ಕೆ.ಆರ್.ಪೇಟೆ,:ಪಂಚ ಕಸುಬುಗಳ ಮೂಲಕ ಸಮಾಜದಲ್ಲಿ ಎಲ್ಲಾ ರೀತಿಯ ಅಗತ್ಯ ವಸ್ತುಗಳನ್ನು ತಯಾರಿಸಿಕೊಡುವ ಮೂಲಕ ಎಲ್ಲರಿಗೂ ಬೇಕಾದ ಸಮುದಾಯ ಎಂದರೆ ವಿಶ್ವಕರ್ಮ ಸಮುದಾಯ.ರೈತರಿಗೆ ಕೃಷಿ ಉಪಕರಣಗಳು, ಚಿನ್ನಾಭರಣಗಳು,ದೇವಾಲಯಗಳಿಗೆ ಶಿಲ್ಪಕಲೆ ಕೊಡುಗೆ,ಮನೆಗಳಿಗೆ ಗೃಹೋಪಯೋಗಿ ವಸ್ತುಗಳು ಸೇರಿದಂತೆ ಮನುಷ್ಯನು ಹುಟ್ಟಿದಾಗ ತೊಟ್ಟಿಲಿನಿಂದ ಹಿಡಿದು,ಸತ್ತಾಗ ಚಟ್ಟವನ್ನು ತಯಾರಿಸಿಕೊಡುವ ಕೆಲಸ ಮಾಡುತ್ತಾ ಸಮಾಜದ ಜೊತೆಗೆ ಅವಿನಾಭಾವ ಸಂಬoಧ ಹೊಂದಿರುವ ವಿಶ್ವಕರ್ಮ ಸಮುದಾಯದ ಅಭಿವೃದ್ಧಿಗೆ ಸರ್ಕಾರವು ಹೆಚ್ಚಿನ ನೆರವು ನೀಡಬೇಕು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಎ.ಸಿ.ದಿವಿಕುಮಾರ್ ಆಗ್ರಹಿಸಿದರು.
ಅವರು ತಾಲ್ಲೂಕಿನ ಅಗ್ರಹಾರಬಾಚಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವಕರ್ಮ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿದರು.
ತಾಲ್ಲೂಕು ವಿಶ್ವಕರ್ಮ ಮಹಾಸಭಾ ಉಪಾಧ್ಯಕ್ಷ ಎ.ಸಿ.ರೂಪೇಶಾಚಾರ್ ಮಕ್ಕಳಿಗೆ ನೋಟ್ ಬುಕ್ ಮತ್ತು ಲೇಖನ ಸಾಮಗ್ರಿಗಳನ್ನು ವಿತರಣೆ ಮಾಡಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಪಿಡಿಓ ಹರ್ಷವರ್ಧನ್,ತಾಲ್ಲೂಕು ವಿಶ್ವಕರ್ಮ ಕುಶಲ ಕೈಗಾರಿಕಾ ಸಹಕಾರ ಸಂಘದ ಅಧ್ಯಕ್ಷ ಕೆ.ಎನ್.ಕುಮಾರಸ್ವಾಮಿ, ಟಿಎಪಿಸಿಎಂಎಸ್ ರವಿ, ತಾಲ್ಲೂಕು ವಿಶ್ವಕರ್ಮ ಮಹಾಸಭಾ ಉಪಾಧ್ಯಕ್ಷ ಎ.ಸಿ.ರೂಪೇಶಾಚಾರ್, ರಾಜಣ್ಣ, ತಾಲ್ಲೂಕು ಭೂನ್ಯಾಯ ಮಂಡಳಿ ಮಾಜಿ ಸದಸ್ಯ ಎ.ಬಿ.ಕುಮಾರ್, ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಪುಟ್ಟರಾಜು, ಎಸ್.ಡಿ.ಎಂ.ಸಿ ಅಧ್ಯಕ್ಷ ಕುಮಾರ್, ವಿಶ್ವಕರ್ಮ ಸಮಾಜ ಮುಖಂಡರಾದ ಎ.ಎಸ್.ಅಶೋಕ್, ಶ್ರೀ ಚಾಮುಂಡೇಶ್ವರ ದೇವಾಲಯದ ಅರ್ಚಕ ಮಂಜುನಾಥ್, ಎಸ್.ಡಿಎಂ.ಸಿ ಸದಸ್ಯರಾದ ಎ.ವಿ.ಕೃಷ್ಣ,ಎ.ಎಸ್. ಪರಮೇಶ್, ರುಕ್ಮಾಂಗದಚಾರ್, ದೇವರಾಜಾಚಾರ್, ರಾಮಚಂದ್ರೇಗೌಡ, ಹಿರಿಯ ಶಿಕ್ಷಕರಾದ ಕೆ.ಎಸ್.ರಾಜು, ಎಂ.ಎಸ್.ಸುರೇಶ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
————-ಶ್ರೀನಿವಾಸ್ ಕೆ ಆರ್ ಪೇಟೆ