ಕೊರಟಗೆರೆ – ತಾಲೋಕಿನ ಚನ್ನರಾಯನದುರ್ಗ ಹೋಬಳಿಯ ಬುಕ್ಕಾಪಟ್ಟಣ ಹಾಗೂ ತೋವಿನಕೆರೆ ಮುಖ್ಯರಸ್ತೆಯಲ್ಲಿ ದಿನನಿತ್ಯ ಸಾವಿರಾರು ವಾಹನಗಳು ಓಡಾಡುತ್ತಿದ್ದು ಇದೇ ಮಾರ್ಗವಾಗಿ ಮುಖ್ಯವಾಗಿ ತಾಲೂಕು ಹಾಗೂ ಜಿಲ್ಲೆಗಳಿಗೆ ಹೋಗುವ ಶಾಲಾ ಕಾಲೇಜು ಹಾಗು ಖಾಸಗಿ ಕಂಪನಿಗಳಿಗೆ ಮಾರ್ಗವಾಗಿ ಓಡಾಡುತ್ತಿದ್ದು ರಸ್ತೆ ತುಂಬಾ ಗುಂಡಿಗಳು ಹೆಚ್ಚಾಗಿದ್ದು.
ಹೇಳೋರಿಲ್ಲ ಕೇಳೋರಿಲ್ಲ ರಸ್ತೆಗಳು ತುಂಬಾ ಗುಂಡಿಗಳು ಸ್ಪಷ್ಟವಾಗಿ ಕಾಣುತ್ತಿದ್ದು ತೋವಿನಕೆರೆ ರಸ್ತೆ ಗುಂಡಿಗಳದ್ದೇ ಕಾರು-ಬಾರು ನಿತ್ಯ ರಸ್ತೆಯ ಮೂಲಕ ಭಾರ ವಾಹನಗಳ ಸಂಚಾರ…ತುಮಕೂರು ಜಿಲ್ಲೆ, ಕೊರಟಗೆರೆ ತಾಲೂಕಿನ ಚಂದ್ರಯಾನ ದುರ್ಗ ಹೋಬಳಿಯ ಜುಂಜಾರಾಮನಹಳ್ಳಿ ಸಮೀಪದ ತೋವಿನಕೆರೆ ಹಾಗೂ ಬುಕ್ಕಾಪಟ್ಟಣದವರಿಗೆ ಮುಖ್ಯ ರಸ್ತೆ ತುಂಬಾ ಹೊಂಡಗಳು.ಜಲ್ಲಿ- ಕಲ್ಲು ಹಾಗೂ ಮಣ್ಣು, ಸಾಗಾಣಿಕೆ ಲಾರಿಗಳ ಓಡಾಟದಿಂದ ರಸ್ತೆಗಳು ಸಂಪೂರ್ಣ ಹಾಳಾಗಿದು ಗ್ರಾಮೀಣ ಭಾಗದ ರಸ್ತೆ ದುರಸ್ತಿಗೆ ದಿಕ್ಕು ತೋಚದಂತಾಗಿದೆ.

ಇದರಿಂದ ಸವಾರರು ಜೀವ ಕೈಯಲ್ಲಿ ಹಿಡಿದು ವಾಹನ ಚಲಾಯಿಸುವಂತಹ ಪರಿಸ್ಥಿತಿ ಎದುರಾಗಿದೆ. ಆದರೆ ಈ ರಸ್ತೆಯ ಅವೈಜ್ಞಾನಿಕ ಕಾಮಗಾರಿ ಬಾರಿವಾಹನಗಳ ಸಂಚಾರ ಹಾಗೂ ಅಧಿಕಾರಿಗಳು ನಿರ್ಲಕ್ಷ್ಯ ಇದಕ್ಕೆ ಕಾರಣ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಾಹನ ಸವಾರರು ತೆರಳಬೇಕಾದರೆ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಹಿಡಿ ಶಾಪ ಹಾಕುತ್ತ ಸಂಚಾರ ಮಾಡುವ ದುಃಸ್ಥಿತಿ ನಿರ್ಮಾಣವಾಗಿದೆ.ಈ ಹಿಂದೆ ಅಷ್ಟೇ ಈ ರಸ್ತೆ ನಿರ್ಮಾಣವಾಗಿದ್ದು. ಪದೇ ಪದೇ ರಸ್ತೆ ದುರಸ್ತಿಗೊಳ್ಳುತ್ತಿರುವುದು ವಿಪರ್ಯಾಸ.
ಬರೀ ತಗ್ಗು-ದಿನ್ನೆಯಿಂದ ಕೂಡಿದ್ದು, ಸರ್ಕಸ್ ಮಾಡಿಕೊಂಡೇ ಸಂಚರಿಸುವಂತಹ ಸ್ಥಿತಿ ವಾಹನ ಸವಾರರದಾಗಿದೆ.

ಸ್ಥಳೀಯ ಸಾಮಾಜಿಕ ಮುಖಂಡ ರಮೇಶ್ ಮಾತನಾಡಿ, ಈ ವಿಷಯದ ಬಗ್ಗೆ ಹಲವಾರು ಬಾರಿ ಅಧಿಕಾರಿಗಳ ಗಮನಕ್ಕೆ ತಂದಿದ್ದು ಯಾವುದೇ ಕಾನೂನಾತ್ಮಕ ಕ್ರಮವನ್ನು ಕೈಗೊಂಡಿರುವುದಿಲ್ಲ ಹಾಗೂ ಅಧಿಕಾರಿಗಳ ಒಂದು ನಿರ್ಲಕ್ಷ ಇದಕ್ಕೆ ಕಾರಣ ಮಳೆ ಬಂದರೆ ರಸ್ತೆ ಯಾವುದು, ತಗ್ಗುಗಳು ಯಾವುವು ಎಂಬುದು ತಿಳಿಯದಂತಾಗಿ ಬೈಕ್ ಸವಾರರು ಬಿದ್ದು ಎದ್ದು ಹಲವಾರು ಉದಾಹರಣೆಗಳಿವೆ ಎಂದು ಹೇಳಿದರು.
ವರದಿ ನರಸಿಂಹಯ್ಯ ಕೋಳಾಲ…!