ಕೆ.ಆರ್.ಪೇಟೆ- ತಾಲ್ಲೂಕಿನ ಅಘಲಯ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಕಾಂಗ್ರೆಸ್-ಬಿಜೆಪಿ ಮೈತ್ರಿ ಪಕ್ಷದ ಅಭ್ಯರ್ಥಿಗಳು 13ಸ್ಥಾನಗಳ ಪೈಕಿ 11ಸ್ಥಾನಗಳಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಜೆಡಿಎಸ್ ಕೇವಲ 2 ಸ್ಥಾನಗಳನ್ನು ಪಡೆದುಕೊಂಡಿದೆ. ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ಎ.ಎಸ್.ಶ್ರೀಧರ್(434), ಎ.ವೈ.ವಿಜಯ್‌ಕುಮಾರ್(392), ಎನ್.ಎಸ್.ಮಂಜೇಗೌಡ (349), ಎನ್.ಆರ್.ರಾಮೇಗೌಡ(344), ಮಂಜುನಾಥ್(343), ಬಿಸಿಎಂಎ. ಮೀಸಲು ಕ್ಷೇತ್ರದಿಂದ ಕೃಷ್ಣೇಗೌಡ(346), ಬಿಸಿಎಂಬಿ ಮೀಸಲು ಕ್ಷೇತ್ರದಿಂದ ಡಿ.ಆರ್.ಕುಮಾರಸ್ವಾಮಿ(369), ನಾಗಮ್ಮ(362) ಚಂದ್ರಿಕಾ(323), , ಮಂಜು(292), ಮತಗಳನ್ನು ಪಡೆದು ಭರ್ಜರಿ ಗೆಲುವು ಸಾಧಿಸಿದ್ದಾರೆ.
ಎಸ್.ಟಿ.ಮೀಸಲು ಕ್ಷೇತ್ರದಿಂದ ದೇವಮ್ಮ ಅವಿರೋಧ ಆಯ್ಕೆಯಾಗಿದ್ದಾರೆ. ಸಾಲಗಾರರಲ್ಲದ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ರಾಜೇಶ್ 240ಮತಗಳನ್ನು ಪಡೆದು ಜಯ ಸಾಧಿಸಿದ್ದಾರೆ. ಪ್ರತಿಸ್ಪರ್ಧಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಅಜಯ್ ರಾಮೇಗೌಡ 233ಮತಗಳನ್ನು ಪಡೆದು ಪರಾಭವ ಗೊಂಡಿದ್ದಾರೆ. ಈ ಪೈಕಿ ಇಬ್ಬರು ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಾದ ಕೃಷ್ಣೇಗೌಡ(346)(ಬಿಸಿಎಂ.ಎ) ಮತ್ತು ಎನ್.ಆರ್.ರಾಮೇಗೌಡ(344) (ಸಾಮಾನ್ಯ ಕ್ಷೇತ್ರ) ಜಯ ಗಳಿಸಿದ್ದಾರೆ.

ಚುನಾವಣಾಧಿಕಾರಿಯಾಗಿ ತಾಲ್ಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಹೆಚ್.ಬಿ.ಭರತ್‌ಕುಮಾರ್ ಕಾರ್ಯನಿರ್ವಹಿಸಿದರು. ಸಹ ಚುನಾವಣಾಧಿಕಾರಿಯಾಗಿ ಸಂಘದ ಕಾರ್ಯದರ್ಶಿ ಮುರುಳೀಧರ್ ಕಾರ್ಯನಿರ್ವಹಣೆ ಮಾಡಿದರು.
ನೂತನ ನಿರ್ದೇಶಕರನ್ನು ಜಿ.ಪಂ.ಮಾಜಿ ಸದಸ್ಯ ಮಂಜುನಾಥ್, ಪಿ.ಎಲ್.ಡಿ.ಬ್ಯಾಂಕ್ ಮಾಜಿ ಅಧ್ಯಕ್ಷ ಎ.ಎಸ್.ರಮೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ಮಹಡಿಮನೆ ಮಂಜಣ್ಣ, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಎ.ಎಸ್.ಶ್ರೀಧರ್, ಎ.ವೈ.ವಿಜಯ್‌ಕುಮಾರ್ ಇತರರು ಅಭಿನಂದಿಸಿ ಮಾತನಾಡಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎ.ಎಸ್.ಮಂಜುನಾಥ್ ಮಾತನಾಡಿ ನಮ್ಮ ಅಘಲಯ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವ್ಯಾಪ್ತಿಯ ಎಲ್ಲಾ ಶೇರುದಾರರಿಗೆ ಈ ಗೆಲುವನ್ನು ಅರ್ಪಿಸುತ್ತೇನೆ. ನಮ್ಮ ಕಾಂಗ್ರೆಸ್ ಮತ್ತು ಬಿಜೆಪಿ ಮೈತ್ರಿ ಮುಖಂಡರ ಮೇಲೆ ವಿಶ್ವಾಸವಿಟ್ಟು ಬರೋಬ್ಬರಿ 11ಸ್ಥಾನಗಳನ್ನು ಗೆಲ್ಲಿಸಿಕೊಟ್ಟಿದ್ದೀರಿ. ಈ ಗೆಲುವಿಗೆ ಸಹಕಾರ ನೀಡಿದ ಸಂಘದ ವ್ಯಾಪ್ತಿಯ ಎಲ್ಲಾ 14 ಗ್ರಾಮಗಳ ಮುಖಂಡರಿಗೂ ಮತದಾರರಿಗೂ ಚಿರಋಣಿಯಾಗಿರುತ್ತೇವೆ. ನಿಮ್ಮ ವಿಶ್ವಾಸಕ್ಕೆ ದಕ್ಕೆ ಬಾರದಂತೆ ಸಂಘದ ಅಧಿಕಾರವನ್ನು ಮುನ್ನಡೆಸುವ ಮೂಲಕ ಸಂಘದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುವಂತೆ ನೂತನ ನಿರ್ದೇಶಕರಿಗೆ ಅಘಲಯ ಎ.ಎಸ್.ಮಂಜುನಾಥ್ ಸಲಹೆ ನೀಡಿದರು.
- ಮನು