ಕೆ.ಆರ್.ಪೇಟೆ,ಮೇ.23: ಕಾಶ್ಮೀರದ ಪಹಲ್ಗಾಮ್ ಪ್ರದೇಶದಲ್ಲಿ ಅಮಾಯಕ 26ಮಂದಿ ಹಿಂದೂಗಳನ್ನು ಧರ್ಮವನ್ನು ಕೇಳಿ, ಕೇಳಿ ಹಿಂದೂ ಧರ್ಮಕ್ಕೆ ಸೇರಿದವರು ಎಂಬುದು ಖಚಿತವಾದ ನಂತರ ಹತ್ಯೆ ಮಾಡಿದ ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರ ಕೃತ್ಯದಿಂದ 26 ಮಂದಿ ನಮ್ಮ ಹೆಣ್ಣು ಮಕ್ಕಳು ತಮ್ಮ ಸಿಂಧೂರ ಕಳೆದುಕೊಂಡ ಹಿನ್ನೆಲೆಯಲ್ಲಿ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲು ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿ ಪಾಕಿಸ್ತಾನದ ಸೇನಾ ನೆಲೆಗಳನ್ನು ಧ್ವಂಸ ಮಾಡುವ ಮೂಲಕ ತಮ್ಮ ಶಕ್ತಿಯನ್ನು ಪ್ರದರ್ಶನ ಮಾಡಿದ ನಮ್ಮ ವೀರಯೋಧರಿಗೆ ಬೆಂಬಲ ಸೂಚಿಸಿ ಕೆ.ಆರ್.ಪೇಟೆ ಪಟ್ಟಣದಲ್ಲಿ ಸಾವಿರಾರು ಸಂಖ್ಯೆಯ ದೇಶಪ್ರೇಮಿಗಳು ತಿರಂಗ ಯಾತ್ರೆ ನಡೆಸಿ, 1000ಅಡಿ ಉದ್ದದ ರಾಷ್ಟ್ರ ಧ್ವಜವನ್ನು ಎತ್ತಿಹಿಡಿದು ಬೃಹತ್ ಮೆರವಣಿಗೆ ಮಾಡಿ ನಮ್ಮ ಸೈನಿಕರಿಗೆ ಬೆಂಬಲ ಸೂಚಿಸಿದರು.

ತೆಂಡೇಕೆರೆ ಬಾಳೆಹೊನ್ನೂರು ಶಾಖಾ ಮಠದ ಶ್ರೀ ಗಂಗಾಧರ ಶಿವಾಚಾರ್ಯ ಸ್ವಾಮೀಜಿ, ಕಾಪನಹಳ್ಳಿ ಗವಿಮಠದ ಶ್ರೀ ಸ್ವತಂತ್ರ ಚನ್ನವೀರಯ್ಯ ಸ್ವಾಮೀಜಿ, ವಿಶ್ರಾಂತ ಸೈನಿಕರಾದ ಸುಕುಮಾರ್, ಜಯರಾಮು, ರಾಜ್ಯದ ಮಾಜಿ ಸಚಿವ ಡಾ.ನಾರಾಯಣಗೌಡ, ಮೂಡಾ ಮಾಜಿ ಅಧ್ಯಕ್ಷ ಕೆ. ಶ್ರೀನಿವಾಸ್, ಡಾ.ಎಸ್.ಕೃಷ್ಣಮೂರ್ತಿ, ಮನ್‌ಮುಲ್ ಮಾಜಿ ನಿರ್ದೇಶಕ ಕೆ.ಜಿ.ತಮ್ಮಣ್ಣ, ಸಾರಂಗಿ ನಾಗಣ್ಣ, ಕೆ.ವಿನೋದ್, ನಂದೀಶ್, ಮಿತ್ರ ಗಿರೀಶ್, ಬಸ್ ಸಂತೋಷ್, ಪ್ರಮೋದ್, ಶೀಳನೆರೆ ಭರತ್, ಭಾರತೀಪುರ ಪುಟ್ಟಣ್ಣ, ಶ್ರೀನಿವಾಸ್, ಕಟ್ಟೆ ಪಾಪಣ್ಣ, ಚೋಕನಹಳ್ಳಿ ಪ್ರಕಾಶ್, ವಿಶ್ರಾಂತ ಸೈನಿಕರಾದ ಸುಕುಮಾರ್, ಮೈಲಾರಪಟ್ಟಣ ಜಯರಾಮ್ ಅವರು ಕೆ.ಆರ್.ಪೇಟೆ ಪಟ್ಟಣದ ಪ್ರವಾಸಿ ಮಂದಿರದ ಆವರಣದಿಂದ ಆರಂಭವಾದ ತಿರಂಗಾ ಯಾತ್ರೆಗೆ ಚಾಲನೆ ನೀಡಿದರು.

ಭಾರತದ ವಿರುದ್ಧ ಪದೇ ಪದೇ ಹೀಯಕೃತ್ಯ ಮಾಡುತ್ತಾ ಅಮಾಯಕರನ್ನು ಕೊಲ್ಲುತ್ತಿರುವ ಪಾಪಿ ಪಾಕಿಸ್ಥಾನದ ವಿರುದ್ಧ ಭಾರತೀಯ ಸೈನಿಕರು ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿ ಶತ್ರು ಸೈನಿಕರನ್ನು ಬಗ್ಗು ಬಡಿದ ಹಿನ್ನೆಲೆಯಲ್ಲಿ ತಿರಂಗಾ ಯಾತ್ರೆ ನಡೆಸಿ ಸೈನಿಕರೊಂದಿಗೆ ನಾವಿದ್ದೇವೆ ಎಂಬ ಸಂದೇಶವನ್ನು ನಮ್ಮ ಯೋಧರಿಗೆ ತಿಳಿಸಲಾಯಿತು.
300ಮೀಟರ್(1000ಅಡಿ) ಉದ್ದದ ರಾಷ್ಟçಧ್ವಜವನ್ನು ಎತ್ತಿ ಹಿಡಿದು ಭಾರತ್ ಮಾತಾಕಿ ಜೈ, ನಮ್ಮ ದೇಶದ ಸೈನಿಕರಿಗೆ ಶುಭವಾಗಲಿ ಎಂದು ಜಯ ಘೋಷಗಳನ್ನು ಕೂಗುತ್ತಾ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಸಂಭ್ರಮಿಸಿದ ಕದಂಬ ಪಿ.ಯು.ಕಾಲೇಜಿನ ವಿದ್ಯಾರ್ಥಿಗಳು, ಸ್ಕಾಲರ್ ಪಿ.ಯು, ಕ್ರೆöÊಸ್ತಕಿಂಗ್ ಪಿಯು ಕಾಲೇಜು, ಎಸ್.ಎಸ್.ಕೆ.ಸಿ ಕಾಲೇಜು, ಬಿಜಿಎಸ್, ಇಂಜಿನಿಯರಂಗ್ ಕಾಲೇಜು ಸೇರಿದಂತ ವಿವಿಧ ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ತಿರಂಗ ಯಾತ್ರೆಯಲ್ಲಿ ಭಾಗವಹಿಸಿ ಭಾರತಾಂಭೆಗೆ ಜೈ, ನಮ್ಮ ದೇಶದ ಸೈನಿಕರಿಗೆ ಜೈ ಎಂದು ಘೋಷಣೆಗಳನ್ನು ಕೂಗುತ್ತಾ ತಿರಂಗಾ ಯಾತ್ರೆ ನಡೆಸಿದ ಪಟ್ಟಣದ ನಿವಾಸಿಗಳು, ವಿದ್ಯಾರ್ಥಿಗಳು ಹಾಗೂ ಯುವ ಜನರು ಭಾರತ್ ಮಾತಾಕಿ ಜೈ ಎಂದು ಸಂಭ್ರಮಿಸಿದರು.

ಪಟ್ಟಣದ ಮುಖ್ಯ ರಸ್ತೆಯಲ್ಲಿ ರಾಷ್ಟ್ರ ಧ್ವಜವನ್ನು ಕೈಯಲ್ಲಿ ಎತ್ತಿ ಹಿಡಿದು ಜಯ ಘೋಷಗಳನ್ನು ಕೂಗುತ್ತಾ ತಿರಂಗ ಮೆರವಣಿಗೆ ನಡೆಸಿದ ವಿದ್ಯಾರ್ಥಿಗಳು ಪಟ್ಟಣದ ಮೈಸೂರು ಚನ್ನರಾತನ್ನ ರಾಯ ಪಟ್ಟಣಯಪಟ್ಟಣ ರಸ್ತೆಯ ಎಂ.ಕೆ.ಬೊಮ್ಮೆಗೌಡ ವೃತ್ತಕ್ಕೆ ಸಂಚಾರ ಮುಗಿಸಿ ಯಾತ್ರೆಯನ್ನು ಯಶಶ್ವಿಯಾಗಿ ಅಂತಿಮಗೊಳಿಸಿದರು.
ತೆಂಡೇಕೆರೆ ಬಾಳೆಹೊನ್ನೂರು ಶಾಖಾ ಮಠದ ಶ್ರೀ ಗಂಗಾಧರ ಶಿವಾಚಾರ್ಯ ಸ್ವಾಮೀಜಿಗಳು ಮಾತನಾಡಿ ಕಾಲುಕೆರೆದು ಕೊಂಡು ನಮ್ಮ ದೇಶದ ಜನರು ಹಾಗೂ ಸೈನಿಕರಿಗೆ ತೊಂದರೆ ನೀಡುತ್ತಿರುವ ನಮ್ಮ ಶತ್ರು ರಾಷ್ಟ್ರವಾದ ಪಾಕಿಸ್ತಾನದ ಸೈನಿಕರು ನಮ್ಮ ದೇಶದ ನಾಗರಿಕರು ಹಾಗೂ ಸೈನಿಕರನ್ನು ಕೊಂದುಹಾಕಿ ಅಟ್ಟಹಾಸ ಮೆರೆಯುತ್ತಾ ಭಯೋತ್ಪಾದಕತೆಯನ್ನು ಪ್ರೋತ್ಸಾಹಿಸುತ್ತಿದ್ದಾರೆ. ನಮ್ಮ ದೇಶದಲ್ಲಿ ಅಶಾಂತಿ ಹಾಗೂ ಆರಾಜಕತೆಯನ್ನು ಸೃಷ್ಟಿ ಮಾಡುತ್ತಿರುವ ಶತ್ರು ಸೈನಿಕರ ಅಟ್ಟಹಾಸವನ್ನು ಮಟ್ಟ ಹಾಕುವ ಜೊತೆಗೆ ಶತ್ರು ಸೈನಿಕರ ನೆಲೆಗಳನ್ನು ಧ್ವoಸ ಮಾಡಿದ್ದಾರೆ.

ಆಪರೇಷನ್ ಸಿಂಧೂರ ಹೆಸರಿನಲ್ಲಿ ನಡೆದ ಮಿಲಿಟರಿ ಕಾರ್ಯಚಾರಣೆಯು ಯಶಶ್ವಿಯಾಗಿದ್ದು. ಶತ್ರು ರಾಷ್ಟ್ರವು ಮಂಡಿಯೂರಿ ಕುಳಿತು ಶಾಂತಿ ಸಂಧಾನದ ಮಾತುಕತೆಗೆ ಮುಂದಾಗಿರುವುದು ನಮ್ಮ ದೇಶದ ಸೈನಿಕರ ಶಕ್ತಿಯನ್ನು ಅನಾವರಣ ಮಾಡಿದೆ. ನಮ್ಮ ರಾಷ್ಟ್ರವನ್ನು ಶತ್ರುಗಳಿಂದ ಕಾಪಾಡುತ್ತಿರುವ ಸೈನಿಕರಿಗೆ ನೈತಿಕವಾಗಿ ಬೆಂಬಲ ನೀಡಿ ದೇಶವನ್ನು ಗೌರವಿಸಿ ನಾವೆಲ್ಲಾ ಒಂದು ನಾವು ಭಾರತೀಯರು ಎಂಬ ಸಂದೇಶ ನೀಡಲು ತಿರಂಗ ಯಾತ್ರೆ ನಡೆಸಲಾಗಿದೆ ಎಂದು ಗಂಗಾಧರ ಸ್ವಾಮೀಜಿ ಅಭಿಮಾನದಿಂದ ಹೇಳಿದರು. ವಿಶ್ರಾಂತ ಸೈನಿಕರಾದ ಸುಕುಮಾರ್, ಜಯರಾಮ್ ವಿದ್ಯಾರ್ಥಿಗಳನ್ನು ಉದ್ಧೇಶಿಸಿ ಮಾತನಾಡಿದರು.
ರಾಷ್ಟ್ರ ಧ್ವಜಗಳನ್ನು ಕೈಯಲ್ಲಿ ಎತ್ತಿ ಹಿಡಿದು ಘೋಷಣೆ ಕೂಗುತ್ತಾ ಮೆರವಣಿಗೆ ನಡೆಸಿದ ವಿದ್ಯಾರ್ಥಿಗಳ ದೇಶಪ್ರೇಮವನ್ನು ಪಟ್ಟಣದ ನಾಗರಿಕರು ಮುಕ್ತಕಂಠದಿಂದ ಶ್ಲಾಘಿಸಿದರು.
– ಶ್ರೀನಿವಾಸ್ ಆರ್.