ಕೊರಟಗೆರೆ:-ತಾಲ್ಲೂಕಿನ ಚನ್ನರಾಯದುರ್ಗ ಹೋಬಳಿಯ ಜೆಟ್ಟಿ ಅಗ್ರಹಾರ ಗ್ರಾಮದ ಕೆರೆಯಂಗಳದಲ್ಲಿ ಏಳು ಹಳ್ಳಿ ಗ್ರಾಮದೇವತೆ ಶ್ರೀ ಬೇವಿನಳಮ್ಮ ತಾಯಿಯ ಜಲಧಿ ಮಹೋತ್ಸವ ಶ್ರದ್ಧಾಭಕ್ತಿಯಿಂದ ನೆರೆವೇರಿತು.ದೇವಿಗೆ ವಿಶೇಷ ಹೂವಿನ ಅಲಂಕಾರ ಭಕ್ತರ ಕಣ್ಮನ ಸೆಳೆಯುವಂತಿತ್ತು. ಧಾರ್ಮಿಕ ಪೂಜೆ ಸಲ್ಲಿಸಿದ ನಂತರ ಗಂಗಾ ಪೂಜೆ ನೆಡೆಯಿತು.
ದೇವಿ ಕುಣಿತದ ನಂತರ ಸಾಮೂಹಿಕ ಪ್ರಸಾದ ವಿನಿಯೋಗ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಸಾಮಾಜಿಕ ಹೋರಾಟಗಾರ ಟೈಗರ್ ನಾಗ್ ಮಾತನಾಡಿ ಸುಮಾರು 250 ವರ್ಷಗಳ ಇತಿಹಾಸವುಳ್ಳ ದೇವಗಾನಿಕೆ ಶ್ರೀ ಬೇವಿನಳಮ್ಮ ತಾಯಿ ಏಳು ಜನ ಅಕ್ಕತಂಗಿಯರಲ್ಲಿ ತಾಯಿಯು ಒಬ್ಬಳು. ಈ ತಾಯಿಯ ಜಾತ್ರೆ-ಜಲಧಿ ವಿಶೇಷವಾಗಿ ಆಚರಣೆ ಮಾಡುತ್ತಾ ನಮ್ಮ ಪೂರ್ವಿಕರು ಬಂದಿದ್ದಾರೆ ಹಾಗೆ ನಾವು ಕೂಡ ಈ ಆಚರಣೆಯನ್ನು ಮುಂದುವರಿಸುತ್ತಾ ಬಂದಿದ್ದೇವೆ.ಈ ದೇವಿಯ ಜಾತ್ರೆಯನ್ನು ಐದು ವರ್ಷಕ್ಕೊಮ್ಮೆ ಮಾಡುತ್ತಿದ್ದು,ಜಲದಿಯನ್ನು ವರ್ಷಕ್ಕೊಮ್ಮೆ ಬಹಳ ಅರ್ಥಪೂರ್ಣವಾಗಿ ವಿಜೃಂಭಣೆಯಿಂದ ಆಚರಿಸುತ್ತಿದ್ದೇವೆ ಎಂದರು.

ಜಟ್ಟಿ ಅಗ್ರಹಾರ ಎಂದರೇ ಜಟ್ಟಿ ಮನೆತನದವರಿಗೆ ರಾಜರು ಮಹಾರಾಜರು ಉಡುಗೊರೆಯಾಗಿ ನೀಡಿದಂತಹ ಇತಿಹಾಸವುಳ್ಳ ಗ್ರಾಮವಾಗಿದ್ದು, ಇಲ್ಲಿ ನೆಲೆಸಿರುವ ಗ್ರಾಮ ಶಕ್ತಿ ಬೇವಿನಳಮ್ಮ ತಾಯಿಯು ಗ್ರಾಮಕ್ಕೆ ಯಾವುದೇ ತೊಂದರೆ ತೊಡಕುಗಳ ಆಗದಂತೆ ಕಾಪಾಡಿಕೊಂಡು ಬರುತ್ತಿದ್ದಾಳೆ. ಬರಗಾಲ ಬಂದಿರುವುದರಿಂದ ಅದ್ದೂರಿಯಾಗಿ ಜಾತ್ರೆ ಮಾಡಲು ಆಗದ ಕಾರಣ ಜಲದಿಯನ್ನು ಅದ್ದೂರಿಯಾಗಿ ಮಾಡುತ್ತಿದ್ದೇವೆ ಎಂದು ಸಮಾಜ ಸೇವಕ ಕೇಬಲ್ ಸಿದ್ದಗಂಗಯ್ಯ ತಿಳಿಸಿದರು.

ಈ ಸಂದರ್ಭದಲ್ಲಿ ಪೂಜಾರು ಲಕ್ಷ್ಮಿ ಶ್, ಗ್ರಾಮದ ಮುಖಂಡರುಗಳಾದ ಟೈಲರ್ ತಿಮ್ಮರಾಜು, ವಿನಯ್ ಕುಮಾರ್ ಎ ಬಿ,ನಂದೀಶ್ ಬಿ,ನೀತಿನ್ ಕುಮರ್,ಸುರೇಂದ್ರ ಬಾಬು,ರಮೇಶ್, ಎಆರ್ ಬಸವರಾಜು, ಕೇಬಲ್ ಸಿದ್ದಗಂಗಯ್ಯ,ಮಂಜುನಾಥ್,ಹನುಮಂತರಾಜು, ಚಂದ್ರು, ಬಂಡೆ ರಂಗಪ್ಪ, ಸಿದ್ದರಾಜು, ಅಶೋಕ, ವೀರೇಶ,ನಾಗರಾಜು,ಚಂದ್ರು, ಕೆಂಪರಾಜು,ಸುದೀಪ್,ಸುರೇಶ್, ಸೇರಿದಂತೆ ಅಕ್ಕ ಪಕ್ಕ ಗ್ರಾಮಸ್ಥರು ಭಕ್ತರು ಭಾಗವಹಿಸಿದ್ದರು.
- ಶ್ರೀನಿವಾಸ್ , ಕೊರಟಗೆರೆ .