ಕೆ.ಆರ್.ಪೇಟೆ-ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಸೋಮನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಭೋಜರಾಜು ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಹಿಂದಿನ ಅಧ್ಯಕ್ಷರಾದ ಎಸ್.ಕೆ.ಸಿದ್ದೇಗೌಡ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಭೋಜರಾಜು ಹೊರತು ಪಡಿಸಿ ಬೇರೆ ಯಾವುದೇ ನಿರ್ದೇಶಕರು ನಾಮಪತ್ರ ಸಲ್ಲಿಸದೇ ಇರುವ ಕಾರಣ ಭೋಜರಾಜು ಅಧ್ಯಕ್ಷರಾಗಿ ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾದ್ದಾರೆ ಎಂದು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ತಾಲ್ಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಹೆಚ್.ಬಿ.ಭರತ್ ಕುಮಾರ್ ಘೋಷಣೆ ಮಾಡಿದರು.
ನೂತನ ಅಧ್ಯಕ್ಷರಾದ ಬೋಜರಾಜು ಅವರನ್ನು ಮನ್‌ಮುಲ್ ನಿರ್ದೇಶಕ ಡಾಲು ರವಿ, ಮನ್ ಮುಲ್ ಮಾಜಿ ಅಧ್ಯಕ್ಷ ಎಂ.ಬಿ.ಹರೀಶ್, ಸಂಘದ ಉಪಾಧ್ಯಕ್ಷ ದೇವರಾಜಯ್ಯ, ನಿರ್ದೇಶಕ ರುಗಳಾದ ಎಸ್ ಕೆ ಸಿದ್ದೇಗೌಡ ,ದೇವರಾಜಯ್ಯ, ಎ.ಪಿ.ಮಧುಸೂದನ್, ಪಿ ಎಂ ಶಿವಪ್ಪ, ನಾರಾಯ ಣಗೌಡ, ಪಿ ಪಿ ಶಶಿಕುಮಾರ್, ಎಸ್.ಪಿ.ರತ್ನಮ್ಮ, ಈರೇಗೌಡ, ಎ ಎಸ್ ಪರಮೇಶ್, ಯಜಮಾನ್ ವೆಂಕಟೇಶ್, ಎಸ್ ಪಿ ಸಿದ್ದೇಗೌಡ, ದೇವರಾಜಣ್ಣ ದೊಡ್ಡಟ್ಟಿ,ಸ್ವಾಮೀಗೌಡ ಎಸ್.ಡಿ, ದೇವರಾಜು ಪಿ. ಎಂ, ಮಂಜುನಾಥ್ ಪಿ ಎಂ, ಕಾಳೇಗೌಡ ದ್ಯಾವೇಗೌಡ, ಹೋರಿ ಗೋವಿಂದೇಗೌಡ,ಮಧು, ಮಾಂಬಳ್ಳಿ ಜಯರಾಮ್, ವಿಜಯ್ ಆರಾಧ್ಯ, ಶಾಂತಕುಮಾರ್, ಚಿಕ್ಕೇಗೌಡ, ಕಾಶಿಆರಾಧ್ಯ, ಎಸ್.ಕೆ.ಕಾಳೇಗೌಡ, ಕಾರ್ಯದರ್ಶಿ ಮಂಜೇಗೌಡ, ಇತರರು ಅಭಿನಂದಿಸಿದರು.
ನೂತನ ಅಧ್ಯಕ್ಷ ಭೋಜರಾಜು ಮಾತನಾಡಿ ಸಂಘದ ಅಧ್ಯಕ್ಷ ಸ್ಥಾನಕ್ಕೆ ನನ್ನನ್ನು ಅವಿರೋಧವಾಗಿ ಆಯ್ಕೆ ಮಾಡಿದ ಎಲ್ಲಾ ನಿರ್ದೇಶಕರು ಹಾಗೂ ಎಲ್ಲಾ ಮುಖಂಡರಿಗೂ ಆಭಾರಿಯಾಗಿದ್ದೇನೆ. ನನಗೆ ಸಿಕ್ಕಿರುವ ಅಧಿಕಾರದ ಅವಧಿಯಲ್ಲಿ ಸಂಘದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಸ್ಪಂಧಿಸುತ್ತೇನೆ. ಸಂಘದಿoದ ಪಡೆದ ಸಾಲವನ್ನು ರೈತರು ಸಕಾಲದಲ್ಲಿ ಮರುಪಾವತಿ ಮಾಡಬೇಕು. ಸಂಘವು ನೀಡುವ ಶೂನ್ಯ ಬಡ್ಡಿ ದರದ ಸಾಲವನ್ನು ಸದುಪಯೋಗ ಪಡಿಸಿಕೊಂಡು ಖಾಸಗಿ ಸಾಲದಿಂದ ಮುಕ್ತಿ ಪಡೆದುಕೊಳ್ಳಬೇಕು ಎಂದು ರೈತ ಭಾಂದವರಲ್ಲಿ ಮನವಿ ಮಾಡಿದರು.
———————––ಶ್ರೀನಿವಾಸ್ ಆರ್