ಕೆ.ಆರ್.ಪೇಟೆ-ತಾಲ್ಲೂಕಿನ ಅಗ್ರಹಾರಬಾಚಹಳ್ಳಿ ಗ್ರಾಮದ ಶ್ರೀ ಭೂದೇವಿ ಸಮೇತ ಶ್ರೀ ಚನ್ನಕೇಶವಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಮಹೋತ್ಸವ ಕಾರ್ಯಕ್ರಮವು ಶ್ರದ್ದಾ ಭಕ್ತಿಯಿಂದ ನಡೆಯಿತು.
ಮುಂಜಾನೆ 5.30ಗಂಟೆಯಿoದ ಶ್ರೀ ಸ್ವಾಮಿಗೆ ಪಂಚಾಮೃತ ಅಭಿಷೇಕ, ಪುಷ್ಪಾಭಿಷೇಕ, ಕ್ಷೀರಾಭಿಷೇಕ, ಮಹಾಮಂಗಳಾರತಿ ಮತ್ತಿತರ ಪೂಜೆ ಪುನಸ್ಕಾರಗಳು ನಡೆದವು. ನಂತರ ಸರ್ವಾಲಂಕಾರಗೊoಡ ಶ್ರೀ ಚನ್ನಕೇಶವಸ್ವಾಮಿಯ ದರ್ಶನಕ್ಕೆ ಹಾಗೂ ಪೂಜೆ ಅವಕಾಶ ಕಲ್ಪಿಸಲಾಯಿತು.
ದೇವಾಲಯದ ಹೊರ ಆವರಣದಲ್ಲಿ ಉತ್ತರಾಭಿಮುಖ ವೈಕುಂಠ ದ್ವಾರಪ್ರವೇಶದ ಮೂಲಕ ಭಕ್ತಾಧಿಗಳು ದೇವಾಲಯಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು. ಬೆಳಿಗ್ಗೆ, ಸಂಜೆಯವೆಗೆ ಪೂಜೆ, ದೇವರ ದರ್ಶನ, ಮಂಗಳಾರತಿ, ಪ್ರಸಾದ ವಿನಯೋಗ ಕಾರ್ಯಕ್ರಮಗಳು ನಡೆದವು. ವೈಕುಂಠ ಏಕಾದಶಿಯ ಅಂಗವಾಗಿ ಶ್ರೀ ಚನ್ನಕೇಶವಸ್ವಾಮಿ ದೇವಾಲಯದಲ್ಲಿ ಗ್ರಾಮದೇವತೆ ಶ್ರೀ ಲಕ್ಷ್ಮಿದೇವಮ್ಮ ಉತ್ಸವ ಮೂರ್ತಿಗೂ ಪೂಜೆ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಗಾಯಕ ಅಬಾರಾಶೆ ಚಂದ್ರಶೇಖರ್ ಮತ್ತು ತಂಡದವರು ಭಕ್ತಿಗೀತೆ, ಜಾನಪದ ಗೀತಗಾಯನ ನಡೆಸಿಕೊಟ್ಟರು. ಪ್ರಧಾನ ಅರ್ಚಕ ಸುಬ್ಬರಾಮು, ಗುಂಡಪ್ಪ, ಸುಬ್ಬಕೃಷ್ಣಯ್ಯ(ಪಾಪಚ್ಚಿ) ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮಗಳು ನಡೆದವು.
ಕಾರ್ಯಕ್ರಮದಲ್ಲಿ ಅಗ್ರಹಾರಬಾಚಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎ.ಸಿ.ದಿವಿಕುಮಾರ್, ಉಪಾಧ್ಯಕ್ಷೆ ಸುನಿತಾದ್ಯಾವಯ್ಯ, ಸದಸ್ಯರಾದ ಆರ್.ರಮೇಶ್, ಆರ್.ಶ್ರೀನಿವಾಸ್, ನೇತ್ರಾರಮೇಶ್, ರೇಣುಕಾಈಶ್ವರ್, ಪ್ರೇಮಚಂದ್ರಶೇಖರ್, ಸೊಸೈಟಿ ಅಧ್ಯಕ್ಷ ಚಿಕ್ಕೋಸಹಳ್ಳಿ ಸುರೇಶ್, ಕಾರ್ಯದರ್ಶಿ ರಾಮಸ್ವಾಮಿ, ಶ್ರೀ ಚನ್ನಕೇಶವಸ್ವಾಮಿ ದೇವಾಲಯ ಸಮಿತಿಯ ಸದಸ್ಯರಾದ ಬಿ.ವಿ.ನಾಗೇಶ್, ಎ.ಎಸ್.ಪುಟ್ಟಸ್ವಾಮೀಗೌಡ, ಗಿರಿಯಣ್ಣ ಪುಟ್ಟಸ್ವಾಮೀಗೌಡ, ಅಶೋಕ್, ವೆಂಕಟೇಶ್, ಲೋಹಿತ್, ಮಾಟಣ್ಣನ ಶ್ರೀನಿವಾಸ್, ಲಕ್ಷ್ಮಣ್, ಚಂದ್ರೇಗೌಡ, ಎ.ಎಸ್.ಗೋಪಾಲ್, ಎ.ಎಸ್.ಕೃಷ್ಣಮೂರ್ತಿ, ಭಗೀರಥ, ಶ್ರೀನಿವಾಸ್.ಎ.ಕೆ, ಎ.ಜಿ.ನಾಗರಾಜು, ಬಿ.ವಿ.ಕುಮಾರ್, ಎ.ಎಸ್.ಪ್ರವೀಣ್, ಎ.ಜೆ.ನಾಗೇಶ್, ಕುಚೇಲೇಗೌಡ, ಅಮ್ಮಕ್ಕನ ದೇವರಾಜು, ಯೋಗೇಶ್, ಕೇಶವ್, ರಮೇಶ್, ನವೀನ್, ಆರ್.ರವಿ, ಎ.ವಿ.ಪ್ರದೀಪ್ ಮತ್ತಿತರರು ಭಾಗವಹಿಸಿದ್ದರು.
—————–—-ಶ್ರೀನಿವಾಸ್ ಆರ್