ಕೆ.ಆರ್.ಪೇಟೆ: ಯೋಗ ಮಾಡುವುದರಿಂದ ರೋಗ ನಿವಾರಣೆಯಾಗಿ ಶಾಂತಿ ನೆಮ್ಮದಿ ಜೀವನ ಮಾಡಬಹುದು ಎಂದು ಯೋಗ ಗುರು ಹರಳಹಳ್ಳಿ ಮಧು ಹೇಳಿದರು.
ಪ್ರತಿದಿನ ದೇಹ ದಂಡಿಸಬೇಕು ದೇಹಕ್ಕೆ ಸುಖವಾದ ಆಹಾರದ ಜೊತೆ ಯೋಗದ ವಿವಿಧ ಭಂಗಿ ಮೂಲಕ ನರನಾಡಿಗಳನ್ನು ಜಾಗೃತ ಮಾಡಿಸಲು ಯೋಗಾಸನ ಅವಶ್ಯಕತೆಯಿದೆ ಎಂದು ನುಡಿದರು.
ಇಂದು ಹೌಸಿಂಗ್ ಬೋರ್ಡು ನ ಬುದ್ಧ ಬಸವ ಅಂಬೇಡ್ಕರ್ ಯೋಗ ಕೇಂದ್ರದ ಯೋಗ ಗುರು ಎಸ್.ಎಂ. ಅಲ್ಲಮಪ್ರಭು ನೇತೃತ್ವದಲ್ಲಿ ನಡೆದ ಯೋಗೋತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಹಿರಿಯ ಯೋಗ ಗುರು ಕೆ.ಬಿ.ಚಂದ್ರಶೇಖರ್ ಮಾತನಾಡಿ,, ಯೋಗ ಸಾಧಕರಿಗೆ ಸನ್ಮಾನ ಮಾಡುವುದು,ಪುಣ್ಯದ ಕೆಲಸ, ಮಾತ್ರೆಗಳ ಸೇವನೆಯಿಂದ ದೇಹಕ್ಕೆ ಅಡ್ಡ ಪರಿಣಾಮ ವಿವಿಧ ರೀತಿಯ ಕಾಯಿಲೆಗಳಿಗೆ ಆಹ್ವಾನ ನೀಡಿದಂತೆ,ಸಣ್ಣ ಪುಟ್ಟದಕ್ಕೆಲ್ಲಾ ಆಸ್ಪತ್ರೆಗೆ ಹೋಗದೆ ಯೋಗದ ಮುಖೇನ ಗುಣಪಡಿಸಿಕೊಳ್ಳಬಹುದು ಎಂದರು.

ಇದೇ ಸಂದರ್ಭದಲ್ಲಿ ನಾಗಮಂಗಲ ತಾಲೂಕಿನ ಯೋಗ ಗುರು ಮಧು (ಚಿಕ್ಕಗೌಡ) ಹಾಗೂ ಕೊಡಗಹಳ್ಳಿ ಪ್ರಕಾಶ್ ಯೋಗ ಶಿಕ್ಷಕರಿಗೂ ಸನ್ಮಾನವನ್ನು ಮಾಡಲಾಯಿತು.
ಕಾರ್ಯಕ್ರಮದಲ್ಲಿ ಯೋಗ ಗುರು ಎಸ್.ಎಂ. ಅಲ್ಲಮ ಪ್ರಭು, ಹಾಗೂ ಪೋಲೀಸ್ ಇಲಾಖೆಯ ಉಮೇಶ್ ನವೀನಾ, ನಾಗರಾಜು, ಶಿಕ್ಷಕಿಯರಾದ, ಸ್ವರ್ಣಲತಾ, ಯಮುನಾ, ಪವಿತ್ರಾ ಚನ್ನೇಗೌಡ, ವೈರಮುಡಿ ಯಶೋಧಾ, ಉಪನ್ಯಾಸಕಿ ದೀಪಶ್ರೀ, ನಂದಿನಿ ಕೇಶವ್, ನಳಿನಾ, ತ್ರಿವೇಣಿ, ರೇಣುಕಾ, ನಂದೀಶ್, ವಿಜಯ್ ಸಿಂಚನಾ, ಅರುಣ್, ಶಿಕ್ಷಣ ಸಂಯೋಜಕ ಸಿ.ವೀರಭದ್ರಯ್ಯ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
- ಶ್ರೀನಿವಾಸ ಆರ್.