ಕೆ.ಆರ್.ಪೇಟೆ: ದೇವಾಲಯಗಳು ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಪ್ರತಿಬಿಂಬವಾಗಿವೆ. ಇವುಗಳನ್ನು ಉಳಿಸಿ, ಸಂರಕ್ಷಿಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯ, ಇಂತಹ ದಿಕ್ಕಿನಲ್ಲಿ ಬೋಳಮಾರನಹಳ್ಳಿ ಶ್ರೀ ಲಕ್ಷ್ಮಿದೇವಿಯ ದೇವಾಲಯ ಉದ್ಘಾಟನೆ ಮಹೋತ್ಸವದ ಕಾರ್ಯ ಶ್ಲಾಘನೀಯ ಎಂದು ಲೋಕಸಭಾ ಸದಸ್ಯರಾದ ಡಾ:ಸಿ.ಎನ್ ಮಂಜುನಾಥ್ ಹೇಳಿದರು.
ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ಬೋಳಮಾರನಹಳ್ಳಿ ಗ್ರಾಮದ ಶ್ರೀ ಲಕ್ಷ್ಮಿದೇವಿ ದೇವಾಲಯ ಉದ್ಘಾಟನೆ ಸಮಾರಂಭ ಹಾಗೂ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಹಿತಿಹಾಸ ಹೊಂದಿರುವ ಬೋಳಮಾರನಹಳ್ಳಿ ಗ್ರಾಮ ಧಾರ್ಮಿಕ ಚಟುವಟಿಕೆಗಳ ಕೇಂದ್ರವಾಗಿದೆ. ದೇವಾಲಯ ದಾನಿಗಳ ನೆರವಿನಿಂದ ಇಂದು ಜೀರ್ಣೋದ್ದಾರವನ್ನು ಅದ್ಧೂರಿಯಾಗಿ ಮಾಡಿರುವುದು ಶ್ಲಾಘನೀಯ. ಪ್ರತಿಯೊಬ್ಬರು ದೇವರು ಮತ್ತು ಧಾರ್ಮಿಕ ಚಿಂತನೆಯನ್ನು ಅಳವಡಿಸಿಕೊಳ್ಳಬೇಕು.ಬಡವರ ಗುರು-ಹಿರಿಯರ ಸೇವೆ ಮಾಡಬೇಕು, ಸದಾ ಒಳ್ಳೆಯ ಆಲೋಚನೆಗಳನ್ನು ಮಾಡಬೇಕು, ಸಾಧ್ಯವಾದರೆ ಇತರರಿಗೆ ಒಳ್ಳೆಯದನ್ನು ಮಾಡಿ, ಕೆಟ್ಟದ್ದನ್ನು ಮಾಡದಂತೆ ಹೇಳಿದರು. ಧಾರ್ಮಿಕ ಚಿಂತನೆಗಳಿಂದ ಮನಸ್ಸಿಗೆ ನೆಮ್ಮದಿ ಮತ್ತು ಶಾಂತಿ ದೊರೆಯಲು ಸಾಧ್ಯವಿದೆ. ಮಾನವ ಜನ್ಮ ಶ್ರೇಷ್ಠವಾದುದು. ಇದನ್ನು ಸದುಪಯೋಗಪಡಿಸಿಕೊಳ್ಳಬೇಕು, ದಾನ-ಧರ್ಮ ಮಾಡುವ ಮೂಲಕ ಶ್ರೇಷ್ಠ ವ್ಯಕ್ತಿಗಳಾಗಿ ಹೊರಹೊಮ್ಮಬೇಕು ಹಾಗೂ ಮೊಬೈಲ್ ಯುವ ಸಮುದಾಯಕ್ಕೆ ಮಾರಕ. ಯುವಕರು ಇದರ ಗೀಳು ಬಿಟ್ಟು ಪರಿಶ್ರಮಪಟ್ಟು ಅಧ್ಯಯನ ಮಾಡಬೇಕು. ದುಶ್ಚಟಗಳಿಂದ ದೂರವಿದ್ದು, ಮಾದರಿ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.

ಮಾಜಿ ಸಚಿವ ಮತ್ತು ಶಾಸಕ ಹೆಚ್.ಡಿ ರೇವಣ್ಣ ಮಾತನಾಡಿ ಈ ಗ್ರಾಮದ ರಸ್ತೆ ಮತ್ತು ಚರಂಡಿ ಅಭಿವೃದ್ಧಿಗೆ ವಿಧಾನಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ ಅವರು ಸಾಕಷ್ಟು ಅನುದಾನ ನೀಡಿ ಈ ದೇವಾಲ ನಿರ್ಮಾಣಕ್ಕೂ 30ಲಕ್ಷ ಅನುದಾನ ನೀಡಿದ್ದಾರೆ. ಬೋಳಮಾರನಹಳ್ಳಿ ಗ್ರಾಮದ ಮೇಲೆ ನಮ್ಮ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಕುಟುಂಬದವರು ಇಟ್ಟಿರುವ ಪ್ರೀತಿ ವಿಶ್ವಾಸಕ್ಕೆ ಸಾಕ್ಷಿಯಾಗಿದೆ ಎಂದರು. ನಮ್ಮ ಪೂರ್ವಿಕರು ಬಿಟ್ಟು ಹೋಗಿರುವ ದೇವಾಲಯಗಳನ್ನು ಸಂರಕ್ಷಿಸುವ ಜವಾಬ್ದಾರಿಯು ಪ್ರತಿಯೊಬ್ಬರ ಮೇಲಿದೆ ಎಂಬ ಮನೋಭಾವನೆಯಲ್ಲಿ ಒಗ್ಗಟ್ಟಿನಿಂದ ಶ್ರದ್ಧಾ ಭಕ್ತಿಯಿಂದ ಗ್ರಾಮದಲ್ಲಿ ಶ್ರೀ ಲಕ್ಷ್ಮೀ ದೇವಮ್ಮನವರ ದೇವಾಲಯ ವನ್ನು ನಿರ್ಮಾಣದ ಮೂಲಕ ನಮ್ಮ ಸನಾತನ ಪರಂಪರೆ ಉಳಿವಿಗೆ ಶ್ರಮಿಸಿರುವುದು ನಿಜಕ್ಕೂ ಸಂತೋಷದ ವಿಶೇಷ ಗ್ರಾಮದ ಶ್ರೀ ಲಕ್ಷ್ಮಿದೇವಿ ಜನರಿಗೆ ಅನುಗ್ರಹಿಸಲಿ ಎಂದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಕೊಮ್ಮೆರಹಳ್ಳಿ ವಿಶ್ವಮಾನವ ಕ್ಷೇತ್ರದ ಶ್ರೀ ಪುರುಷೋತ್ತಮಾನಂದ ನಾಥ ಸ್ವಾಮೀಜಿ ಇದರಿಂದ ಹಿರಿಯರಿಗೆ ಗೌರವಿಸುವಂತಾಗು ವುದಲ್ಲದೇ ಮುಂದಿನ ಪೀಳಿಗೆಗಾಗಿ ಕೊಡುಗೆ ನೀಡಿದಂತಾಗುತ್ತದೆ ಎಂದ ಅವರು, ನಮ್ಮಲ್ಲಿ ಎಷ್ಟೆ ಕಷ್ಟ ಕಾರ್ಪಣ್ಯಗಳಿದ್ದರೂ ದೇವಾಲಯ ಗಳಿಗೆ ಒಮ್ಮೆ ಭೇಟಿ ಕೊಟ್ಟರೆ ಆ ದೇವಾಲಯ ಗಳು ಬದುಕಿಗೆ ಹೊಸ ಸಂದೇಶಗಳನ್ನು ನೀಡುತ್ತವೆ. ಯಾವುದೇ ಒಬ್ಬ ವ್ಯಕ್ತಿ ದೇವಾಲಯಗಳಿಗೆ ತೆರಳಿ ದರೆ ಆ ವ್ಯಕ್ತಿಯಲ್ಲಿ ಒಳ್ಳೆಯ ಸದ್ಭಾವನೆಗಳು ಮೂಡುತ್ತವೆ. ಇದು ಮಾತ್ರವಲ್ಲ, ಅವರಲ್ಲಿ ಸಂಸ್ಕಾರ ಸಹ ಮೂಡುತ್ತದೆ ಎಂದರು.

ಆದಿಚುಂಚನಗಿರಿ ಮಹಾ ಸಂಸ್ಥಾನ ಹಾಸನ ಶಾಖಾ ಮಠದ ಶಂಭುನಾಥ ಸ್ವಾಮೀಜಿ ಆಶೀರ್ವಾಚನ ನೀಡಿದರು.
ಈ ಸಂದರ್ಭದಲ್ಲಿ ಚನ್ನರಾಯಪಟ್ಟಣ ಶಾಸಕ ಸಿ.ಎನ್ ಬಾಲಕೃಷ್ಣ,ಎಂ.ಎಲ್.ಸಿ ಸೂರಜ್ ರೇವಣ್ಣ,ರಾಜ್ಯ ಮಾರಾಟ ಮಹಾ ಮಂಡಳಿ ನಿರ್ದೇಶಕ ಚೋಳನಹಳ್ಳಿ ಪುಟ್ಟಸ್ವಾಮಿಗೌಡ,ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್,ಕೆಪಿಸಿಸಿ ಸದಸ್ಯ ಕಿಕ್ಕೇರಿ ಸುರೇಶ್,ಜೆಡಿಎಸ್ ಮುಖಂಡ ಬಿ.ಎಂ ಕಿರಣ್, ಸಚಿನ್ ಚಲುವರಾಯಸ್ವಾಮಿ,ರಾಮೇಗೌಡ,ಜಿ.ಪಂ ಮಾಜಿ ಸದಸ್ಯೆ ಕುಸುಮ ಬಾಲಕೃಷ್ಣ,ಸಮಾಜ ಸೇವಕ ಶಿವಲಿಂಗೇಗೌಡ,ಶ್ರೀನಿವಾಸ್, ಸರ್ವೇ ಮಂಜುನಾಥ್,ಸೇರಿದಂತೆ ಗ್ರಾಮದ ಅಕ್ಕಪಕ್ಕದ ಗ್ರಾಮಸ್ಥರು ಸೇರಿದಂತೆ ಉಪಸ್ಥಿತರಿದ್ದರು.
-ಮನು ಮಾಕವಳ್ಳಿ ಕೆ ಆರ್ ಪೇಟೆ