ಕೆ.ಆರ್.ಪೇಟೆ-ತಾಲೂಕಿನ ಜನತೆಯ ಪ್ರಾಮಾಣಿಕ ಸೇವೆಗೆ ನಾನು ಬದ್ಧನಾಗಿದ್ದೇನೆ. ನನ್ನ ಶ್ರಮದ ದುಡಿಮೆಯ ಹಣದಲ್ಲಿ ಅರ್ಧ ಭಾಗವನ್ನು ಸಮಾಜ ಸೇವಾ ಕಾರ್ಯಗಳಿಗೆ ಸದ್ವಿನಿಯೋಗ ಮಾಡುತ್ತಿದ್ದೇನೆ, ನಾನು ರಾಜಕೀಯ ಕ್ಷೇತ್ರಕ್ಕೆ ಬಂದಿದ್ದೆ ಆಕಸ್ಮಿಕ ಎಂದು ಸಮಾಜ ಸೇವಕ ಮಿತ್ರ ಫೌಂಡೇಶನ್ ಅಧ್ಯಕ್ಷ ವಿಜಯ್ ರಾಮೇಗೌಡ ಹೇಳಿದರು.
ಅವರು ಕೆ.ಆರ್.ಪೇಟೆ ಪಟ್ಟಣದ ರಾಮದಾಸ್ ಹೋಟೆಲ್ ಸಭಾಂಗಣದಲ್ಲಿ ಮೈಸೂರಿನ ಮಿತ್ರ ಫೌಂಡೇಶನ್ ವತಿಯಿಂದ ಆಯೋಜಿಸಿದ್ದ ಸಮಾರಂಭದಲ್ಲಿ ಮಿತ್ರ ಪೌಂಡೇಷನ್ ಹೊರತಂದಿರುವ 2025ನೇ ಸಾಲಿನ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದರು.
ಒಬ್ಬ ಸಾಮಾನ್ಯ ರೈತ ಮಗನಾದ ನಾನು ತಾಂತ್ರಿಕ ಶಿಕ್ಷಣ ವ್ಯಾಸಂಗ ಮುಗಿಸಿ ಉದ್ಯಮಿಯಾಗಿ ನನ್ನ ಬದುಕು ಕಟ್ಟಿಕೊಂಡ ನಂತರ ಸಮಾಜ ಸೇವಾ ಚಟುವಟಿಕೆಗಳನ್ನು ಮಿತ್ರ ಫೌಂಡೇಶನ್ ಹೆಸರಿನಲ್ಲಿ ಆರಂಭಿಸಿ ನನ್ನ ಕೈಲಾದ ಸಮಾಜ ಸೇವಾ ಚಟುವಟಿಕೆಗಳನ್ನು ನಡೆಸುತ್ತಿದ್ದೇನೆ. ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು, ದೇವಾಲಯ ಜೀರ್ಣೋದ್ದಾರ, ಗ್ರಾಮೀಣ ಜನರ ಆರೋಗ್ಯ ಸೇವೆ, ವೃತ್ತಿ ಕೌಶಲ್ಯ ಮಾರ್ಗದರ್ಶನ ಸೇರಿದಂತೆ ಹತ್ತು ಹಲವು ಸೇವಾ ಕಾರ್ಯಗಳನ್ನು ಮಾಡುವ ಜೊತೆಗೆ ತಾಲ್ಲೂಕಿನಲ್ಲಿ ಕಾಂಗ್ರೆಸ್ ಪಕ್ಷದ ಬಲವರ್ಧನೆಗಾಗಿ ನನ್ನನ್ನು ಸಮರ್ಪಣೆ ಮಾಡಿಕೊಂಡು ಕೆಲಸ ಮಾಡುತ್ತಿದ್ದೇನೆ. ಕಾಂಗ್ರೆಸ್ ಪಕ್ಷದ ವರಿಷ್ಠರು ನನಗೆ ವಹಿಸಿದ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ನನ್ನ ಪ್ರಾಮಾಣಿಕ ದುಡಿಮೆ ಹಾಗೂ ಪಕ್ಷ ಸಂಘಟನೆಗೆ ನಾನು ದುಡಿಯುತ್ತಿರುವುದನ್ನು ಸಹಿಸದ ಕೆಲವು ಮಂದಿ ನನ್ನ ವಿರುದ್ದ ದ್ವೇಷ ಹಾಗೂ ಅಸೂಯೆಯಿಂದ ಇಲ್ಲಸಲ್ಲದ ಅಪ ಪ್ರಚಾರ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಶಕ್ತಿ ತುಂಬಲು ನಾನು ಸದಾ ಬದ್ದನಿದ್ದೇನೆ ಎಂದು ವಿಜಯರಾಮೇಗೌಡ ಹೇಳಿದರು.
ಕಾಂಗ್ರೆಸ್ ಮುಖಂಡರಾದ ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜು, ಕೆಯುಐಡಿಎಫ್‌ಸಿ ಮಾಜಿ ಅಧ್ಯಕ್ಷ ಎಂ.ಡಿ.ಕೃಷ್ಣಮೂರ್ತಿ, ಮುಖಂಡ ವಿಠಲಾಪುರ ಸುಬ್ಬೇಗೌಡ, ಮುಸ್ಲಿಂ ಮುಖಂಡ ಆಲಂಬಾಡಿಕಾವಲು ಅಬ್ದುಲ್ ಸಿದ್ದಿಕ್ ಕಾರ್ಯಕ್ರಮದಲ್ಲಿ ಮಾತನಾಡಿ ವಿಜಯ್‌ರಾಮೇಗೌಡ ಅವರಿಗೆ ಕಾಂಗ್ರೆಸ್ ಪಕ್ಷದ ವರಿಷ್ಠರು ಹೆಚ್ಚಿನ ಅಧಿಕಾರ ಕೊಡಿಸಿ ವಿಜಯ್ ರಾಮೇಗೌಡರಿಗೆ ಶಕ್ತಿ ತುಂಬುವ ಮೂಲಕ ನೊಂದ ಜನರ ಧ್ವನಿಯಾಗಿರುವ ಅವರಿಗೆ ಶಕ್ತಿ ತುಂಬಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ತಾ.ಪಂ ಮಾಜಿ ಸದಸ್ಯ ಅಕ್ಕಿಹೆಬ್ಬಾಳು ರಾಮಸ್ವಾಮಿ, ಕೃಷಿಕ ಸಮಾಜದ ಜಿಲ್ಲಾ ನಿರ್ದೇಶಕ ಹೆಚ್.ಜೆ.ನಾರಾಯಣಗೌಡ, ಪುರಸಭೆ ಸದಸ್ಯ ಡಿ.ಪ್ರೇಮಕುಮಾರ್, ಪಿಎಲ್‌ಡಿ. ಬ್ಯಾಂಕಿನ ಮಾಜಿ ಅಧ್ಯಕ್ಷ ಕೆ.ಎಸ್.ಬಸವೇಗೌಡ, ಅಬ್ದುಲ್ ಸಿದ್ದಿಕ್, ಪುರಸಭೆ ಮಾಜಿ ಅಧ್ಯಕ್ಷ ಹೆಚ್.ವಿ.ಕೃಷ್ಣೇಗೌಡ, ತಾಲ್ಲೂಕು ಕಾಂಗ್ರೆಸ್ ಎಸ್.ಸಿ.ವಿಭಾಗದ ಅಧ್ಯಕ್ಷ ರಾಜಯ್ಯ, ತಾಲ್ಲೂಕು ದರಖಾಸ್ತು ಕಿಮಿಟಿ ಸದಸ್ಯ ಜಿ.ಎ.ರಾಯಪ್ಪ, ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯೆ ಶಿವಮ್ಮ, ಛಲವಾಧಿ ಮಹಾಸಭಾದ ಹಾಸನ-ಮಂಡ್ಯ ಜಿಲ್ಲಾ ಉಸ್ತುವಾರಿ ಮಾಂಬಳ್ಳಿ ಜಯರಾಂ, ಪಿಎಸ್‌ಎಸ್‌ಕೆ ಮಾಜಿ ಉಪಾಧ್ಯಕ್ಷ ಕಟ್ಟೇಕ್ಯಾತನಹಳ್ಳಿ ಪರಮೇಶ್, ಕೃಷ್ಣೇಗೌಡ, ಎಂ.ಕೆ.ಹರಿಚರಣತಿಲಕ್, ಹೊಸಹೊಳಲು ಬಸವರಾಜು ಸೇರಿದಂತೆ ನೂರಾರು ಮಂದಿ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
—————-ಶ್ರೀನಿವಾಸ್ ಆರ್