ಕೊರಟಗೆರೆ :- ರಾಜ್ಯ ಕಂಡ ಸಹಕಾರ ರತ್ನ, ಸಹಕಾರ ವಲಯದ ಸಮಗ್ರ ಅಭಿವೃದ್ಧಿಗೆ ಬದ್ಧತೆಯಿಂದ ತೊಡಗಿಸಿಕೊಂಡಿರುವ ಜನಪ್ರಿಯ ನಾಯಕ ಕೆ ಎನ್ ರಾಜಣ್ಣ ಅವರ 75ನೇ ವರ್ಷದ ಅಮೃತ ಮಹೋತ್ಸವನ್ನ ಜಾತ್ಯತೀತವಾಗಿ ಹಾಗೂ ಪಕ್ಷಾತೀತವಾಗಿ ಆಚರಿಸಲು ಸಕಲ ಸಿದ್ಧತೆ ನಡೆಸಲಾಗಿದ್ದು, ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಮಾಜಿ ಪಟ್ಟಣ ಪಂಚಾಯಿತಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯ ಎಡಿ ಬಲರಾಮಯ್ಯ ಮನವಿ ಮಾಡಿಕೊಂಡರು.

ಕೊರಟಗೆರೆ ಪಟ್ಟಣದ ಶ್ರೀ ಲಕ್ಷ್ಮಿ ನರಸಿಂಹ ಭವನದಲ್ಲಿ ಸಹಕಾರ ರತ್ನ ಕೆ ಎನ್ ರಾಜಣ್ಣನವರ ಹುಟ್ಟುಹಬ್ಬ ಆಚರಣೆಗಾಗಿ ಸಹಕಾರ ಸಂಘಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸುವ ಸದುದ್ದೇಶ ದೊಂದಿಗೆ ತುಮಕೂರು ಜೂನಿಯರ್ ಕಾಲೇಜ್ ಮೈದಾನದಲ್ಲಿ ಮೇ 13 ರಂದು ಆಯೋಜಿಸಲಾಗಿರುವ 75 ನೇ ವರ್ಷದ ಅಮೃತ ಮಹೋತ್ಸವ ಕಾರ್ಯಕ್ರಮದ ಪ್ರಯುಕ್ತ ಪೂರ್ವಭಾವಿ ಸಭೆ ಉದ್ದೇಶಿಸಿ ಮಾತನಾಡುತ್ತಾ ಈ ಅಮೃತ ಮಹೋತ್ಸವವನ್ನ ತುಮಕೂರಿನ ಇತಿಹಾಸದಲ್ಲಿ ಸೇರುವಂತ ಕಾರ್ಯಕ್ರಮವಾಗಬೇಕು ಎಂದು ಪ್ರತಿಕ್ರಿಯಿಸಿದರು.
ಕೆ ಎನ್ ರಾಜಣ್ಣ ನವರು ದೀನ ದಲಿತ ಅಸಕ್ತ ಅಸಹಾಯಕರ ಆಶಾಕಿರಣ ವಾಗಿದ್ದು, ಸಾರ್ವಜನಿಕ ಜೀವನದ ಜೊತೆಗೆ ಸಹಕಾರ ಕ್ಷೇತ್ರದಲ್ಲಿ ಅಮೂಲ್ಯ ಅಗ್ರ ಸೇವೆ ಸಲ್ಲಿಸಿರುವ ಇವರು ಸಹಕಾರ ರತ್ನ ಎಂಬ ಬಿರುದು ಪಡೆದು ಸಹಕಾರಕ್ಷೇತ್ರದಲ್ಲಿ ತನ್ನದೇ ಆದ ಕೊಡುಗೆ ಜೊತೆಗೆ ಜನಸಾಮಾನ್ಯರಿಗೆ ಸಹಕಾರ ಕ್ಷೇತ್ರದಿಂದ ಪಡೆಯಬಹುದಾದಂತಹ ಸವಲತ್ತುಗಳನ್ನು ಅರಳಿಕರಣ ಗೊಳಿಸಿ ಜನಸಾಮಾನ್ಯರಿಗೆ ಕೈಗೆಟುವಂತೆ ಮಾಡಿದ ಏಕೈಕ ಸಹಕಾರ ರತ್ನ ಕೆ ಎನ್ ರಾಜಣ್ಣ ಇವರ ಹುಟ್ಟುಹಬ್ಬವನ್ನ ಬಹಳ ಅರ್ಥಪೂರ್ಣವಾಗಿ ಆಚರಿಸಬೇಕು ಎಂದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಹನುಮಾನ್ ಮಾತನಾಡಿ ಶ್ರೀ ಕೆ.ಎನ್. ರಾಜಣ್ಣರವರು ಕಳೆದ 50 ವರ್ಷಗಳ ಸಾಮಾಜಿಕ, ಸಹಕಾರ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳನ್ನು ಗುರುತಿಸಿ, ಅವರ ಬದುಕಿನ ಸಾರ್ಥಕತೆಯ 75ನೇ ಜನ್ಮದಿನದ ಅಂಗವಾಗಿ ಸಾರ್ವಜನಿಕವಾಗಿ ಗೌರವಿಸಿ, ಅಭಿನಂದಿಸಲು ತೀರ್ಮಾನಿಸಿ, ಕೆ.ಎನ್.ಆರ್ ಅಭಿನಂದನಾ ಗ್ರಂಥ ಬಿಡುಗಡೆಗೊಳಿಸಲು ಸಕಲ ಸಿದ್ಧತೆ ನಡೆಸಲಾಗಿದ್ದು ಮೇ 5 ರಂದು ತುಮಕೂರು ನಗರದ ಬಿ.ಎಚ್. ರಸ್ತೆಯ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಬೃಹತ್ ಕಾರ್ಯಕ್ರಮ ಏರ್ಪಡಿಸಲ್ಲಾಗಿದ್ದು ಕಾರ್ಯಕ್ರಮ ಯಶಸ್ವಿಗೆ ಪಕ್ಷಾತೀತವಾಗಿ ಹಾಗೂ ಜಾತ್ಯತೀತವಾಗಿ ಬೆಂಬಲಿಸುವಂತೆ ಕೋರಿದರು.

ಕೊರಟಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶ್ವಥ್ ನಾರಾಯಣ್ ಮಾತನಾಡಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗೃಹ ಸಚಿವ ಡಾ ,ಜಿ ಪರಮೇಶ್ವರ್ ಮಾರ್ಗದರ್ಶನದಂತೆ ಸಹಕಾರಿ ಸಚಿವ ಕೆ ಎನ್ ರಾಜಣ್ಣನವರ 75ನೇ ವರ್ಷದ ಅಮೃತ ಮಹೋತ್ಸವ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಕೊರಟಗೆರೆ ಭಾಗದಿಂದ ಹತ್ತು ಸಾವಿರಕ್ಕೂ ಹೆಚ್ಚು ಜನ ಈ ಕಾರ್ಯಕ್ರಮಕ್ಕೆ ಭಾಗವಹಿಸಲಿದ್ದೇವೆ , ಕೆ ಎನ್ ರಾಜಣ್ಣನವರು ವಿಧಾನ ಪರಿಷತ್ತಿನ ಸದಸ್ಯರಾಗಿ, ಬೆಳ್ಳಾವಿ ಶಾಸಕರಾಗಿ, ಪ್ರಸ್ತುತ ಎರಡನೇ ಅವಧಿಗೆ ಮಧುಗಿರಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕಿನ ಅಧ್ಯಕ್ಷರಾಗಿ, ಹಾಲಿ ನಿರ್ದೇಶಕರಾಗಿ ಮತ್ತು ತುಮಕೂರು ಡಿಸಿಸಿ ಬ್ಯಾಂಕಿನಲ್ಲಿ ಕಳೆದ 3 ದಶಕಗಳಿಂದ ಅಧ್ಯಕ್ಷರಾಗಿ ಜಿಲ್ಲೆಯ ರೈತರ ಹಿತೈಷಿಯಾಗಿ ಅತ್ಯುತ್ತಮ ಮಾರ್ಗದರ್ಶನ ನೀಡುತ್ತಿದ್ದಾರೆ ಎಂದರು.

ತುಮಕೂರು ಕೆಎಂಎಫ್ ಕೊರಟಗೆರೆ ನಿರ್ದೇಶಕ ಸಿದ್ದಗಂಗಯ್ಯ ಮಾತನಾಡಿ ಕೆ.ಎನ್.ರಾಜಣ್ಣ ರವರುನೇರ ನಡೆ ನುಡಿಯ ಸಹಕಾರ ಮೂರ್ತಿಯಾಗಿದ್ದು, ಪಕ್ಷಾತೀತವಾಗಿ, ಜಾತ್ಯಾತೀತವಾಗಿ, ರೈತರ, ಅಬಲರ, ಶೋಷಿತರ ಹಾಗೂ ಎಲ್ಲಾ ಜಾತಿಯಲ್ಲಿರುವ ಬಡವರ ಏಳಿಗೆಗೆ ನಿರಂತರ ಶ್ರಮಿಸುತ್ತಿರುವ ಓರ್ವ ಸಹಕಾರಿ ವ್ಯಕ್ತಿತ್ವವುಳ್ಳ ಇಂತಹ ಅತ್ಯುತ್ತಮ ವ್ಯಕ್ತಿಗೆ ಪಕ್ಷಾತೀತವಾಗಿ ಹಾಗೂ ಜಾತ್ಯತೀತವಾಗಿ ಬೆಂಬಲಿಸಿ ಅಮೃತ ಮಹೋತ್ಸವ ಯಶಸ್ವಿಗೆ ಸಹಕರಿಸುವಂತೆ ಕೋರಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆ ಶಂಕರ ಮಾತನಾಡಿ. ಕೆ ಎನ್ ರಾಜಣ್ಣನವರು ಅನುಭವಿ ಸಹಕಾರಿ ಮುಖಂಡರಾಗಿ, ಸರ್ಕಾರದಲ್ಲಿ ಸಹಕಾರ ಸಚಿವರಾಗಿ ಸಹಕಾರ ಕ್ಷೇತ್ರದ ಬಲವರ್ಧನೆಗೆ ತಮ್ಮ ದೂರದೃಷಿ ಚಿಂತನೆಗಳೊಂದಿಗೆ ಹಲವು ಸಾಮಾಜಿಕ-ಆರ್ಥಿಕ ಬೆಳವಣಿಗೆಗೆ ಕಂಕಣ ಬದ್ಧರಾಗಿದ್ದಾರೆ ಎಂದರು.
ಕಾಂಗ್ರೆಸ್ ಮುಖಂಡ ಕಲ್ಲಹಳ್ಳಿ ದೇವರಾಜ್ ಮಾತನಾಡಿ, ಕರ್ನಾಟಕ ಸರ್ಕಾರದ ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯರವರು, ಉಪಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ರವರು, ಗೃಹ ಸಚಿವರಾದ ಡಾ. ಜಿ. ಪರಮೇಶ್ವರ್ ರವರು, ಕೇಂದ್ರ ಸಹಾಯಕ ರೈಲ್ವೇ ಮತ್ತು ಜಲಶಕ್ತಿ ಸಚಿವರಾದ ಶ್ರೀ ವಿ. ಸೋಮಣ್ಣರವರು, ಜಿಲ್ಲೆಯ ಹಿರಿಯ ನಾಯಕರು ಸೇರಿದಂತೆ ಸಚಿವರು, ಶಾಸಕರು, ಸಹಕಾರಿ ಮುಖಂಡರುಗಳು, ಗಣ್ಯರುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ಎಂ ಡಿ ಜಂಗಮಪ್ಪ, ಕೆಎಂಎಫ್ ಶ್ರೀನಿವಾಸ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಲಕ್ಷ್ಮೀನಾರಾಯಣ್ , ವೆಂಕಟೇಶ್ ಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.