ಕೊರಟಗೆರೆ-ಗೋವಾಕ್ಕೆ ಹೋಗಿ ಹಿಂದಿರುಗುತ್ತಿದ್ದ ಸಮಯದಲ್ಲಿ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಒಬ್ಬ ಯುವಕ ಸ್ಥಳದಲ್ಲಿಯೇ ಸಾವಿಗೀಡಾ್ದರೆ ಮತ್ತೊಬ್ಬ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮದ್ಯದಲ್ಲಿ ಮೃತಪಟ್ಟಿರುವ ದುರ್ಘಟನೆ ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ತಾಲ್ಲೂಕಿನ ಕಂಬದಹಳ್ಳಿ ಬಳಿ ಈ ದುರ್ಘಟನೆ ನಡೆದಿದ್ದು,ಬೆಂಗಳೂರಿನಿಂದ ಪಾವಗಡಕ್ಕೆ ಸಂಪರ್ಕಿಸುವ ಹೆದ್ದಾರಿಯಲ್ಲಿ ಬರುತ್ತಿದ್ದ ಕಾರು ತಿರುವಿನಲ್ಲಿ ಬಂದ ಲಾರಿಯನ್ನ ಗಮನಿಸದೇ ಭೀಕರ ರಸ್ತೆ ಅಪಘಾತ ನಡೆದಿದೆ ಎನ್ನಲಾಗಿದೆ.
ತಾಲ್ಲೂಕಿನ ಹೊಳವನಹಳ್ಳಿ ಗ್ರಾಮದ ಬಸಣ್ಣನವರ ಮಗ ಪ್ರವೀಣ್ ( 23) ಹಾಗೂ ರಂಗನಾಥನವರ ಮಗ ಹರ್ಷೀತ್ (22) ಮೃತ ದುರ್ದೈವಿಗಳಾಗಿದ್ದು, ಮೂವರು ಸ್ನೇಹಿತರು ಗೋವಾಕ್ಕೆ ಹೋಗಿ ಈ ಮೂವರ ಪೈಕಿ ಹರ್ಷಾ ಎಂಬುವರು ಶಿರಾದಲ್ಲಿ ಇಳಿದಿದ್ದು ಅದೃಷ್ಟವ ಶಾತ್ ಅಪಾಯದಿಂದ ಪಾರಾಗಿದ್ದಾನೆ.ರಸ್ತೆ ಅಪಘಾತದಲ್ಲಿ ಕಾರು ನಜ್ಜುಗುಜ್ಜಾಗಿದ್ದು, ಕಾರಿನಲ್ಲಿ ಎಷ್ಟೇ ಜನರಿದ್ದರೂ ಅಷ್ಟೂ ಜನರು ಸಾವಿಗೀಡಾಗುತ್ತಿದ್ದರೂ ಎನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿವೆ.
ಈ ಸಂಬಂಧ ಕೊರಟಗೆರೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪಿಎಸ್ಐ ಚೇತನ್ ಗೌಡ ಹಾಗೂ ಸಿಪಿಐ ಅನಿಲ್ ಕುಮಾರ್ ಭೇಟಿ ನೀಡಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
—————–ಶ್ರೀನಿವಾಸ್ ಕೊರಟಗೆರೆ