ಕೊರಟಗೆರೆ – ಇಸ್ಪೀಟ್ ಅಡ್ಡೆಯ ಮೇಲೆ ದಾಳಿ- 4600 ರೂ.ನಗದು- 7 ಜನ ಆರೋಪಿಗಳ ಬಂಧನ

ಕೊರಟಗೆರೆ :- ಇಸ್ಪೀಟ್ ಅಡ್ಡೆಯ ಮೇಲೆ ನಿಖರ ಮಾಹಿತಿ ಮೇರೆಗೆ ಕೋಳಾಲ ಪಿ ಎಸ್ ಐ ಯೋಗೇಶ್ ನೇತೃತ್ವದಲ್ಲಿ ದಾಳಿ ನಡೆದು 4600 ನಗದು 7 ಜನ ಆರೋಪಿಗಳನ್ನ ವಶಕ್ಕೆ ಪಡೆದಿದ್ದಾರೆ.

ಕೊರಟಗೆರೆ ತಾಲೂಕಿನ ಕೋಳಾಲ ಪೊಲೀಸ್ ಠಾಣೆಯ ಕೆಂಗನಪಾಳ್ಯ ಗ್ರಾಮದ ಹೊಂಗೆ ಮರದ ಕೆಳಗಡೆ ಇಸ್ಪೀಟ್ ಆಡುವ ನಿಖರ ಮಾಹಿತಿಯರಿತು ಪಿಎಸ್ಐ ಯೋಗೇಶ್ ಪೊಲೀಸ್ ಸಿಬ್ಬಂದಿಗಳಾದ ಸಂಜೀವರಾಜು , ಪ್ರಕಾಶ, ಮಧು ,ವೆಂಕಟರಮಣಪ್ಪ ಪೊಲೀಸ್ ದಾಳಿಯ ಸಂದರ್ಭದಲ್ಲಿ ಹಾಜರಿದ್ದು 4,600 ನಗದು ಹಾಗೂ ಏಳು ಜನ ಆರೋಪಿಗಳನ್ನ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಸಂಬಂಧ ಕೋಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಐ ಅನಿಲ್ ಮಾರ್ಗದರ್ಶನದಂತೆ ಪಿಎಸ್ಐ ಯೋಗೇಶ್ ಕೇಸು ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ನರಸಿಂಹಯ್ಯ ಕೋಳಾಲ

Leave a Reply

Your email address will not be published. Required fields are marked *