ಕೊರಟಗೆರೆ :- ಕುತೂಹಲ ಕೆರಳಿಸಿದ್ದ ಕೊರಟಗೆರೆ ವಕೀಲ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಎಂಎಲ್ ಸಂತೋಷ್ ಉಪಾಧ್ಯಕ್ಷರಾಗಿ ಹನುಮಂತರಾಜು ಆಯ್ಕೆಯಾಗಿದ್ದಾರೆ.
ಕೊರಟಗೆರೆ ವಕೀಲ ಸಂಘಕ್ಕೆ ಗುರುವಾರ ಚುನಾವಣೆ ನಡೆದು ಅಧ್ಯಕ್ಷರಾಗಿ ಎಂ ಎಲ್ ಸಂತೋಷ್, ಉಪಾಧ್ಯಕ್ಷರಾಗಿ ಎಸ್.ಎನ್ ಹನುಮಂತರಾಜು,ಪ್ರಧಾನ ಕಾರ್ಯದರ್ಶಿಯಾಗಿ ಎಂ.ಎಚ್ ಮಂಜುನಾಥ್, ಜಂಟಿ ಕಾರ್ಯದರ್ಶಿಯಾಗಿ ಡಿ. ಕೃಷ್ಣಪ್ಪ, ಖಜಂಚಿಯಾಗಿ ಕುಮಾರಿ ಅರುಂಧತಿ ವಕೀಲರ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ .
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಎಂಎಲ್ ಸಂತೋಷ್ ಮಾತನಾಡಿ ಕೊರಟಗೆರೆ ವಕೀಲ ಸಂಘ ಬಹಳಷ್ಟು ಬಲಿಷ್ಠವಾಗಿದೆ, ವಕೀಲ ಸಂಘದಲ್ಲಿ ಇರಬಹುದಾದಂತ ಎಲ್ಲಾ ರೀತಿಯ ಸಮಸ್ಯೆಗಳಿಗೂ ಪರಿಹಾರ ಒದಗಿಸುವ ಕೆಲಸ ಮಾಡಲಾಗುವುದು ಜೊತೆಗೆ ವಕೀಲರ ಕ್ಷೇಮಾಭಿವೃದ್ಧಿಗೆ ಶ್ರಮಿಸುವ ಕೆಲಸ ಮಾಡುತ್ತೇನೆ ನನ್ನ ಮೇಲೆ ಭರವಸೆ ಇಟ್ಟು ಮತ ಹಾಕಿದ ಎಲ್ಲಾ ನನ್ನ ವೃತ್ತಿ ಬಾಂಧವರಿಗೆ ಧನ್ಯವಾದ ಅರ್ಪಿಸಿದರು.

ಉಪಾಧ್ಯಕ್ಷರಾದ ಹನುಮಂತರಾಜು ಮಾತನಾಡಿ ನನ್ನ ಗೆಲುವಿಗೆ ಸಹಕರಿಸಿದ ಎಲ್ಲಾ ವಕೀಲರಿಗೂ ಧನ್ಯವಾದಗಳು, ಎಲ್ಲಾ ವಕೀಲರೊಂದಿಗೆ ಸಾಮರಸ್ಯದಿಂದ ಬರಬಹುದಾದಂತಹ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ವಕೀಲರಾದ ಎ.ಎಂ ಕೃಷ್ಣಮೂರ್ತಿ, ಪುಟ್ಟರಾಜಯ್ಯ, ಅನಿಲ್ ಕುಮಾರ್, ಶಿವಕುಮಾರ್, ಸುನಿಲ್, ಎಂ.ಸಿ ಮಲ್ಲಿಕಾರ್ಜುನ್, ಬಿ.ಎಚ್ ನಾಗೇಂದ್ರಪ್ಪ, ಸಂತೋಷ್ ಲಕ್ಷ್ಮಿ, ಶಿಲ್ಪ, ಕೆಂಪರಾಜಮ್ಮ, ಬೃಂದಾ, ಮಂಜುಳಾ, ಶಿವರಾಜು, ತಿಮ್ಮೇಶ ಮಧುಸೂದನ್, ಕೆ. ಜೆ ನಾಗರಾಜು ಡಿ.ಜಿ ತಿಮ್ಮರಾಜು ಎಚ್ ಆರ್ ರಾಮಚಂದ್ರಯ್ಯ ಸೇರಿದಂತೆ ಹಿರಿಯ ಹಾಗೂ ಕಿರಿಯ ವಕೀಲರು ಹಾಜರಿದ್ದರು.
– ಶ್ರೀನಿವಾಸ್ , ಕೊರಟಗೆರೆ