ಕೊರಟಗೆರೆ-ಜಾತಿ ಗಣತಿಯ ಅವಧಿ ವಿಸ್ತರಿಸಲು ಛಲವಾದಿ ಮನವಿ

ಕೊರಟಗೆರೆ:- ಒಳ ಮೀಸಲಾತಿ ಜಾತಿ ಗಣತಿ ಸಮೀಕ್ಷೆಯ ಅವಧಿಯನ್ನು ವಿಸ್ತರಿಸುವಂತೆ ಕೊರಟಗೆರೆ ತಾಲೂಕು ಛಲವಾದಿ ಮಹಾಸಭಾ ಉಪಾಧ್ಯಕ್ಷ ಹನುಮಂತರಾಯಪ್ಪ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ತಾಲೂಕಿನ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ಈ ಜಾತಿ ಗಣತಿಯಲ್ಲಿ ಹಲವಾರು ತಾಂತ್ರಿಕ ದೋಷಗಳು ಬರುತ್ತಿವೆ ಮೇ 17 ಅಂತಿಮ ದಿನಾಂಕ ನಿಗದಿಪಡಿಸಿದ್ದ ಗಣತಿ ನಿಖರವಾಗಿ ಮತ್ತು ಗುಣಮಟ್ಟದಲ್ಲಿ ಆಗದ ಕಾರಣ ಸರ್ಕಾರ ಅವಧಿ ವಿಸ್ತರಿಸಬೇಕು ಎಂದು ಆಗ್ರಹಿಸಿದರು ಛಲವಾದಿ ಜಾತಿ ಗಣತಿ ಸಮಯದಲ್ಲಿ ಆದಿ ದ್ರಾವಿಡ ಹಾಗೂ ಬ್ರಾಕೆಟ್ ನಲ್ಲಿ ಛಲವಾದಿ ಎಂದು ಬರಸಬೇಕು ಮನವಿ ಮಾಡಿದರು.‌

ಜಿಲ್ಲಾ ದಲಿತ ಸೇನೆ ಅಧ್ಯಕ್ಷ ಅನಂತ್ ಕುಮಾರ್ ಮಾತನಾಡಿ ಜಾತಿ ಗಣತಿ ಬರುವ ಸಂಪನ್ಮೂಲ ವ್ಯಕ್ತಿಗಳಿಗೆ ಮೊಬೈಲ್ ಸರ್ವರ್ ಇಲ್ಲದೆ ಸಮಸ್ಯೆಯಾಗಿದೆ ಮನೆ ಮನೆಗೆ ತಲುಪಲಾಗದೆ ಸಕಾಲಕ್ಕೆ ಕೆಲಸ ಮುಗಿಸಲಾಗದೆ ಜಾತಿ ಗಣತಿ ಪರಿಪೂರ್ಣವಾಗುತ್ತಿಲ್ಲ ಸರ್ಕಾರವು ಇದರ ಅವಧಿ ವಿಸ್ತರಿಸಬೇಕು ಎಂದರು.

ತಾಲೂಕ್ ಪ್ರಧಾನ ಕಾರ್ಯದರ್ಶಿ ಪುಟ್ಟರಾಜು ಮಾತನಾಡಿ ತಾಂತ್ರಿಕ ದೋಷ ಸರಿಪಡಿಸಿ ಜಾತಿಗಣತಿ ಅವಧಿ ವಿಸ್ತರಿಸಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ಛಲವಾದಿ ಮಹಾಸಭಾದ ಪದಾಧಿಕಾರಿಗಳಾದ ಸೋಮಶೇಖರ್, ಪುಟ್ಟರಾಜು, ಹೊನ್ನೇಶ್, ಹನುಮಂತರಾಜು, ದೇವರಾಜು, ರಮೇಶ್, ನರಸಪ್ಪ, ಶ್ರೀನಿವಾಸ, ನರಸಿಂಹಮೂರ್ತಿ, ಕಾಂತರಾಜು, ವಿನಯ್, ಶ್ರೀನಿವಾಸಯ್ಯ, ನರಸಿಂಹಮೂರ್ತಿ ಸೇರಿದಂತೆ ಛಲವಾದಿ ಬಂಧುಗಳು ಹಾಜರಿದ್ದರು.

ವರದಿ ನರಸಿಂಹಯ್ಯ ಕೋಳಾಲ

Leave a Reply

Your email address will not be published. Required fields are marked *