ಕೊಪ್ಪಳ: ಕೊಪ್ಪಳದಲ್ಲಿ ಜರುಗಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ತುಮಕೂರು ಜಿಲ್ಲೆಯ ನಾಲ್ವರಿಗೆ ವಿವಿಧ ದತ್ತಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಸಂಘದಲ್ಲಿ ಪ್ರಸಕ್ತ ಸಾಲಿನಿಂದ ಸಂಪಾದಕ ಎಸ್.ನಾಗಣ್ಣ ಅವರು ಸ್ಥಾಪಿಸಿರುವ ಪ್ರಜಾಪ್ರಗತಿ ದತ್ತಿಪ್ರಶಸ್ತಿಯನ್ನು ಹಿರಿಯ ಪತ್ರಕರ್ತ ಎಚ್.ಎನ್.ಮಲ್ಲೇಶ್ ಅವರಿಗೆ, ಎಸ್.ವಿ.ಜಯಶೀಲರಾವ್ ದತ್ತಿ ಪ್ರಶಸ್ತಿಯನ್ನು ಹಿರಿಯ ಪತ್ರಿಕಾ ಛಾಯಾಗ್ರಾಹಕ ಅನುಶಾಂತರಾಜ್, ಬದರಿನಾಥ ಹೊಂಬಾಳೆ ದತ್ತಿ ಪ್ರಶಸ್ತಿ ಯನ್ನು ಹಿರಿಯ ಸಂಪಾದಕ ಗಂಗಹನುಮಯ್ಯ ಹಾಗೂ ಕೃಷ್ಣರಾವ್ ದತ್ತಿ ಪ್ರಶಸ್ತಿಯನ್ನು ಉಗಮ ಶ್ರೀನಿವಾಸ್ ಅವರಿಗೆ ಪ್ರಧಾನ ಮಾಡಲಾಯಿತು.

ಸಚಿವರಾದ ಶಿವರಾಜ ತಂಗಡಗಿ, ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್, ರಾಘವೇಂದ್ರ ಹಿಟ್ನಾಳ್, ಕುಲಪತಿ ಪ್ರೊ ಬಿ.ಕೆ.ರವಿ, ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಜಿಲ್ಲಾಧ್ಯಕ್ಷ ಹನುಮಂತ ಹಳ್ಳಿಕೇರಿ, ತುಮಕೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ಚಿ.ನಿ. ಪುರುಷೋತ್ತಮ್,ಪ್ರಧಾನ ಕಾರ್ಯದರ್ಶಿ ರಘುರಾಂ,ಸಿದ್ದಲಿಂಗಸ್ವಾಮಿ,ಹರೀಶ್ ಆಚಾರ್ಯ,ಟಿ.ಎನ್.ಮಧುಕರ್,ಚಿಕ್ಕೀರಪ್ಪ ಸೇರಿದಂತೆ ಜಿಲ್ಲಾ ಪದಾಧಿಕಾರಿಗಳಿದ್ದರು.
-ಕೆ.ಬಿ.ಚಂದ್ರಚೂಡ