ಕೊರಟಗೆರೆ:-35 ಕ್ಕೂ ಹೆಚ್ಚು ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದಲ್ಲಿರುವ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯದಲ್ಲಿ ಗುರುಸ್ವಾಮಿಗಳ ಜೊತೆಗೆ ಇರುಮುಡಿ ಕಟ್ಟಿಸಿಕೊಂಡು ಅಯ್ಯಪ್ಪ ಸ್ವಾಮಿಯ ದರ್ಶನಕ್ಕಾಗಿ ಶಬರಿಮಲೆಗೆ ತೆರಳಿದರು.
ಮಾಲಾಧಾರಿಗಳನ್ನ ಆಶೀರ್ವದಿಸಿ ಮಾತನಾಡಿದ ಶ್ರೀಗಳು ಅತ್ಯಂತ ನೇಮ-ನಿಷ್ಠೆಯಿಂದ ವೃತ ನೆರವೇರಿಸಿ ಅಯ್ಯಪ್ಪನ ದರ್ಶನಕ್ಕಾಗಿ ತಾವೆಲ್ಲ ತೆರಳುತ್ತಿದ್ದೀರಿ.ಅಯ್ಯಪ್ಪ ಸ್ವಾಮಿ ನಿಮಗೂ ಹಾಗು ನಿಮ್ಮ ಕುಟುಂಬಗಳಿಗೂ ಹೆಚ್ಚಿನ ಆಯುರಾರೋಗ್ಯ ನೀಡಲಿ,ನಿಮ್ಮ ಪ್ರಯಾಣ ಸುಖಕರವಾಗಿರಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ ಚಂದ್ರಶೇಖರ್,ರೈತ ಮುಖಂಡ ದೇವರಾಜು,ಮಾಲಾಧಾರಿಗಳಾದ ಯೋಗರಾಜ್, ರಮೇಶ್, ಪುಟ್ಟಣ್ಣ, ದೇವರಾಜು ಸೇರಿದಂತೆ ಇತರರು ಇದ್ದರು.
———–———–ನರಸಿಂಹಯ್ಯ ಕೋಳಾಲ