ಗ್ರಾ.ಪಂ. ಪಿ.ಡಿ.ಓ ಬಿ.ಎಸ್.ಶಿವಸ್ವಾಮಿ ಮತ್ತು ತಾ.ಪಂ.ವ್ಯವಸ್ಥಾಪಕ ಅನಿಲ್‌ಬಾಬು ಅವರು ಕಾರ್ಯನಿರ್ವಹಿಸಿದರು.
ನೂತನವಾಗಿ ಆಯ್ಕೆಯಾದ ಉಪಾಧ್ಯಕ್ಷರನ್ನು ತಾಲ್ಲೂಕು ಜೆಡಿಎಸ್ ಉಪಾಧ್ಯಕ್ಷ ಸಂಗಾಪುರ ಪುಟ್ಟಸ್ವಾಮೀಗೌಡ ಅಭಿನಂದಿಸಿ ಮಾತನಾಡಿ, ಸ್ಥಳೀಯ ಸರ್ಕಾರವಾಗಿರುವ ಗ್ರಾಮ ಪಂಚಾಯಿತಿಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಎಂದರೆ ಪವಿತ್ರ ಸ್ಥಾನವಾಗಿದೆ. ಇದರ ಜವಾಬ್ದಾರಿ ಅರಿತು ಅಧ್ಯಕ್ಷರು-ಉಪಾಧ್ಯಕ್ಷರು ಹಾಗೂ ಸದಸ್ಯರು ಕರ್ತವ್ಯ ನಿರ್ವಹಿಸಬೇಕು.ರಾಜಕಾರಣ, ಪಕ್ಷವನ್ನು ಬದಿಗೊತ್ತಿ ಪಕ್ಷಾತೀತವಾಗಿ ಸರ್ವ ಸದಸ್ಯರನ್ನು ವಿಶ್ವಾಸವನ್ನು ಗಳಿಸಿ ಪಂಚಾಯತಿ ವ್ಯಾಪ್ತಿಗೆ ಬರುವ ಹಳ್ಳಿಗಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.
ನೂತನ ಉಪಾಧ್ಯಕ್ಷ ಎಸ್.ಎಂ ಕಾಂತರಾಜು ಮಾತನಾಡಿ, ಮುಖಂಡರು ಹಾಗೂ ಸದಸ್ಯರು ನನಗೆ ಜವಾಬ್ದಾರಿಯನ್ನು ಕೊಟ್ಟಿದ್ದಾರೆ.ನಿಮ್ಮ ಜವಾಬ್ದಾರಿಗೆ ಯಾವುದೇ ತರದ ಭಿನ್ನಾಭಿಪ್ರಾಯ ಬರದಂತೆ ನಿಮ್ಮೆಲ್ಲರ ವಿಶ್ವಾಸ ಮತ್ತು ಮಾರ್ಗದರ್ಶನ ಪಡೆದು ಪಂಚಾಯಿತಿಯ ಅಭಿವೃದ್ಧಿ ಕೆಲಸವನ್ನು ಮಾಡುತ್ತೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷೆ ಜಯಲಕ್ಷ್ಮಮ್ಮ, ಸದಸ್ಯರಾದ ರೇಖಾ ಲೋಕೇಶ್,ಡಿ.ಎಸ್ ಕೋಕಿಲಾ, ರಾಜಮ್ಮ, ಆರತಿ, ಅಂಜನಿಗೌಡ ಕೆ. ಹೆಚ್, ಮಂಜುಳ, ಪ್ರಕಾಶ ಪಿ.ಸಿ, ಪಿ.ಸಿ ರವಿಶಂಕರ್,ಜೆ. ಚಂದ್ರಯ್ಯ, ಗಣೇಶ್, ಎ.ಆರ್, ಎಸ್. ಬಿ ನಾರಯಣಯ್ಯ, ಮಹದೇವಮ್ಮ, ಉಮೇಶ್, ಲಕ್ಷಮ್ಮ, ರಾಮಕೃಷ್ಣೇಗೌಡ ಎಂ.ಕೆ.ನಿoಗರಾಜ್, ಲತಾಮಣಿ,ಜೆಡಿಎಸ್ ಮುಖಂಡರಾದ ಬೆಳತೂರು ಪುಟ್ಟೇಗೌಡ, ಜೆಡಿಎಸ್ ತಾಲ್ಲೂಕು ಉಪಾಧ್ಯಕ್ಷ ಸಂಗಾಪುರ ಪುಟ್ಟಸ್ವಾಮಿಗೌಡ, ಗ್ರಾ.ಪಂ.ಮಾಜಿ ಅಧ್ಯಕ್ಷ ನಿಂಗರಾಜೇಗೌಡ, ಮಾಜಿ ಗ್ರಾ. ಪಂ ಸದಸ್ಯ ಮಾಹೇದೇವ್, ಸೋಮನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ಕೆ ಸಿದ್ದೇಗೌಡ, ನಿರ್ದೇಶಕ ಭೋಜರಾಜು, ದ್ಯಾವಪ್ಪ, ಯುವಕ ಮುಖಂಡ ವಿನೋದ್,ಮದನ್ ಪಿಡಿಓ ಶಿವಸ್ವಾಮಿ, ಎಸ್.ಡಿ.ಸಿ ರೇಣುಕಾ ಸೇರಿದಂತೆ ಗ್ರಾಮದ ನೂರಾರು ಮುಖಂಡರು, ಯುವಕರು ಉಪಸ್ಥಿತರಿದ್ದರು.
————--ಶ್ರೀನಿವಾಸ್ ಕೆ.ಆರ್ ಪೇಟೆ