ಕಟ್ಟಾಯ-ದೇಶದ ಜನತೆಗೆ ಶುದ್ಧ ಕುಡಿಯುವ ನೀರು ಒದಗಿಸುವ ಮೋದಿಜಿ ಕನಸು ಜೆ.ಜೆ.ಎಂ ಯೋಜನೆ ಅಡಿ ನನಸಾಗುತ್ತಿದೆ-ಸಿಮೆಂಟ್ ಮಂಜು

ಕಟ್ಟಾಯ-ದೇಶದ ಜನತೆಗೆ ಶುದ್ಧ ಕುಡಿಯುವ ನೀರು ಒದಗಿಸುವ ಮೋದಿಜಿ ಕನಸು ಜೆ.ಜೆ.ಎಂ ಯೋಜನೆ ಅಡಿ ನನಸಾಗುತ್ತಿದ್ದು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಶಾಸಕ ಸಿಮೆಂಟ್ ಮಂಜು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಹಾಸನ ಜಿಲ್ಲೆ ಕಟ್ಟಾಯ ಹೋಬಳಿ ಶೆಟ್ಟಳ್ಳಿ ಗ್ರಾಮ ಪಂಚಾಯಿತಿ, ಮಾದಿಹಳ್ಳಿ ಹಾಗೂ ಕಟ್ಟಾಯ ಪಂಚಾಯತಿಗಳ ಹಲವು ಗ್ರಾಮಗಳಿಗೆ ಜಲ್ ಜೀವನ್ ಮಿಷನ್ ಯೋಜನೆ ಅಡಿ ತಲಾ 39 ಲಕ್ಷ ರೂ ಗಳ ಅಂದಾಜು ವೆಚ್ಚದಲ್ಲಿ ನಡೆಯಲಿರುವ ಕಾಮಗಾರಿಗಳ ಭೂಮಿ ಪೂಜೆಯನ್ನು ನೆರವೇರಿಸಿ ಮಾತನಾಡಿದರು.

ಗ್ರಾಮೀಣ ಭಾಗದ ಜನತೆ ಈಗಲೂ ನೀರಿಗಾಗಿ ಪರಿತಪಿಸುತ್ತಿರುವುದು ದುರ್ದೈವವೇ ಸರಿ. ಕೇಂದ್ರ ಸರ್ಕಾರದ ಜೆ.ಜೆ.ಎಂ ಯೋಜನೆ ಮಹತ್ವಕಾಂಕ್ಷೆ ಯೋಜನೆಯಾಗಿದ್ದು ಈ ಯೋಜನೆಯನ್ನು ವಿಸ್ತಾರಪಡಿಸಲಾಗಿದೆ.ಈ ಯೋಜನೆಯಡಿ ಗ್ರಾಮಗಳಿಗೆ ಜಲಮೂಲಗಳಾದ ಹೊಳೆ, ಕೊಳವೆಬಾವಿ, ಕಾಲುವೆ, ಮುಂತಾದ ಮೂಲಗಳಿಂದ ಶಾಶ್ವತವಾಗಿ ನೀರನ್ನು ಪೂರೈಸುವ ಗುರಿ ಹೊಂದಲಾಗಿದೆ.

ಆಲೂರು ಕಟ್ಟಾಯ ಸಕಲೇಶಪುರ ಕ್ಷೇತ್ರಕ್ಕೆ ಬಹುಗ್ರಾಮ ಕುಡಿಯುವ ನೀರು ಯೋಜನೆ ಅಡಿ ಗೊರೂರು ಹೇಮಾವತಿ ಜಲಾಶಯದಿಂದ ನೀರನ್ನು ಪೂರೈಸುವ ಯೋಜನೆ ರೂಪಿಸಲಾಗಿದೆ. ಗುತ್ತಿಗೆದಾರರು ಉತ್ತಮ ಗುಣಮಟ್ಟದ ಕಾಮಗಾರಿಯನ್ನು ಮಾಡಿ ಶೀಘ್ರದಲ್ಲಿ ಜೆ.ಜೆ. ಎಂ ಕುಡಿಯುವ ನೀರನ್ನು ಒದಗಿಸಬೇಕೆಂದು ಶಾಸಕರು ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಚಂದ್ರಮ್ಮ, ಕಟ್ಟಾಯ ಗ್ರಾಮ ಪಂಚಾಯಿತಿ ಪಿಡಿಒ ಪುಷ್ಪಲತಾ, ಗೊರೂರು ಗ್ರಾಮ ಪಂಚಾಯತಿ ಅಧ್ಯಕ್ಷ ನಿಂಗರಾಜು, ಧರಣಿ, ಕುಮಾರ್, ಬಿಜೆಪಿ ಮುಖಂಡರು ಹರೀಶ್ ಕುಮಾರ್ ಶೆಟ್ಟಿಹಳ್ಳಿ, ವಿಶ್ವನಾಥ್ ಕಲ್ಲಹಳ್ಳಿ, ಚಂದು ಬಳ್ಳೆಕೆರೆ, ರಕ್ಷಿತ್, ಹರೀಶ್, ಜಿಲ್ಲಾ ಪಂಚಾಯತ್, ಶರತ್, ಮುಂತಾದವರು ಉಪಸ್ಥಿತರಿದ್ದರು.

————-ಧರ್ಶನ್ ಕೆರೇಹಳ್ಳಿ

Leave a Reply

Your email address will not be published. Required fields are marked *

× How can I help you?