ಕೆ.ಆರ್.ಪೇಟೆ-ಸಹಕಾರ ಸಂಘಗಳು ರೈತರ ಜೀವನಾಡಿಯಾಗಿವೆ-ಸಹಕಾರ ಸಂಘಗಳಲ್ಲಿ ರಾಜಕೀಯ ಬೆರೆಸದೆ ಅಭಿವೃದ್ಧಿಗೆ ಕೈಜೋಡಿಸಬೇಕು-ಹೆಚ್.ಕೆ.ಅಶೋಕ್

ಕೆ.ಆರ್.ಪೇಟೆ:ಸಹಕಾರ ಸಂಘಗಳು ರೈತರ ಜೀವನಾಡಿಯಾಗಿವೆ.ಹಾಗಾಗಿ ಸಹಕಾರ ಸಂಘಗಳಲ್ಲಿ ರಾಜಕೀಯ ಬೆರೆಸದೆ ಅವುಗಳ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು.ದೇಶದಲ್ಲಿಯೇ ಪ್ರಪ್ರಥಮ ಭಾರಿಗೆ ಸಹಕಾರ ಸಂಘಗಳ ಮೂಲಕ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುವ ವ್ಯವಸ್ಥೆಯನ್ನು ಪ್ರಧಾನಿಗಳಾಗಿದ್ದ ಹೆಚ್.ಡಿ.ದೇವೇಗೌಡರು ಜಾರಿಗೆ ತಂದರು.ಇದೇ ವ್ಯವಸ್ಥೆಯನ್ನು ಇಂದಿಗೂ ಮುಂದುವರೆಸಲಾಗಿದೆ. ಹಾಗಾಗಿ ರೈತ ಬಾಂಧವರು ಸಹಕಾರ ಸಂಘದಲ್ಲಿ ಶೇರುದಾರರಾಗುವ ಮೂಲಕ ಸಾಲ ಸೌಲಭ್ಯ ಪಡೆದುಕೊಂಡು ಖಾಸಗಿ ಸಾಲದಿಂದ ಮುಕ್ತಿ ಪಡೆಯಬೇಕು ಎಂದು ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾದ ಹೆಚ್.ಕೆ.ಅಶೋಕ್ ಹೇಳಿದರು.

ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಅಘಲಯ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2023-24ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಯು ಸಂಘದ ಅಧ್ಯಕ್ಷರಾದ ಆಶಾನಾಗೇಂದ್ರ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ಎ.ಎನ್.ಜಾನಕೀರಾಂ ಮಾತನಾಡಿ,ತಾಲ್ಲೂಕಿನಲ್ಲಿ ಅಘಲಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಉತ್ತಮ ವಹಿವಾಟು ನಡೆಸುವ ಮೂಲಕ ಒಳ್ಳೆಯ ಹೆಸರು ಗಳಿಸಿದೆ.ಸಂಘದ ಶೇರುದಾರರು ಹಾಗೂ ಮಹಿಳಾ ಸ್ವಸಹಾಯ ಸಂಘಗಳು ಸಂಘದ ಬ್ಯಾಂಕಿoಗ್ ಶಾಖೆಯಲ್ಲಿ ಉಳಿತಾಯ ಖಾತೆ ತೆರೆದು ವ್ಯವಹಾರ ಮಾಡಬೇಕು.ಮಹಿಳಾ ಸಂಘಗಳಿಗೂ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಲಾಗುವುದು.ಇದನ್ನು ಮಹಿಳೆಯರು ಸದುಪಯೋಗಪಡಿಸಿಕೊಂಡು ಆರ್ಥಿಕ ಪ್ರಗತಿ ಸಾಧಿಸಬೇಕು ಎಂದು ಮನವಿ ಮಾಡಿದರು.

ಸಂಘದ ಅಧ್ಯಕ್ಷೆ ಅಶಾನಾಗೇಂದ್ರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದರು.

ಸಂಘದ ಕಾರ್ಯನಿರ್ವಹಣಾಧಿಕಾರಿ ಎ.ಮುರುಳೀಧರ್ ಸಂಘದ 2023-24ನೇ ಸಾಲಿನ ಆಡಿಟ್ ವರದಿ ಮಂಡಿಸಿ ಶೇರುದಾರರ ಪ್ರಶ್ನೆಗಳಿಗೆ ಉತ್ತರಿಸಿ ಸಂಘದ 2024-25ಸಾಲಿನ ಬಜೆಟ್ ಓದಿ ಮಹಾಸಭೆಯ ಅನುಮೋದನೆ ಪಡೆದರು.

ಕಾರ್ಯಕ್ರಮದಲ್ಲಿ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಎ.ಎನ್.ಜಾನಕೀರಾಂ,ಪಿ.ಎಲ್.ಡಿ.ಬ್ಯಾಂಕ್ ಮಾಜಿ ಅಧ್ಯಕ್ಷ ಎ.ಎಸ್.ರಮೇಶ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಯೋಗೇಶ್, ಮಾಜಿ ಗ್ರಾ.ಪಂ.ಅಧ್ಯಕ್ಷರಾದ ಹೋಬಳಿ ಲೋಕೇಶ್, ವನಿತಾಶಂಕರೇಗೌಡ, ಹಿರಿಯ ಸಹಕಾರಿ ಧುರೀಣರಾದ ಧರಣಿ ಶಿವನಂಜೇಗೌಡ,ಸಂಘದ ಉಪಾಧ್ಯಕ್ಷ ನಾಗರಘಟ್ಟ ಮಂಜು, ನಿರ್ದೇಶಕರಾದ ಮಂಜಮ್ಮ,ದೇವಮ್ಮ, ಎನ್.ಎಸ್.ಮಂಜೇಗೌಡ,ಎನ್.ಡಿ.ಕೃಷ್ಣಸಿಂಗ್,ರಾಜೇಗೌಡ ಉರುಫ್ ಯೋಗೇಗೌಡ,ಪಾರ್ಥಸಾರಥಿ ನಾರಾಯಣಪುರ ಮಂಜುನಾಥ್, ಎನ್.ಡಿ.ರಾಮೇಗೌಡ, ಅಘಲಯ ಡೇರಿ ಅಧ್ಯಕ್ಷ ಜಾನಕೀರಾಂ,ಮುಖಂಡರಾದ ಸಂಪತ್ತು,ಶ್ಯಾಮಣ್ಣ,ಮಹದೇವೇಗೌಡ,ಸಂಘದ ಸಿಇಓ ಮುರುಳೀಧರ್,ಸಂಘದ ಮಾರಾಟ ಗುಮಾಸ್ತರಾದ ಎ.ಸಿ.ರಾಜೇಶ್,ರಾಮೇಗೌಡ ಮತ್ತಿತರರು ಸೇರಿದಂತೆ ಗ್ರಾಮ ಮುಖಂಡರು ಹಾಗೂ ನೂರಾರು ಶೇರುದಾರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ಸಾಲ ವಸೂಲಾತಿಯಲ್ಲಿ ಶೇ.100ರಷ್ಟು ಪ್ರಗತಿ ಸಾಧಿಸಿರುವ ಅಘಲಯ ಸಂಘಕ್ಕೆ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಹೆಚ್.ಕೆ.ಅಶೋಕ್ ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಯನ್ನು ಸಂಘದ ಅಧ್ಯಕ್ಷೆ ಆಶಾನಾಗೇಂದ್ರ ಹಾಗೂ ಸಿಇಓ ಮುರುಳೀಧರ್ ಅವರಿಗೆ ವಿತರಣೆ ಮಾಡಿದರು.

———–ಶ್ರೀನಿವಾಸ್ ಕೆ ಆರ್ ಪೇಟೆ

Leave a Reply

Your email address will not be published. Required fields are marked *

× How can I help you?