ಕೊರಟಗೆರೆ : ಪಟ್ಟಣದ ಡಾ. ಅಂಬೇಡ್ಕರ್ ಭವನದಲ್ಲಿ ಭೀಮ್ ಆರ್ಮಿ ವತಿಯಿಂದ ಸಂವಿಧಾನದ ಅರಿವು ಕಾರ್ಯಕ್ರಮ ಹಾಗೂ ತಾಲ್ಲೂಕು ಅಧ್ಯಕ್ಷರ, ಪದಗ್ರಹಣ ನೂತನ ತಾಲ್ಲೂಕು ಶಾಖೆ ಉಧ್ವಾಟನಾ ಕಾರ್ಯಕ್ರಮ ಜರುಗಿತು.
ರಾಜ್ಯಾದ್ಯಕ್ಷ ಡಿ.ಎಸ್. ರಾಜ್ ಗೋಪಾಲ್ ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿ, ಭಿಮ್ ಆರ್ಮಿ ಕರ್ನಾಟಕ ಸೇರಿದಂತೆ ರಾಷ್ಟ್ರದಾದ್ಯಂತ ಸಂಚಲನ ಮೂಡಿಸುತ್ತಿದೆ ಜಾತಿ ಮತ್ತು ವರ್ಣ ವ್ಯವಸ್ಥೆ ನಮ್ಮ ಭಾರತದಲ್ಲಿ ಮಾತ್ರವಲ್ಲದೇ ಎಲ್ಲಾ ರಾಷ್ಟ್ರಗಳಲ್ಲಿದೆ ಬಾಬಾ ಸಾಹೇಬರು ಬಂದ ಮೇಲೆ ನಮ್ಮ ದಲಿತ ಸಮುದಾಯಕ್ಕೆ ನ್ಯಾಯ ಸಿಕ್ಕಿದೆ. ಬುದ್ದ, ಬಸವ , ಜ್ಯೋತಿಬಾ ಫುಲೆ, ಸಾವಿತ್ರಿ ಬಾ ಫುಲೆ, ಪೆರಿಯಾರ್, ಕುವೆಂಪು, ಪ್ರೋ ಕೃಷ್ಣಪ್ಪ ಇಂತ ಮಹನೀಯರು.
ಸಮಾಜದ ಸುಧಾರಣೆಗಳ ನೀತಿಯ ಪರವಾಗಿ ನಿಂತವರು ಅಂತವರನ್ನು ಸಮಾಜ ನೆನಪಿಸಿಕ್ಕೊಳ್ಳಬೇಕು. ಕೊರಟಗೆರೆ ತಾಲ್ಲೂಕು ಮೀಸಲು ಕ್ಷೇತ್ರ ಈ ಕ್ಷೇತ್ರ ಅಭಿವೃದ್ಧಿ ಇನ್ನಷ್ಟು ಆಗಬೇಕಿತ್ತು ಅದ್ಯಾವ ಕಾರಣಕ್ಕೆ ಅಭಿವೃದ್ಧಿ ಆಗಿಲ್ಲ ಎನ್ನುವುದು ಅರ್ಥ ಆಗುತ್ತಿಲ್ಲ ಸರ್ಕಾರ ಎಸ್.ಸಿ ಪಿ.ಟಿ. ಎಸ್.ಪಿ ಅನುದಾನ ಬಿಡುಗಡೆ ಮಾಡುತ್ತಿದೆ ಆದರೆ ಅನುದಾನಗಳು ಕಾಂಟ್ರಾಕ್ಟರ್ಗಳ ಜೋಬಿಗೆ ಸೇರುತ್ತಿದೆ ಸರ್ಕಾರಗಳು ನೀಡುತ್ತಿರುವ ಅನುದಾನಗಳು ಎಲ್ಲಿ ಸೇರುತ್ತಿವೆ ಸರ್ಕಾರಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳಿ ಅಧಿಕಾರಿಗಳಿಂದ ಯೋಜನಗಳು ಶ್ರೀ ಸಾಮಾನ್ಯರಾಗಿ ನೇರವಾಗಿ ತಲುಪುವಂತಾಗಬೇಕು.

ಸರ್ಕಾರದ ಉತ್ತಮ ಕಾರ್ಯಕ್ರಮಗಳಾದ ಐರಾವತ, ಗಂಗಾಕಲ್ಯಾಣ, ದಲಿತರಿಗೆ ಹಿಂದುಳಿದವರಿಗೆ ಸಿಗುತ್ತಿದೆಯೇ ಎಂಬ ಪ್ರಶ್ನೆ ಎದುರಾಗಿದೆ ಕರ್ನಾಟಕದ ಎಲ್ಲ ಕಡೇ ಇದೇ ಸಮಸ್ಯೆ ಕಾಡುತ್ತಿದೆ. ಗ್ಯಾರಂಟಿ ಸ್ಕೀಂಗಳಿಗೆ ದಲಿತರ ಹಣ ಬಳಸಿಕೊಳ್ಳಲಾಗುತ್ತಿದೆ ಕೇಳಿದರೆ ಅಲ್ಲೂ ದಲಿತರಿದ್ದಾರೆ ಎಂದು ಸರ್ಕಾರ ಹೇಳುತ್ತಿದೆ ಆದರೆ ಈ ಸ್ಕೀಂ ಗೆ ಯಾಕೆ ವಿಶೇಷ ಹೆಸರಿಡಬೇಕು ನಾವು ಕೇಳುತ್ತಿರುವುದು ನಮ್ಮ ಹಕ್ಕು ಸಮಾನತೆ ಇನ್ನೂ ಬಂದಿಲ್ಲ ಇಂದು ಮೀಸಲು ಕ್ಷೇತ್ರಗಳಾಗಿರುವುದು ಬಾಬಾ ಸಾಹೇಬರ್ ನೀಡಿದ ಸಂವಿಧಾನದಿಂದ , ದುಂಡು ಮೇಜಿನ ಸಭೆಯ ಮೂಲಕ ಮತದಾನದ ಹಕ್ಕುಗಳನ್ನು ದಲಿತರಿಗೆ ಅಸ್ಪೃಶ್ಯರಿಗೆ ನೀಡಿದ ಕೀರ್ತಿ ಬಾಬಾ ಸಾಹೇಬರಿಗೆ ಸಲ್ಲುತ್ತದೆ.
ಈ ಕಾರ್ಯಕ್ರಮದಲ್ಲಿ ಗೃಹ ಮಂತ್ರಿಗಳ ವಿಶೇಷ ಕರ್ತವ್ಯಧಿಕಾರಿ ಡಾ. ಕೆ.ನಾಗಣ್ಣ, ಕಾಂಗ್ರೆಸ್ ಮುಖಂಡ ಮಹಾಲಿಂಗಯ್ಯ, ಸಮಾಜ ಕಲ್ಯಾಣಾಧಿಕಾರಿ, ಯಮುನಾ, ದಲಿತ ಮುಖಂಡ ದಾಡಿ ವೆಂಕಟೇಶ, ದಾಸರಹಳ್ಳಿ ಮಂಜುನಾಥ್, ಭೀಮ್ ಆರ್ಮಿ ಜಿಲ್ಯಾದ್ಯಕ್ಷ ಅಯ್ಯನಪಾಳ್ಯ ಶ್ರೀನಿವಾಸಮೂರ್ತಿ, ಉಪಾಧ್ಯಕ್ಷ ನವೀನ್ ಕುಮಾರ್, ನೂತನ ತಾಲ್ಲೂಕು ಅಧ್ಯಕ್ಷ ಗಟ್ಲಹಳ್ಳಿ ಸರೇಶ್, ತುಮಕೂರು ವಿಶ್ವ ವಿದ್ಯಾಲಯದ ಮಾಜಿ ಅಕಾಡಮಿಕ್ ಕೌನ್ಸಿಲರ್ ಮಂಜುನಾಥ್, ಮುದ್ದರಾಮಯ್ಯ, ನಾಗೇನಹಳ್ಳಿ ಸುರೇಶ್, ಆದರ್ಶ್, ನವೀನ್ ನಾಗರಾಜು, ಸೇರಿದಂತೆ ಇತರರು ಉಪಸ್ಥಿತರಿದ್ದರು.
- ನರಸಿಂಹಯ್ಯ ಕೋಳಾಲ