ಕೆ.ಆರ್.ಪೇಟೆ-ತಾಲೂಕಿನ ಶೀಳನೆರೆ ಹೋಬಳಿಯ ಬಳ್ಳೇಕೆರೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಸಮಾಜ ಸೇವಕ ವಿಜಯರಾಮೇಗೌಡ ನೇತೃತ್ವದ ಮಿತ್ರ ಫೌಂಡೇಷನ್ ವತಿಯಿಂದ ಟ್ರ್ಯಾಕ್ ಸೂಟ್‌ಗಳನ್ನು ವಿತರಿಸಲಾಯಿತು.
ಮಿತ್ರ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಹಾಗೂ ಸಮಾಜ ಸೇವಕ ಬೂಕನಕೆರೆ ವಿಜಯ ರಾಮೇಗೌಡ ಅವರ ಪರವಾಗಿ ವಿಜಯರಾಮೇಗೌಡರ ಆಪ್ತ ಸಹಾಯಕ ಬಸವರಾಜು ಶಾಲಾ ಮಕ್ಕಳಿಗೆ ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಸವರಾಜು, ಮೈಸೂರು ಜಿಲ್ಲೆ ಮತ್ತು ವಿಜಯರಾಮೇಗೌಡರ ಜನ್ಮಭೂಮಿ ಕೃಷ್ಣರಾಜಪೇಟೆೆ ತಾಲೂಕನ್ನು ಕಾರ್ಯಕ್ಷೇತ್ರ ವನ್ನಾಗಿಸಿಕೊಂಡು ಮಿತ್ರ ಫೌಂಡೇಷನ್ ಕೆಲಸ ಮಾಡುತ್ತಿದೆ. ಸಂಕಷ್ಠದಲ್ಲಿರುವ ಜನರಿಗೆ ಸಹಾಯ ಮಾಡುವುದರ ಜೊತೆಗೆ ದೇವಾಲಯಗಳ ಜೀರ್ಣೋದ್ದಾರ, ಕೃಷಿಕರಿಗೆ ನೆರವು ಮತ್ತು ಮಾರ್ಗದರ್ಶನ, ಕ್ರೀಡೆ ಹಾಗೂ ರಂಗಭೂಮಿ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಮೂಲಕ ಗ್ರಾಮೀಣ ಪ್ರದೇಶದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ಉಳಿವಿಗೆ ಮಿತ್ರ ಫೌಂಡೇಷನ್ ಸ್ಪಂಧಿಸುತ್ತಿದೆ ಎಂದರು.
ಶಿಕ್ಷಣ ಕ್ಷೇತ್ರ ಖಾಸಗೀಕರಣಗೊಂಡಿದ್ದು ಗ್ರಾಮೀಣ ಪ್ರದೇಶದ ಮಕ್ಕಳು ಸೌಲಭ್ಯ ವಂಚಿತರಾಗುತ್ತಿದ್ದಾರೆ. ಸರ್ಕಾರಿ ಸಾಲೆಗಳನ್ನು ಉಳಿಸಬೇಕಾದರೆ ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಉತ್ತೇಜನ ನೀಡುವ ಕೆಲಸ ಮಾಡಬೇಕು. ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿರುವ ಗ್ರಾಮೀಣ ಶಾಲೆಗಳಿಗೆ ಸಮುದಾಯದ ನೆರವಿನ ಅಗತ್ಯವಿದೆ. ಸರ್ಕಾರಿ ಶಾಲೆಗಳ ಮಕ್ಕಳ ಕಲಿಕೆಯನ್ನು ಉತ್ತೇಜಿಸುವ ಸಲುವಾಗಿ ಫೌಂಡೇಷನ್ ಅಧ್ಯಕ್ಷ ವಿಜಯರಾಮೇಗೌಡರ ಆಶಯದಂತೆ ಬಳ್ಳೇಕೆರೆ ಸರ್ಕಾರಿ ಶಾಲೆಯ ಮಕ್ಕಳಿಗೆ ಟ್ರ್ಯಾಕ್ ಸೂಟ್ ನೀಡಲಾಗುತ್ತಿದೆ ಎಂದು ಬಸವರಾಜು ತಿಳಿಸಿದರು.
ಶಾಲಭಿವೃದ್ದಿ ಸಮಿತಿಯ ಅಧ್ಯಕ್ಷ ಹರೀಶ್, ಸದಸ್ಯರಾದ ಶಿವಕುಮಾರ್, ಕುಮಾರಿ, ಗ್ರಾ.ಪಂ ಸದಸ್ಯೆ ಸವಿತಾ ಇಂದ್ರೇಶ್, ಮುಖಂಡರಾದ ಮಹೇಶ್, ಶಿಕ್ಷಕರಾದ ಮಹೇಶ್ ಕುಮಾರ್, ಪಿ.ನಿಂಗೇಗೌಡ, ವಿಜಯಲಕ್ಷ್ಮಿ ಅಂಗನವಾಡಿ ಶಿಕ್ಷಕಿ ರಾಧಾ ಮತ್ತಿತರರು ಇದ್ದರು.
———ಶ್ರೀನಿವಾಸ್ ಕೆ ಆರ್ ಪೇಟೆ