ಚಿಕ್ಕಮಗಳೂರು; ಕಾರ್ಮಿಕ ವರ್ಗ ಬದುಕಿನಲ್ಲಿ ಸಂಕಷ್ಟ ಎದುರಾಗದಂತೆ ನೆಮ್ಮದಿ ಜೀವನ ರೂಪಿಸುವ ಸಲುವಾಗಿ ರಾಜ್ಯದಲ್ಲೇ ಪ್ರಥಮ ಬಾರಿಗೆ ಕಾರ್ಮಿಕರ ಸಹಕಾರ ಸಂಘವನ್ನು ಸ್ಥಾಪಿಸಿ ಶ್ರಮಿಸಲಾಗುತ್ತಿದೆ ಎಂದು ಕಟ್ಟಡ ಕಾರ್ಮಿಕರ ಸಹಕಾರ ಸಂಘದ ಅಧ್ಯಕ್ಷ ಸಿ.ಸಿ.ಮಂಜೇಗೌಡ ಹೇಳಿದರು.
ನಗರದ ಶೆಟ್ಟರ ಬೀದಿಯ ಡಾ|| ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಕಟ್ಟಡ ಕಾರ್ಮಿಕರ ಸಹಕಾರ ಸಂಘದ ಸರ್ವ ಸದಸ್ಯರ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಬುಧವಾರ ಅವರು ಮಾತನಾಡಿದರು.
ಕಟ್ಟಡ ಕಾರ್ಮಿಕರಾಗಿ ದುಡಿಯುವ ವರ್ಗ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿವೆ.ಜೀವನದಲ್ಲಿ ಸಣ್ಣಪುಟ್ಟ ಏರುಪೇರುಗಳಾದರೆ ಆರ್ಥಿಕವಾಗಿ ಕುಗ್ಗುತ್ತದೆ.ಇವುಗಳನ್ನು ತಡೆಗಟ್ಟುವ ಸಲುವಾಗಿ ಕಾರ್ಮಿಕರಿಗೆ ಸಹಕಾರ ಸಂಘವನ್ನು ಸ್ಥಾಪಿಸಿ ಕಷ್ಟಕಾಲದಲ್ಲಿ ಸಾಲಸೌಲಭ್ಯ ಒದಗಿಸುವ ಮೂಲಕ ಭದ್ರತೆ ಒದಗಿ ಸುತ್ತಿದೆ ಎಂದು ಹೇಳಿದರು.
ಮುಂಬರುವ ಐದು ವರ್ಷಗಳಲ್ಲಿ ಸಹಕಾರ ಸಂಘವನ್ನು ಉನ್ನತ ಮಟ್ಟದಲ್ಲಿ ನಡೆಸಲು ಹೆಚ್ಚು ಹೆಚ್ಚು ಬ್ಯಾಂಕಿನಲ್ಲಿ ವ್ಯವಹಾರ ನಡೆಸಿ ಹಾಗೂ ಠೇವಣಿಗಳನ್ನು ನಮ್ಮ ಸಂಘದಲ್ಲಿ ಇರಿಸುವ ಮೂಲಕ ಪ್ರಗತಿಗೆ ಸಹಕಾರ ನೀಡಬೇಕು. ಕಾರ್ಮಿಕರನ್ನು ಆರ್ಥಿಕ ಸಧೃಢವಾಗಿಸಲು ಸಹಕಾರ ಸಂಘ ಮುಂದಾಗಲಿದೆ ಎಂದರು.
ಉಪಾದ್ಯಕ್ಷ ಸಿ.ವಸಂತ್‌ಕುಮಾರ್ ಮಾತನಾಡಿ ಈಗಾಗಲೇ ಸಂಘವು ಸ್ಥಾಪನೆಗೊಂಡು ಐದು ತಿಂಗಳಾಗಿದೆ.589 ಸದಸ್ಯರಿಂದ 6ಲಕ್ಷ ಬಂಡವಾಳ ಷೇರು ಸಂಗ್ರಹಣೆಯಾಗಿದೆ.ಅಲ್ಲದೇ ರಾಜ್ಯದಲ್ಲೇ ಪ್ರಥಮ ಕಟ್ಟಡ ಕಾರ್ಮಿಕರ ಸಹಕಾರ ಸಂಘವಾಗಿದ್ದು ಐದು ತಿಂಗಳ ಅವಧಿಯಲ್ಲಿ ಒಂಭತ್ತು ಸಾವಿರ ನಿವ್ವಳ ಲಾಭ ದಿಂದ ಮುನ್ನೆಡೆಯುತ್ತಿದೆ ಎಂದು ಹೇಳಿದರು.
ಅತಿಹೆಚ್ಚು ಸಂಖ್ಯೆಯಲ್ಲಿ ಕಾರ್ಮಿಕರು ಠೇವಣಿ ಇರಿಸಿದರೆ ಉಜ್ವಲ ಭವಿಷ್ಯ ನಿಮ್ಮದಾಗಲಿದೆ.ಜೊತೆಗೆ ಸಂಕಷ್ಟ ಕಾಲದಲ್ಲಿ ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ಒದಗಿಸಲಾಗುವುದು.ಇದರಿಂದ ಕುಟುಂಬವು ಆರ್ಥಿ ಕ ಶಕ್ತಿ ಹೊಂದುವ ಜೊತೆಗೆ ಸಬಲರಾಗಲು ಸಾಧ್ಯವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಸಂಘಧ ಕೋ ಆಪರೇಟಿವ್ ಸಲಹೆಗಾರ ಜಿ.ರಘು, ನಿರ್ದೇಶಕರುಗಳಾದ ಎ.ಶ್ರೀಧರ್, ಎ.ಸಲೀಂ, ಚಂದ್ರಾಚಾರ್, ಶ್ರೀನಿವಾಸ್, ಆರ್.ಮಂಜಯ್ಯ, ಎಸ್.ರವಿ, ಟಿ.ಎಸ್.ಸಂಜೀವ, ದ ಯಾಕ್ಷಿ, ಸುಶೀಲಮ್ಮ, ಜಿ.ಗೌರಮ್ಮ, ಕಾರ್ಯದರ್ಶಿ ಎ.ಜಯಕುಮಾರ್, ಸಿಬ್ಬಂದಿವರ್ಗದವರು ಇದ್ದರು.