ಕೆ.ಆರ್.ಪೇಟೆ-ವಕ್ಫ್ ಬೋರ್ಡ್ ಹೆಸರಿನಲ್ಲಿ ರಾಜ್ಯದೆಲ್ಲೆಡೆ ನೆಡೆಯುತ್ತಿರುವ ಆಸ್ತಿ ಕಬಳಿಕೆ ಯತ್ನ ಪ್ರಕರಣಗಳು ತಾಲೂಕಿನಲ್ಲೇನಾದರೂ ನೆಡೆದರೇ ರೈತರು ಹಾಗು ರೈತಸಂಘಗಳೊoದಿಗೆ ಸೇರಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಜಿಲ್ಲಾ ಭಾರತೀಯ ಕಿಸಾನ್ ಸಂಘದ ಕಾರ್ಯಕಾರಿಣಿ ಸದಸ್ಯ ಹೊಸಹೊಳಲು ಹರೀಶ್ ತಾಲೂಕು ಆಡಳಿತಕ್ಕೆ ಮನವಿ ಪತ್ರ ಸಲ್ಲಿಸಿ ಎಚ್ಚರಿಸಿದರು.
ಪಟ್ಟಣದ ತಾಲೂಕು ಆಡಳಿತ ಕಛೇರಿಯ ಆವರಣದಲ್ಲಿ ಗ್ರೇಡ್-2 ತಹಶೀಲ್ದಾರ್ ಲೋಕೇಶ್ ರವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿ,ರಾಜ್ಯದ ವಿವಿಧ ಕಡೆಗಳಲ್ಲಿ ನಡೆದಿರುವಂತಹ ಘಟನೆಗಳೇನಾದರೂ ನಮ್ಮಲ್ಲಿ ಘಟಿಸಿದರೆ ಪರಿಣಾಮ ಬೇರೆ ಸ್ವರೂಪದ್ದೇ ಆಗಿರುತ್ತದೆ.
ಇಲ್ಲಿಯವರೆಗೂ ತಾಲೂಕಿನ ಯಾವ ರೈತರ ಪಹಣಿಗಳಲ್ಲೂ ವಕ್ಫ್ ಆಸ್ತಿ ಎಂದು ನಮೂದಾಗಿದ್ದು ಕಂಡುಬಂದಿಲ್ಲ.ಏನಾದರು ಅಂತಹ ಗೊಂದಲಗಳು ಸೃಷ್ಟಿಯಾದಾವು ಎಂಬ ಕಾರಣಕ್ಕೆ ತಾಲೂಕು ಆಡಳಿತವನ್ನು ಮೊದಲೇ ಎಚ್ಚರಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ತಾಲೂಕು ಭಾರತೀಯ ಕಿಸಾನ್ ಸಂಘದ ಕಾರ್ಯಕಾರಿಣಿ ಸದಸ್ಯರಾದ ಕೃಷ್ಣೇಗೌಡ, ರಘುರಾಮ್, ಪರಮೇಶ್, ಕೆ.ಇ.ಬಿ.ರಂಗೇಗೌಡ, ರಾಜಶೇಖರ್, ನಟರಾಜು, ಸತೀಶ್ ಸೇರಿದಂತೆ ಹಲವರು ಉಪಸ್ಥಿತ್ತರಿದ್ದರು.
——————–-ಶ್ರೀನಿವಾಸ್ ಕೆ ಆರ್ ಪೇಟೆ .