ಕೆ.ಆರ್.ಪೇಟೆ-ನೀರನ್ನು-ವ್ಯರ್ಥವಾಗಿ-ಪೋಲು-ಮಾಡದೇ-ಹಿತವಾಗಿ- ಮಿತವಾಗಿ-ಬಳಸಬೇಕು-ಜೀವ-ಜಲವಾದ-ನೀರು-ಚಿನ್ನಕ್ಕಿಂತಲೂ-ಶ್ರೇಷ್ಠ- ಅಪರ-ಸಿವಿಲ್-ನ್ಯಾಯಾಧೀಶ-ಆರ್.ಶಕುಂತಲಾ

ಕೆ.ಆರ್.ಪೇಟೆ– ಜೀವ ಜಲವಾದ ನೀರು ಅತ್ಯಂತ ಅಮೂಲ್ಯವಾದದ್ದು, ನೀರನ್ನು ವ್ಯರ್ಥವಾಗಿ ಪೋಲು ಮಾಡದೇ ಹಿತವಾಗಿ ಮಿತವಾಗಿ ಬಳಸಬೇಕು ಎಂದು ಅಪರ ಸಿವಿಲ್ ನ್ಯಾಯಾಧೀಶರಾದ ಆರ್. ಶಕುಂತಲಾ ಹೇಳಿದರು.

ಅವರು ಕೆ. ಆರ್. ಪೇಟೆ ಪಟ್ಟಣದ ಜೆಎಂಎಫ್ ಸಿ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ವಿಶ್ವ ಜಲ ದಿನಾಚರಣೆಯ ಅಂಗವಾಗಿ ವಿವಿಧ ಬಗೆಯ ಹೂವು ಮತ್ತು ಹಣ್ಣಿನ ಸಸಿಗಳನ್ನು ನೆಟ್ಟು ನೀರೆರೆದು ಮಾತನಾಡಿದರು.

ವಿಶ್ವದಲ್ಲಿ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗಾಗಿ ಮಹಾಯುದ್ಧವು ನಡೆದರೆ ನಾವು ಆಶ್ಚರ್ಯ ಪಡಬೇಕಾಗಿಲ್ಲ, ನೀರು ಚಿನ್ನಕ್ಕಿಂತಲೂ ಶ್ರೇಷ್ಠವಾಗಿದ್ದು ಮಾನವರಾದ ನಾವು ಸೇರಿದಂತೆ ಪಶು ಪಕ್ಷಿಗಳು ಜೀವಸಂಕುಲಗಳು ನೀರಿಲ್ಲದಿದ್ದರೆ ಜೀವನ ನಡೆಸುವುದೇ ಕಷ್ಟವಾಗಲಿದೆ. ಆದ್ದರಿಂದ ನೀರನ್ನು ವ್ಯರ್ಥವಾಗಿ ಪೋಲು ಮಾಡದೇ ಎಚ್ಚರಿಕೆಯಿಂದ ಬಳಸಬೇಕು ಎಂದು ಶಕುಂತಲಾ ಮನವಿ ಮಾಡಿದರು.

ಜೆಎಂಎಫ್ ಸಿ ಸಿವಿಲ್ ನ್ಯಾಯಾಲಯದ ಹಿರಿಯ ಶ್ರೇಣಿ ನ್ಯಾಯಾಧಿಶರಾದ ಸುಧೀರ್, ಅಪರ ಸಿವಿಲ್ ನ್ಯಾಯಾಧಿಶರಾದ ದೇವರಾಜು, ಅರ್ಪಿತಾ, ತಾಲೂಕು ವಲಯ ಅರಣ್ಯ ಅಧಿಕಾರಿ ಅನಿತಾ ಸಸಿಗಳನ್ನು ನೆಟ್ಟು ನೀರೆರೆದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ನಾಗೇಗೌಡ ಮಾತನಾಡಿ ಜೀವ ಜಲವಾದ ನೀರು ನಮ್ಮಬದುಕಿನ ಸಂಜೀವಿನಿ ಯಾಗಿದೆ. ಶ್ರೀಸಾಮಾನ್ಯರು, ಮಕ್ಕಳು ಸೇರಿದಂತೆ ನಾಗರೀಕ ಸಮಾಜದಲ್ಲಿ ವಾಸ ಮಾಡುವ ಪ್ರತಿಯೊಬ್ಬರೂ ಶುದ್ಧವಾದ ನೀರನ್ನು ಕುಡಿಯಲು ಬಳಸುವ ಮೂಲಕ ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ನಾಂಧಿ ಹಾಡಬೇಕು ಎಂದು ನಾಗೇಗೌಡ ಮನವಿ ಮಾಡಿದರು.

ಸಹಾಯಕ ಸರ್ಕಾರಿ ಅಭಿಯೋಜಕ ಸುರೇಂದ್ರ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಸಾಧುಗೋನಹಳ್ಳಿ ಮಂಜೇಗೌಡ, ವಕೀಲರ ಸಂಘದ ಮಾಜಿ ಅಧ್ಯಕ್ಷ ಎನ್. ಆರ್.ರವಿಶಂಕರ್, ಹಿರಿಯ ವಕೀಲರಾದ ಬಿ.ಎಲ್. ದೇವರಾಜು, ಜಿ.ಆರ್. ಅನಂತರಾಮಯ್ಯ ಸೇರಿದಂತೆ ವಕೀಲರ ಸಂಘದ ಪದಾಧಿಕಾರಿಗಳು, ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

-ಶ್ರೀನಿವಾಸ ಆರ್.

Leave a Reply

Your email address will not be published. Required fields are marked *

× How can I help you?