ಚಿಕ್ಕಮಗಳೂರು: ನಗರದ ಶಂಕರಾಪುರ, ಪಂಪನಗರದ ವಾರ್ಡ್ ನಂಬರ್ 11 ಮತ್ತು 12 ರಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಆಗ್ರಹಿಸಿ, ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ನಗರಸಭೆ ಎದುರು ಪ್ರತಿಭಟನೆ ನಡೆಸಿ, ಆಯುಕ್ತ ಬಸವರಾಜ್ ಸರ್ ಅವರಿಗೆ ಮನವಿ ನೀಡಲಾಯಿತು.
ನಗರದ ಶಂಕರಾಪುರ, ಪಂಪನಗರದ ವಾರ್ಡ್ ನಂಬರ್ 11 ಮತ್ತು 12 ರಲ್ಲಿ ನಗರದ ಶಂಕರಾಪುರ, ಪಂಪನಗರದ ವಾರ್ಡ್ ನಂಬರ್ 11 ಮತ್ತು 12 ರಲ್ಲಿ ಯುಜಿಡಿ ಸಮಸ್ಯೆ, ಗಂಟೆಗಾಡಿ ಸಮಸ್ಯೆ, ಹಾಗೂ ನೀರಿನ ಸಮಸ್ಯೆ ಬಹಳ ದಿನಗಳಿಂದ ಇದ್ದು. ಇದರ ಬಗ್ಗೆ ನಗರಸಭೆಗೆ ಹಲವು ಬಾರಿ ಸಮಸ್ಯೆಯನ್ನು ಹೇಳಿಕೊಂಡರು ಏನು ಪ್ರಯೋಜನ ಆಗದ ಕಾರಣ ಇಂದು ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಸಾರ್ವಜನಿಕರು ನಗರಸಭೆಯಲ್ಲಿ ಪ್ರತಿಭಟನೆ ನಡೆಸಿದರು.

ಈ ವೇಳೆ ಮನವಿಯನ್ನು ಸ್ವೀಕರಿಸಿದ ಆಯುಕ್ತರು ಶೀಘ್ರದಲ್ಲಿ ಸಮಸ್ಯೆಗಳನ್ನು ಪರಿಹರಿಸುತ್ತೇವೆ ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಗೌರವಾಧ್ಯಕ್ಷ ಪಂಚಾಕ್ಷರಿ, ಜಿಲ್ಲಾ ವಕ್ತರರು ಕೋಟೆ ಸೋಮಣ್ಣ, ಜಿಲ್ಲಾ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ನಾಗಲತಾ, ಕಾರ್ಯದರ್ಶಿ ಅನ್ನಪೂರ್ಣ, ತಾಲೂಕು ಅಧ್ಯಕ್ಷರು ಪೂರ್ಣಿಮಾ, ನಗರ ಕಾರ್ಯದರ್ಶಿ ಶ್ವೇತ, ಸಾಂಸ್ಕೃತಿಕ ಘಟಕದ ಅಧ್ಯಕ್ಷರು ಭಾರತಿ, ಆಶಾ ನಗರ ಕಾರ್ಯದರ್ಶಿ, ಹಾಗೂ ಮಹಿಳಾ ಘಟಕದ ಎಲ್ಲಾ ಪದಾಧಿಕಾರಿಗಳು, ಹಾಗೂ ಸ್ಥಳೀಯರಾದ ರಾಘವೇಂದ್ರ, ತಾರಾಮಣಿ, ಲಕ್ಷ್ಮೀ, ಗೌರಮ್ಮ, ತೇಜು, ಪುಷ್ಪ, ಚೆಲುವಮ್ಮ, ನವೀನ್, ಅಭಿ, ಚಂದ್ರಣ್ಣ, ಕರವೇ ಭರತ್, ಸುಂದರೇಶ್, ಮತ್ತಿತರರು ಉಪಸ್ಥಿತರಿದ್ದರು.