ಕೊರಟಗೆರೆ-ಕಾಂಗ್ರೆಸ್-ಸರ್ಕಾರದ-ಜನವಿರೋಧಿ-ನೀತಿ-ಖಂಡಿಸಿ- ಕೊರಟಗೆರೆಯಲ್ಲಿ-ಬಿಜೆಪಿ-ಪ್ರತಿಭಟನೆ

ಕೊರಟಗೆರೆ:– ರಾಜ್ಯ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ, ಸಂವಿಧಾನ ವಿರೋಧಿ ನಿಲುವು, ಒಲೈಕೆ ರಾಜಕಾರಣ ಆರೋಪಿಸಿ ಕೊರಟಗೆರೆ ಪಟ್ಟಣದಲ್ಲಿ ಭಾರತೀಯ ಜನತಾ ಪಕ್ಷದ ವತಿಯಿಂದ ಶನಿವಾರ ಪ್ರತಿಭಟನೆ ನಡೆಯಿತು.

ಪಟ್ಟಣದ ಎಸ್‌ಎಸ್‌ಆರ್ ವೃತ್ತದಿಂದ ಆರಂಭವಾಗಿ ತಾಲೂಕು ಕಚೇರಿ ವರೆಗೆ ಜಾಥಾ ಮೂಲಕ ನಡೆದು ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗುತ್ತಾ ಸಾಗಿ ತಾಸಿಲ್ದಾರ್ ಕಚೇರಿಗೆ ಮುಂಭಾಗ ತಹಸೀಲ್ದಾರ್ ಗೆ ಮನವಿ ಸಲ್ಲಿಸಿದರು.

ಬಿಜೆಪಿ ಮುಖಂಡ ಬಿ.ಹೆಚ್ ಅನಿಲ್ ಕುಮಾರ್ ಮಾತನಾಡಿ, “ಟಿ‌ಎಸ್‌ಪಿ, ಎಸ್‌ಪಿ‌ಪಿ ಅನುದಾನಗಳನ್ನು ಬಿಟ್ಟು ಸರ್ಕಾರ ಬಿಟ್ಟಿ ಭಾಗ್ಯಗಳಿಗೆ ಹಣ ಬಳಕೆ ಮಾಡುತ್ತಿದೆ. ಹಾಲು, ಹಾಲ್ಕೋಹಾಲ್, ಬಾಂಡ್ ಪೇಪರ್‌ಗಳಿಂದ ಬಡವರಿಗೆ ಬೆಲೆ ಏರಿಕೆಯ ಭಾಗ್ಯ ನೀಡಿದೆ. ಸಿಎಂ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡಬೇಕು” ಎಂದು ಒತ್ತಾಯಿಸಿದರು.

ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ರುದ್ರೇಶ್ ಮಾತನಾಡುತ್ತಾ, “ರಾಜ್ಯ ಸರ್ಕಾರ ದಲಿತರು ಮತ್ತು ಹಿಂದುಳಿದ ವರ್ಗಗಳ ಹಕ್ಕುಗಳನ್ನು ಕಡಿಮೆ ಮಾಡುವ ಮೂಲಕ, ಒಲೈಕೆ ರಾಜಕಾರಣ ನಡೆಸುತ್ತಿದೆ, ಬೆಲೆ ಏರಿಕೆಯಿಂದ ನಲುಗಿ ಹೋಗಿದ್ದಾರೆ, ನಮ್ಮ ಕಾರ್ಯಕರ್ತರಿಗೆ ಕಿರುಕುಳ ನೀಡಲಾಗುತ್ತಿದೆ, ಗೃಹ ಸಚಿವ ಪರಮೇಶ್ವರ್ ಮೌನ ವಹಿಸಿರುವುದು ದುರಂತ, ಗೃಹ ಸಚಿವರು ಎಲ್ಲಿದ್ದಾರೆ ಎಂದು ಹುಡುಕುವ ಸ್ಥಿತಿ ನಿರ್ಮಾಣವಾಗಿದ್ದು,ಸ್ಥಳೀಯ ಕಾಂಗ್ರೆಸ್ ನಾಯಕರ ಹೆಸರುಗಳಿರುವ ಡೆತ್ ನೋಟ್ ಕೂಡ ಬೆಳಕಿಗೆ ಬಂದಿದೆ, ಆದರೆ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಮಾಜಿ ತಾಲೂಕು ಅಧ್ಯಕ್ಷ ಕೆ.ಎಲ್ ದರ್ಶನ್, “ಈ ಬಜೆಟ್‌ನಲ್ಲಿ ದಲಿತ ಅಭಿವೃದ್ಧಿ ನಿಗಮಗಳಿಗೆ ಯಾವುದೇ ಅನುದಾನ ನೀಡದೆ, ಅಲ್ಪಸಂಖ್ಯಾತರಿಗೆ ಹೆಚ್ಚು ಮೀಸಲಿಟ್ಟಿರುವುದು ನ್ಯಾಯವಲ್ಲ. ರಾಜ್ಯಪಾಲರು ಸರ್ಕಾರದ ದುರಾಡಳಿತಕ್ಕೆ ತಡೆ ಹಾಕಬೇಕು” ಎಂದು ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಅರುಣ್,ಕುಮಾರ್, ತಾಲೂಕು ಮಂಡಲ ಪ್ರಧಾನ ಕಾರ್ಯದರ್ಶಿ ರಂಗರಾಜು, ಮಹಾ ಶಕ್ತಿ ಕೇಂದ್ರದ ಅಧ್ಯಕ್ಷರಾದ ರಾಜೇಂದ್ರ, ದಯಾನಂದ್, ಶಿವಕುಮಾರ್, ಚೇತನ್, ಯತೀಶ್,ರೈತ ಮೋರ್ಚಾ ಅಧ್ಯಕ್ಷ ನಾಗರಾಜು, ಪ.ಪಂ ಸದಸ್ಯ ಪ್ರದೀಪ್ ಕುಮಾರ್, ಮುಖಂಡರಾದ ಮೋಹನ್ , ರಘು , ದಾಡಿ ವೆಂಕಟೇಶ್, ಶಿವಕುಮಾರಸ್ವಾಮಿ, ಆನಂದ್, ಗೋಪಿನಾಥ್, ನಂಜುಂಡಪ್ಪ, ಸಿದ್ದಲಿಂಗಪ್ಪ,ಸಿದ್ದರಾಜು, ಮಹೇಶ್, ರಘು ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.

ವರದಿ – ಶ್ರೀನಿವಾಸ್ ಕೊರಟಗೆರೆ

Leave a Reply

Your email address will not be published. Required fields are marked *

× How can I help you?