ಕೊರಟಗೆರೆ :- ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರ ಕ್ಯಾಮೇನಹಳ್ಳಿ ಶ್ರೀ ಆಂಜನೇಯ ಸ್ವಾಮಿ ಬ್ರಹ್ಮರಥೋತ್ಸವ ಸಾವಿರಾರು ಭಕ್ತಾದಿಗಳ ಸಮಕ್ಷಮ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗೃಹ ಸಚಿವ ಡಾ. ಪರಮೇಶ್ವರ್ ಮುಂದಾಳತ್ವದಲ್ಲಿ ಬಹಳ ವಿಜೃಂಭಣೆಯಿಂದ ಆಯೋಜನೆಗೊಂಡಿತ್ತು .
ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಹೋಬಳಿ ವ್ಯಾಪ್ತಿಯ ಕಮನಿಯ ಕ್ಷೇತ್ರವೆಂದೇ ಪ್ರಸಿದ್ಧಿ ಹೊಂದಿರುವ, ಕ್ಯಾಮೇನಹಳ್ಳಿ ಶ್ರೀ ಆಂಜನೇಯ ಸ್ವಾಮಿ ಬ್ರಹ್ಮ ರಥೋತ್ಸವ , ನಾಗಾಷ್ಟ ಸಪ್ತಮಿ ಬುದುವಾರ ದಂದು ರಾಜ್ಯದ ಮೂಲೆ ಮೂಲೆಯಿಂದ ಬಂದ ಲಕ್ಷಾಂತರ ಭಕ್ತಾದಿಗಳ ಸಮ್ಮುಖದಲ್ಲಿ ಬಹಳ ವಿಜೃಂಭಣೆಯಿಂದ ಬ್ರಹ್ಮ ರಥೋತ್ಸವ ಆಯೋಜನೆಗೊಂಡು ಬಂದ ಭಕ್ತಾದಿಗಳು ದೇವರ ದರ್ಶನ ಪಡೆದು ರಥೋತ್ಸವದಲ್ಲಿ ಪಾಲ್ಗೊಂಡು ಪುನೀತ ಭಾವನೆಯಲ್ಲಿ ಹಿಂತಿರುಗುತ್ತಿದ್ದು ಕಂಡು ಬಂತು.

ರಥಸಪ್ತಮಿಯ ಪುಣ್ಯ ದಿನ ಕ್ಯಾಮೇನಹಳ್ಳಿ ಶ್ರೀ ಆಂಜನೇಯ ಸ್ವಾಮಿ ಬ್ರಹ್ಮರಥೋತ್ಸವ ಮುಂಜಾನೆಯಿಂದಲೂ ವಿವಿಧ ಪೂಜಾ ಕೈಂಕರ್ಯದೊಂದಿಗೆ ಹವನ ಹೋಮ ದೊಂದಿಗೆ ವಿಶೇಷವಾಗಿ ಹಲವು ಬ್ರಾಹ್ಮಣರ ತಂಡ ಶ್ರದ್ಧಾಭಕ್ತಿಯಿಂದ ಪೂಜಾ ಕಾರ್ಯಗಳನ್ನು ಕೈಗೊಂಡು ರಾಮ ಲಕ್ಷ್ಮಣ ಸೀತಾಮಾತೆಯ ಉತ್ಸವ ಮೂರ್ತಿಯನ್ನ ರಥೋತ್ಸವದ ಮೇಲಿಟ್ಟ ನಂತರ ಪ್ರತಿ ವರ್ಷದಂತೆ ಗರುಡ ದೇವರ (ಪಕ್ಷಿಯ) ಪ್ರದಕ್ಷಣೆ ನಂತರ ಭಕ್ತರ ಜೈಕಾರದೊಂದಿಗೆ ಬ್ರಹ್ಮ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ಬ್ರಹ್ಮರಥೋತ್ಸವ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗೃಹ ಸಚಿವ ಡಾ. ಜಿ ಪರಮೇಶ್ವರ್ ವಿಶೇಷ ಪೂಜೆ ಸಲ್ಲಿಸಿದರು, ಇವರೊಂದಿಗೆ ಜಿಲ್ಲಾಧಿಕಾರಿಗಳಾದ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್, ತಾಸಿಲ್ದಾರ್ ಮಂಜುನಾಥ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶ್ವಥ್ ನಾರಾಯಣ್, ಅರಕೆರೆ ಶಂಕರ್, ಗ್ರಾ ಪಂ ಅಧ್ಯಕ್ಷ ಸೌಮ್ಯ ಜಗದೀಶ್, ಮುಖಂಡರಾದ ಮಾಹಲಿಂಗಪ್ಪ ಸೇರಿದಂತೆ ಹಲವು ಗಣ್ಯರು ಬ್ರಹ್ಮ ರಥೋತ್ಸವದಲ್ಲಿ ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿದರು.

ಕ್ಯಾಮೇನಹಳ್ಳಿ ಶ್ರೀ ಆಂಜನೇಯ ಸ್ವಾಮಿ ಬ್ರಹ್ಮ ರಥೋತ್ಸವ ಬಹಳ ಸಡಗರ ಸಂಭ್ರಮದಿಂದ ಆಯೋಜನೆಗೊಂಡು, ಪ್ರತಿ ವರ್ಷಕ್ಕಿಂತ ಈ ಬಾರಿ ಭಕ್ತರ ಸಂಖ್ಯೆ ಹೆಚ್ಚಾಗಿ ಮಹಿಳಾ ಭಕ್ತರೆ ಜಾತ್ರೆ ತುಂಬೆಲ್ಲ ಹೊಸ ಬಟ್ಟೆ ತೊಟ್ಟು ಸಂಭ್ರಮ ಪಡುತ್ತಿದ್ದಿದ್ದು ಒಂದೆಡೆಯಾದರೆ ಈ ಬಾರಿ ಪೊಲೀಸ್ ಇಲಾಖೆ ಸಿಪಿಐ ಅನಿಲ್ ಪಿಎಸ್ಐ ಚೇತನ್ ಗೌಡ, ರೇಣುಕಾ ಯಾದವ್, ಯೋಗೇಶ್ ಸೇರಿದಂತೆ ಹಲವು ಪೊಲೀಸ್ ತಂಡ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರಗತೆ ವಹಿಸಿದ್ದಲ್ಲದೆ ಬಹಳ ಹುಮ್ಮಸ್ಸಿನಿಂದ ಹೆಣ್ಣುಮಕ್ಕಳನ್ನು ರೇಗಿಸಲೆಂದ ಬಂದ ಪುಂಡ ಹುಡುಗರಿಗೆ ಪಿಪಿ ಊದಿ ಕಿರಿಕಿರಿ ಉಂಟು ಮಾಡುವಂತಹ ವಾತಾವರಣಕ್ಕೆ ನಿರ್ಬಂಧ ಏರಿ ಹುಡುಗರ ಹುಮ್ಮಸ್ಸು ಕುಗ್ಗಿಸಿದ್ದು ಕಂಡುಬಂತು.
ಹೂವಿನ ಅಲಂಕಾರ ಹಾಗೂ ದಾಸೋಹ
ಪ್ರತಿ ವರ್ಷದಂತೆ ಈ ಬಾರಿಯೂ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಪಿ ಎನ್ ಕೃಷ್ಣಮೂರ್ತಿಯವರು ದೇವಸ್ಥಾನಕ್ಕೆ ವಿಶೇಷವಾಗಿ ಹೂವಿನ ಅಲಂಕಾರ ಏರ್ಪಡಿಸಲಾಯಿತು, ಜೊತೆಗೆ ಸಾವಿರಾರು ಭಕ್ತರಿಗೆ ಸಂಜೆವರೆಗೂ ದಾಸೋಹ ಸೇವೆಯನ್ನ ಹಮ್ಮಿಕೊಳ್ಳಲಾಯಿತು, ಭಕ್ತರಿಗೆ ದಾಸೋಹದ ಸಂದರ್ಭದಲ್ಲಿ ಪಿ ಎನ್ ಕೃಷ್ಣಮೂರ್ತಿಯವರ ಜೊತೆ ಅವರ ಚಂದ್ರಕಲಾ ಪಿಎನ್ ಕೃಷ್ಣಮೂರ್ತಿ ಕುಟುಂಬ ವರ್ಗ ಆಕಾಶ್ , ನವ್ಯ , ದೃತಿದರಿ ಅಭಿಜಿತ್ ಸಾತ್ ನೀಡಿದರು.
ರಾಜಗೋಪುರ ಪ್ರತಿಷ್ಠಾಪನೆ ತಾಲೂಕ ಆಡಳಿತ ಹಾಗೂ ಮುಜರಾಯಿ ಇಲಾಖೆಯ ಒಳಪಡುವ ಕ್ಯಾಮೇನಹಳ್ಳಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಜೀರ್ಣೋದ್ಧಾರದ ದೃಷ್ಟಿಯಿಂದ ಜೊತೆಗೆ ಇತಿಹಾಸ ಪ್ರಸಿದ್ಧ ದೇವಸ್ಥಾನವಾದ ಕಾರಣ ಮತ್ತಷ್ಟು ದೇವಸ್ಥಾನವನ್ನ ಉನ್ನತೀಕರಣ ಗೊಳಿಸಿ ಪ್ರವಾಸೋದ್ಯಮ ಕ್ಷೇತ್ರವನ್ನಾಗಿಸುವ ದೃಷ್ಟಿಯಿಂದ ಡಾ. ಜಿ ಪರಮೇಶ್ವರ್ ಸ್ವತಹ ಕಾಳಜಿ ವಹಿಸಿ ರಾಜಗೋಪುರ ನಿರ್ಮಾಣಕ್ಕೆ ಚಾಲನೆ ನೀಡಿ ಪೂಜೆ ಸಲ್ಲಿಸಿದರು.

ಉತ್ತಮ ರಾಸುಗಳಿಗೆ ಪ್ರೋತ್ಸಾಹ
ಇತಿಹಾಸ ಪ್ರಸಿದ್ಧ ಕ್ಯಾಮೇನಹಳ್ಳಿ ಶ್ರೀ ಆಂಜನೇಯ ಸ್ವಾಮಿ ದನಗಳ ಜಾತ್ರೆ ಸುಪ್ರಸಿದ್ಧ ವಾಗಿದ್ದು ರಾಜ್ಯದ ವಿವಿಧ ಮೂಲಗಳಿಂದ ವಹಿವಾಟಿಗಾಗಿ ಇಲ್ಲಿಗೆ ಬಂದು ವ್ಯವಹರಿಸುವುದು ನೂರಾರು ವರ್ಷಗಳಿಂದ ವಾಡಿಕೆಯಾಗಿದ್ದು, ರಾಸುಗಳನ್ನ ಪ್ರೋತ್ಸಾಹಿಸುವುದಕ್ಕಾಗಿ ತಾಲೂಕ ಆಡಳಿತ ಹತ್ತಾರು ರೈತರ ರಾಸುಗಳಿಗೆ ವಿಶೇಷ ಬಹುಮಾನ ಹಾಗೂ ಮಾಲೀಕರಿಗೆ ಪ್ರಮಾಣ ಪತ್ರ ನೀಡಿ ಬಹುಮಾನ ನೀಡುವುದು ವಾಡಿಕೆಯಾಗಿದ್ದು ಅದೇ ಮಾದರಿಯಲ್ಲಿ ಈ ಬಾರಿಯೂ ತಾಸಿಲ್ದಾರ್ ಮಂಜುನಾಥ್ ನೇತೃತ್ವದಲ್ಲಿ ಉಪತಾಹಸಿಲ್ದಾರ್ ಅನಿತಾ, ಕಂದಾಯ ಅಧಿಕಾರಿ ಸಲ್ಮಾನ್ ತಾಲೂಕ್ ಶಿರ್ಸ್ತಿದಾರ್ ಸೇರಿದಂತೆ ಸಿಬ್ಬಂದಿ ವರ್ಗ ಹಾಜರಿದ್ದು ಹಲವು ರೈತರುಗಳಿಗೆ ಬಹುಮಾನ ವಿತರಿಸಲಾಯಿತು.
ಬ್ರಹ್ಮರಥೋತ್ಸವ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಮಂಜುನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಶ್ವಥ್ ನಾರಾಯಣ್ ,ಅರಕೆರೆ ಶಂಕರ್, ಮಹಾಲಿಂಗಯ್ಯ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಜಿ ವಿ ರಾಮ್ ಮೂರ್ತಿ, ಗೌರವಾಧ್ಯಕ್ಷರು ಹೆಚ್ .ಮಹದೇವ್, ಉಪಾಧ್ಯಕ್ಷರು ದ್ರಾಕ್ಷಾಯಿಣಿ ರಾಜಣ್ಣ, ಸರ್ವ ಸದಸ್ಯರು ಕ್ಯಾಮನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಸೌಮ್ಯ ಜಗದೀಶ್ , ಉಪಾಧ್ಯಕ್ಷ ನಾಗಮಣಿ ರಾಘವೇಂದ್ರ, ಸದಸ್ಯರಾದ ಸಿದ್ದಗಂಗಮ್ಮ ರವಿಕುಮಾರ್ , ನಾಗರಾಜಯ್ಯ, ಪಿಡಿಒ ರವಿಕುಮಾರ್ ಜಮಗೊಂಡ ಮುಖಂಡರುಗಳಾದ ವಾಲೆ ಚಂದ್ರಯ್ಯ, ಆನಂದ್, ಜಯಮ್ಮ, ಕವಿತಾ , ಅಭಿಲಾಶ್ ಸೇರಿದಂತೆ ಹಲವರು ಹಾಜರಿದ್ದರು.