ಕೆ.ಆರ್.ಪೇಟೆ-ತಾಲ್ಲೂಕಿನ ಶೀಳನೆರೆ ಹೋಬಳಿಯ ತೆಂಡೇಕೆರೆ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷರಾಗಿ ಮಲ್ಕೋನಹಳ್ಳಿ ಸವಿತ ಗೋವಿಂದಶೆಟ್ಟಿ ಅವರು ಅವಿರೋಧವಾಗಿ ಆಯ್ಕೆಯಾದರು.
ಗ್ರಾ.ಪಂ.ನ ಈ ಹಿಂದಿನ ಅಧ್ಯಕ್ಷರಾದ ಶ್ರೀನಿವಾಸ್ ರವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನ ಬಯಸಿ ಸವಿತ ಗೋವಿಂದಶೆಟ್ಟಿ ಹೊರತುಪಡಿಸಿ ಉಳಿದ ಯಾವ ಸದಸ್ಯರು ನಾಮಪತ್ರ ಸಲ್ಲಿಸದೇ ಇರುವ ಕಾರಣ ಅವಿರೋಧ ಆಯ್ಕೆ ನಡೆಯಿತು.
ಚುನಾವಣಾಧಿಕಾರಿಯಾಗಿ ಸಮಾಜ ಕಲ್ಯಾಣ ಅಧಿಕಾರಿ ಡಾ.ದಿವಾಕರ್ ,ಸಹ ಚುನಾವಣಾಧಿಕಾರಿಯಾಗಿ ಪಿಡಿಓ ಸತೀಶ್‌ಕುಮಾರ್ ಕಾರ್ಯನಿರ್ವಹಿಸಿದರು.
ನೂತನ ಅಧ್ಯಕ್ಷೆ ಸವಿತಾಗೋವಿಂದಶೆಟ್ಟಿ ಮಾತನಾಡಿ, ನನ್ನನ್ನು ಅವಿರೋಧವಾಗಿ ಆಯ್ಕೆ ಮಾಡಿರುವ ಎಲ್ಲಾ ಗ್ರಾಮ ಪಂಚಾಯಿತಿ ಸದಸ್ಯರಿಗೂ ಅಭಿನಂದನೆ ತಿಳಿಸುತ್ತೇನೆ. ಎಲ್ಲಾ ಸದಸ್ಯರನ್ನು ಒಗ್ಗೂಡಿಸಿಕೊಂಡು ಉತ್ತಮ ಕೆಲಸ ಮಾಡುತ್ತೇನೆ. ಪ್ರತಿ ಹಳ್ಳಿ ಹಳ್ಳಿಗಳಿಗೂ ಶುದ್ದ ಕುಡಿಯುವ ನೀರು, ಚರಂಡಿ ಸ್ವಚ್ಚತೆ, ಬೀದಿ ದೀಪ, ಸೇರಿದಂತೆ ಎಲ್ಲಾ ಮೂಲಭೂತ ಸೌಲಭ್ಯವನ್ನು ಒದಗಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಜೊತೆಗೆ ನರೇಗಾ ಯೋಜನೆ ಅಡಿಯಲ್ಲಿ ಕೈಗೊಳ್ಳಬಹುದಾದ ಜಾನುವಾರು ಕೊಟ್ಟಿಗೆ, ಶೌಚಾಲಯ, ಜಾನುವಾರು ಕುಡಿಯುವ ನೀರಿನ ತೊಟ್ಟಿ, ರೈತರ ಒಕ್ಕಣೆ ಕಣ ನಿರ್ಮಾಣ, ಚೆಕ್ ಡ್ಯಾಂ ನಿರ್ಮಾಣ, ಜಮೀನಿಗೆ ಹೋಗುವ ಬಂಡಿ ರಸ್ತೆಗಳ ಅಭಿವೃದ್ದಿ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಒದಗಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಯಾವುದೇ ಕುಂದುಕೊರತೆ ಕಂಡು ಬಂದರೂ ತಕ್ಷಣ ಸ್ಪಂಧಿಸುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ನಾಗರತ್ನಗಂಗಾಧರ್, ಪಂಚಾಯತ್ ಅಭಿವೃದ್ದಿ ಅಧಿಕಾರಿ ಸತೀಶ್ ಕುಮಾರ್, ಕಾರ್ಯದರ್ಶಿ ಕೆ.ಎಸ್.ಕುಮಾರ್, ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀನಿವಾಸ್, ಎ.ಎನ್.ಶಿವಲಿಂಗ, ಎ.ಎಂ.ರಾಜು, ಸೌಭಾಗ್ಯ, ಕೆ.ಜೆ.ಹೇಮಕುಮಾರ್, ಶಿಲ್ಪಾಶೇಖರ್, ಜಯಮ್ಮ ಸಣ್ಣೇಗೌಡ, ಕೆ.ರವಿಕುಮಾರ್, ಗಂಗಮ್ಮಕುಮಾರ್, ಜ್ಯೋತಿಬಸವರಾಜು, ಸವಿತ.ಬಿ.ಇಂದ್ರೇಶ್, ಎಂ.ಆರ್.ರoಗರಾಜು, ರೋಹಿಣಿಮಹೇಶ್, ಹೆಚ್.ಎಂ.ಕಾoತರಾಜು, ಸ್ವಾಮೀಗೌಡ, ಬಿಲ್ ಕಲೆಕ್ಟರ್ ಗೋವಿಂದಶೆಟ್ಟಿ, ಕಂಪ್ಯೂಟರ್ ಆಪರೇಟರ್ ಜಗದೀಶ್, ಸುಮಲತಾ, ನೌಕರರಾದ ರಂಗಸ್ವಾಮಿ, ನೀರು ನಿರ್ವಾಹಕರಾದ ನಾಗೇಂದ್ರ, ಬೈರೇಗೌಡ, ಗೋವಿಂದಶೆಟ್ಟಿ, ಅನು, ಅಭಿ, ಚಂದ್ರ,ಇoದ್ರೇಶ್ ಶಶಾಂಕ್, ಪ್ರಭಾವತಿ,ಮಲ್ಲಿಕಾ, ಗ್ರಂಥಾಲಯ ಮೇಲ್ವಿಚಾರಕ ಕುಮಾರ್, ಸೇರಿದಂತೆ ಹಲವಾರು ಗ್ರಾಮಸ್ಥರು ಉಪಸ್ಥಿತರಿದ್ದರು.
—————-ವರದಿ-ಶ್ರೀನಿವಾಸ್ ಕೆ ಆರ್ ಪೇಟೆ