ಕನಕಪುರ:ಶ್ರೀ ಕ್ಷೇತ್ರ ದೇಗುಲಮಠಕ್ಕೆ ಶ್ರೀಮಠದ ಹಳೆ ವಿದ್ಯಾರ್ಥಿ ಹಾಗೂ ಕೇಂದ್ರ ಸರ್ಕಾರದ ರೈಲ್ವೆ ಖಾತೆ ಮತ್ತು ಜಲ ಶಕ್ತಿ ರಾಜ್ಯ ಸಚಿವರಾದ ಸನ್ಮಾನ್ಯ ವಿ ಸೋಮಣ್ಣನವರು ಕುಟುಂಬ ಸಮೇತರಾಗಿ ಆಗಮಿಸಿ ಹಿರಿಯ ಪರಮಪೂಜ್ಯ ಡಾ. ಶ್ರೀ ಶ್ರೀ ಮುಮ್ಮಡಿ ನಿರ್ವಾಣಮಹಾಸ್ವಾಮಿಗಳವರು ಹಾಗೂ ಕಿರಿಯ ಪರಮಪೂಜ್ಯ ಶ್ರೀ ಶ್ರೀ ಚನ್ನಬಸವ ಮಹಾಸ್ವಾಮಿಗಳವರ ಆಶೀರ್ವಾದ ಪಡೆದು,ಗದ್ದುಗೆ ಅಭಿಷೇಕ ಪೂಜೆಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಧರ್ಮಪತ್ನಿ ಶೈಲಜಾ ಸೋಮಣ್ಣನವರು ಮತ್ತು ಸಿಟಿಒ ರಾಜೇಂದ್ರ ಕುಮಾರ್ ರವರು ಹಾಗೂ ವಿ ಸೋಮಣ್ಣ ಪ್ರತಿಷ್ಠಾನದ ಕಾರ್ಯದರ್ಶಿ ಪಾಲನೇತ್ರರವರು ಉಪಸ್ಥಿತರಿದ್ದರು.