ಕೊರಟಗೆರೆ-ಕಳೆದ 27 ವರ್ಷಗಳ ಕಾಲ ದೈಹಿಕ ಶಿಕ್ಷಣ ಶಿಕ್ಷಕರಾಗಿ ನಂತರ 3 ವರ್ಷಗಳ ಕಾಲ ಕೊರಟಗೆರೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷರಾಗಿ ಉತ್ತಮ ಕಾರ್ಯ ನಿರ್ವಹಿಸಿ ವಯೋ ನಿವೃತರಾಗಿರುವ ಬಿ.ಎಸ್ ಹನುಮಂತರಾಯಪ್ಪನವರ ಕಾರ್ಯ ಮತ್ತು ಶಿಸ್ತು ಇನ್ನಿತರ ಶಿಕ್ಷಕರಿಗೆ ಮಾರ್ಗದರ್ಶನವಾಗಲಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ನಟರಾಜ್ ಹಾರೈಸಿದರು.
ಅವರು ಕೊರಟಗೆರೆ ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಇಲಾಖೆ ಮತ್ತು ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಏರ್ಪಡಿಸಿದ್ದ ಬಿ.ಎಸ್ ಹನುಮಂತರಾಯಪ್ಪ ನವರಿಗೆ ಬಿಳ್ಕೊಡಿಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಿವೃತ್ತಿ ನೌಕರರಿಗೆ ಕಡ್ಡಾಯವಾಗಿದ್ದು ಅವರ ಸೇವಾ ಅವದಿಯಲ್ಲಿನ ಕಾರ್ಯವೇ ಸಾರ್ವಜನಿಕರ ಪ್ರೀತಿಗೆ ಪಾತ್ರರಾಗುತ್ತದೆ. ಹನುಮಂತರಾಯಪ್ಪ ನವರು 27 ವರ್ಷಗಳ ಕಾಲ ಸರ್ಕಾರಿ ಪ್ರೌಡಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ನಂತರ ಪದೋನ್ನತಿ ಪಡೆದು ಕಳೆದ 3 ವರ್ಷಗಳ ಕಾಲ ಕೊರಟಗೆರೆ ತಾಲೂಕಿನಲ್ಲಿ ದೈಹಿಕ ಪರಿವೀಕ್ಷಕರಾಗಿ ಕಾರ್ಯನಿರ್ವಹಿಸಿದ್ದಾರೆ.
ಆ ಸಂದರ್ಭದಲ್ಲಿ ತಾಲೂಕಿನ ಎಲ್ಲಾ ದೈಹಿಕ ಶಿಕ್ಷಕರನ್ನು ಸಂಘಟಿಸಿ ಹೋಬಳಿ ಮಟ್ಟದಿಂದ ರಾಜ್ಯ ಮಟ್ಟದ ಕ್ರೀಡೆಗಳನ್ನು ಉತ್ತಮ ರೀತಿಯಲ್ಲಿ ನಡೆಸಿ ತಾಲೂಕಿಗೆ ಹೆಸರು ತರುವ ಕೆಲಸಗಳು ಅವರಿಂದ ಆಗಿವೆ.ವಯೋ ನಿವೃತ್ತಿ ಹೊಂದುತ್ತಿರುವ ಆವರಿಗೆ ಇಲಾಖೆಯ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.
ಬಿಳ್ಕೊಡಿಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಬಿ.ಎಸ್.ಹನುಮಂತರಾಯಪ್ಪ, ನನ್ನ ಸೇವಾ ಅವದಿಯಲ್ಲಿ ನಾನು ಉತ್ತಮ ಸೇವೆ ಮಾಡಲು ಸಹಕರಿಸಿದ ಪುರವಾರ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ವೃಂದ ಹಾಗೂ ಕೊರಟಗೆರೆ ಶಿಕ್ಷಣಾಧಿಕಾರಿಗಳಾದ ನಟರಾಜುರವರು ಕಛೇರಿ ಸಿಬ್ಬಂದಿ ವರ್ಗದವರಿಗೆ ಹಾಗೂ ತಾಲೂಕಿನ ಎಲ್ಲಾ ದೈಹಿಕ ಶಿಕ್ಷಣ ಶಿಕ್ಷಕರು, ಸಹ ಶಿಕ್ಷಕರು, ಶಿಕ್ಷಕರ ಸಂಘದ ಎಲ್ಲಾ ಪಧಾದಿಕಾರಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ನನ್ನ ಸೇವಾ ಅವದಿಯಲ್ಲಿ ಯಾರಿಗಾದರೂ ನನ್ನಿಂದ ಬೇಸರವಾಗಿದ್ದಲ್ಲಿ ಕ್ಷಮಿಸುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ 2023-24 ನೇ ಸಾಲಿನಲ್ಲಿ ನಿವೃತ್ತರಾದ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀರಾಮಯ್ಯ, ಪರಮೇಶ್ವರ್, ವೆಂಕಟಸ್ವಾಮಿ, ಹನುಮಂತರಾಯಪ್ಪ, ಕೊರಟಗೆರೆ ತಾಲೂಕಿನಲ್ಲಿ ಉತ್ತಮ ಕಾರ್ಯನಿರ್ವಹಿಸಿ ವರ್ಗಾವಣೆಗೊಂಡ ಉಷಾ, ಮಂಜುಳಾ, ಜಯಮ್ಮ, ತಾಯಿಮುದ್ದಮ್ಮ ನವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಬಿಇಓ ನಟರಾಜು, ನಿವೃತ್ತ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಸಣ್ಣಯ್ಯ, ನಿವೃತ್ತ ಪರಿವೀಕ್ಷಕರುಗಳಾದ ಗುರುಪ್ರಕಾಶ್, ಶಿರಾ ಕುಮಾರ್, ಕೃಣ್ಣಪ್ಪರೆಡ್ಡಿ, ಬಿ.ಆರ್.ಸಿ ರುದ್ರೇಶ್, ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಕೋಟೆಕಲ್ಲಯ್ಯ, ಚಿಕ್ಕಪ್ಪಯ್ಯ, ಬಿ.ಜಿ.ಹನುಮಂತರಾಯಪ್ಪ, ವೆಂಕಟರಮಣಪ್ಪ, ಧರ್ಮೇಂದ್ರಪ್ರಸಾದ್, ದೈಹಿಕ ಶಿಕ್ಷಕ ವಜೀರ್‍ಖಾನ್, ಗುಂಡುರಾವ್, ಸತೀಶ್, ಸುಷ್ಮಾ, ಪ್ರಕಾಶ್, ಮಧುಗಿರಿ. ಪಾವಗಡ ಹಾಗೂ ಶಿರಾ ತಾಲೂಕಿನ ಎಲ್ಲಾ ದೈಹಿಕ ಶಿಕ್ಷಕರು ಹಾಜರಿದ್ದರು.
——————–-ಶ್ರೀನಿವಾಸ್ ಕೊರಟಗೆರೆ