ಕೊರಟಗೆರೆ-ಕೊರಟಗೆರೆ ಪಟ್ಟಣದಲ್ಲಿ ಶ್ರೀ ಭಗವಾನ್ ಅಯ್ಯಪ್ಪಸ್ವಾಮಿ ಸೇವಾ ಸಮಿತಿ ಹಾಗೂ ಶ್ರೀ ಮಣಿಕಂಠಸ್ವಾಮಿ ಕಟ್ಟಡ ಸೇವಾ ಸಮಿತಿ ವತಿಯಿಂದ ಇಂದು ಶ್ರೀ ಅಯ್ಯಪ್ಪಸ್ವಾಮಿ ಪಲ್ಲಕ್ಕಿ ಉತ್ಸವ,ವೀರಮಣಿರಾಜು ರವರ ತಂಡದಿಂದ ಭಜನೆ, ಪಡಿಪೂಜೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಕಾರ್ಯದರ್ಶಿ ಸದಾಶಿವಯ್ಯ ತಿಳಿಸಿದ್ದಾರೆ.
ಕೊರಟಗೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಂಗಳವಾರದಂದು ಪಟ್ಟಣ ಪಂಚಾಯಿತಿ ಮುಂಭಾಗ ಸಂಜೆ 7 ಗಂಟೆಗೆ ಸಿದ್ದರಬೆಟ್ಟ ರಂಭಾಪುರಿ ಖಾಸಾ ಶಾಖಾ ಮಠದ ಶ್ರೀ ವೀರಭದ್ರಶಿವಾಚಾರ್ಯ ಸ್ವಾಮೀಜಿ, ಎಲೆರಾಂಪುರ ಶ್ರೀ ಕ್ಷೇತ್ರ ನರಸಿಂಹಗಿರಿ ಡಾ.ಶ್ರಿ ಹನುಮಂತನಾಥಸ್ವಾಮೀಜಿ ರವರ ದಿವ್ಯ ಸಾನಿದ್ಯದಲ್ಲಿ ರಾಜ್ಯದ ಗೃಹ ಸಚಿವರು ಹಾಗೂ ಕ್ಷೇತ್ರದ ಶಾಸಕರಾದ ಡಾ.ಜಿ.ಪರಮೇಶ್ವರ್ ರವರ ಅಧ್ಯಕ್ಷತೆಯಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವರಾದ ವಿ.ಸೋಮಣ್ಣ ನವರು ಕಾರ್ಯಕ್ರಮವನ್ನು ಉದ್ಘಾಟಿಸುವರು.ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಮಾಜಿ ಶಾಸಕರುಗಳಾದ ಡಿ.ಸಿ. ಗೌರಿಶಂಕರ್, ಪಿ.ಆರ್.ಸುಧಾಕರ್ ಲಾಲ್, ನಿವೃತ್ತ ಐ.ಎ.ಎಸ್ ಅಧಿಕಾರಿ ಹಾಗೂ ಬಿಜೆಪಿ ಮುಖಂಡ ಜಿ.ಜೆಚ್.ಅನೀಲ್‍ಕುಮಾರ್ ಸೇರಿದಂತೆ ಇನ್ನಿತರರು ಭಾಗವಹಿಸುತ್ತಿರುವುದಾಗಿ ತಿಳಿಸಿದರು.
ಸಮಿತಿಯ ಖಜಾಂಚಿ ಶಿವಕುಮಾರ್ ಮಾತನಾಡಿ, ಕೊರಟಗೆರೆ ಪಟ್ಟಣದಲ್ಲಿ ಮಂಗಳವಾರ ದಂದು ಹಮ್ಮಿಕೊಂಡಿರುವ 35 ನೇ ವರ್ಷದ ಶ್ರೀ ಅಯ್ಯಪ್ಪಸ್ವಾಮಿ ಪಲ್ಲಕ್ಕಿ ಉತ್ಸವ ಹಾಗೂ ಪಡಿಪೂಜೆ ಕಾರ್ಯಕ್ರಮದಲ್ಲಿ ತಮಿಳುನಾಡಿನ ಹೆಸರಾಂತ ಹರಿಹರಾತ್ಮಜಂ ಖ್ಯಾತಿಯ ಶ್ರೀ ವೀರಮಣಿರಾಜು ರವರ ತಂಡದಿಂದ ಅಯ್ಯಪ್ಪಸ್ವಾಮಿ ಭಜನೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ಈ ಪೂಜಾ ಕಾರ್ಯಕ್ರಮದಲ್ಲಿ ತಾಲೂಕಿನ 3 ಸಾವಿರಕ್ಕೂ ಹೆಚ್ಚು ಅಯ್ಯಪ್ಪ ಮಾಲಾಧಾರಿಗಳು ಹಾಗೂ ಭಕ್ತರು ಭಾಗವಹಿಸಲಿದ್ದಾರೆ.ಪೂಜಾ ಕಾರ್ಯಕ್ರಮದ ನಂತರ ಭಾವಹಿಸುವ ಎಲ್ಲಾ ಭಕ್ತರಿಗೂ ಪ್ರಸಾದ ವಿನಿಯೋಗ ಮಾಡಲಾಗುವುದು ಎಂದು ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಅಯ್ಯಪ್ಪಸ್ವಾಮಿ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಬಿ.ಲೋಕೇಶ್, ಸಹ ಕಾರ್ಯದರ್ಶಿ ಕೆ.ವಿ.ಪುರುಷೋತ್ತಮ್, ಹೂ ಮಂಜುನಾಥ್, ಗಂಗಾಧರ್, ಬೆಂಡ್ ಮಂಜುನಾಥ್, ಹೋಟೆಲ್ ಮಂಜುನಾಥ್ ಸೇರಿದಂತೆ ಅಯ್ಯಪ್ಪ ಮಾಲಾಧಾರಿಗಳು ಉಪಸ್ಥಿತರಿದ್ದರು.
———-ಪ್ರದೀಪ್ ಮಧುಗಿರಿ