ಕೊರಟಗೆರೆ;-ತಾಲೂಕಿನ ಕೋಳಾಲ ಹೋಬಳಿಯ ಚಿನ್ನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆಯಾಗಿ ಲಕ್ಷ್ಮಮ್ಮ ಮಂಜುನಾಥ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಚಿನ್ನಹಳ್ಳಿ ಗ್ರಾ.ಪಂಯಲ್ಲಿ ಒಟ್ಟು14 ಜನ ಸದಸ್ಯರ ಸಂಖ್ಯಾಬಲ ಇದ್ದು ಈ ಹಿಂದೆ ಅಧ್ಯಕ್ಷರಾಗಿದ್ದ ವಿಜಯ ಎ. ಅವರ ರಾಜಿನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಎರಡನೇ ಅವಧಿಯ ಲಕ್ಷ್ಮಮ್ಮ ಮಂಜುನಾಥ್ ಅವರು ಒಬ್ಬರೆ ನಾಮಪತ್ರ ಸಲ್ಲಿಸಿದ್ದ ಕಾರಣ ಅವಿರೋಧವಾಗಿ ಆಯ್ಕೆಯಾಗಿ ದ್ದಾರೆ.ಉಪಾಧ್ಯಕ್ಷೆಯಾಗಿ ಸುಜಾತ ಅವರು ಮುಂದುವರೆಯಲಿದ್ದಾರೆ.
ನೂತನ ಅಧ್ಯಕ್ಷೆ ಲಕ್ಷ್ಮಮ್ಮ ಮಂಜುನಾಥ್ ಮಾತನಾಡಿ,ಚಿನ್ನಹಳ್ಳಿ ಗ್ರಾಪಂ ವ್ಯಾಪ್ತಿಗೆ ಬರುವ 14 ಗ್ರಾಮಗಳ ಅಭಿವೃದ್ದಿಗಾಗಿ ಎಲ್ಲಾ ಸದಸ್ಯರ ಸಹಕಾರ ಪಡೆಯಲಾಗುವುದು. ಮೂಲಭೂತ ಸೌಕರ್ಯಗಳಾದ ನೀರು, ಚರಂಡಿ, ಬೀದಿ ದೀಪ, ಸೇರಿದಂತೆ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವುದರ ಜೊತೆಗೆ ಗ್ರಾಮಗಳ ಅಭಿವೃದ್ದಿ ಮಾಡಲಾಗುವುದು.ನನ್ನನ್ನು ಅಧ್ಯಕ್ಷೆಯಾಗಿ ಆಯ್ಕೆ ಮಾಡಿದ ಗ್ರಾಪಂ ಸದಸ್ಯರು, ಊರಿನ ಮುಖಂಡರು ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುವುದಾಗಿ ತಿಳಿಸಿದರು.
ಮುಖಂಡರಾದ ಸುಂಕದಹಳ್ಳಿ ವಿ. ಸಿದ್ದಗಂಗಯ್ಯ ಮಾತನಾಡಿ,ನಮ್ಮ ಗ್ರಾ.ಪಂಯ ಎರಡನೇ ಅವಧಿಗೆ ಲಕ್ಷ್ಮಮ್ಮ ಮಂಜುನಾಥ್ ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದ್ದು, ಹಲವಾರು ವರ್ಷಗಳಿಂದ ನಮ್ಮ ಪಂಚಾಯಿತಿಯ ಆಡಳಿತ ವ್ಯವಸ್ಥೆ ಉತ್ತಮವಾಗಿ ನಡೆದುಕೊಂಡು ಬರುತ್ತಿದ್ದು ಇದೆ ವ್ಯವಸ್ಥೆ ಮುಂದುವರೆಯಬೇಕು.ಗ್ರಾಮಗಳ ಅಭಿವೃದ್ದಿಗೆ ಎಲ್ಲಾ ಸದಸ್ಯರು ಸಹಕಾರ ನೀಡುತ್ತಾರೆ ಎಂದು ತಿಳಿಸಿದರು.
ಸಂದರ್ಭದಲ್ಲಿ ಜೆಡಿಎಸ್ ಮುಖಂಡ ದೇವರಾಜ್,ಗ್ರಾಪಂ ಪಿಡಿಒ ಶ್ರೀಧರ್ ಸದಸ್ಯರುಗಳಾದ ನಾಗೇಂದ್ರ ಸಿ.ಎನ್. ರಂಗಪ್ಪ,ರವಿಕುಮಾರ್ ಎಸ್.ಹೆಚ್,ಜಯಣ್ಣ. ನರಸಿಂಹರಾಜು, ಯಶೋದಮ್ಮ, ಭಾಗ್ಯಮ್ಮ,ಛಾಯಾದೇವಿ,ಮುಖಂಡರಾದ ಶ್ರೀನಿವಾಸ್ ಮೂರ್ತಿ, ಹರೀಶ್, ರಾಜೇಶ್, ರಂಗಣ್ಣ, ಹಾಗೂ ಪಂಚಾಯತಿ ಸಿಬ್ಬಂದಿ ವರ್ಗ ಹಾಜರಿದ್ದರು.
———–ನರಸಿಂಹಯ್ಯ ಕೋಳಾಲ