ಕೊರಟಗೆರೆ:– ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿರುವ ಮುಖ್ಯಮಂತ್ರಿಗಳ ಜಟಾಪಟಿ ದಿನಕ್ಕೊಂದು ತಿರುವು ಪಡೆಯುತ್ತಿರುವ ಸಂದರ್ಭದಲ್ಲಿ ಕುಂಚಿಟಿಗ ಒಕ್ಕಲಿಗ ಮಠದ ಶ್ರೀ ಹನುಮಂತನಾಥ ಸ್ವಾಮೀಜಿ ಡಾ.ಜಿ. ಪರಮೇಶ್ವರ್ ಮುಖ್ಯಮಂತ್ರಿಯಾಗಲಿ ಎನ್ನುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ .
ಕೊರಟಗೆರೆ ಎಲೆರಾಂಪುರ ದ ಕುಂಚಿಟಿಗ ಮಹಾಸಂಸ್ಥಾನ ಮಠದ ಶ್ರೀ ಹನುಮಂತನಾಥ ಸ್ವಾಮೀಜಿ ಶ್ರೀಮಠದಲ್ಲಿ ಆಯೋಜಿಸಿದ್ದ 4ನೇ ವರ್ಷದ ವಿದ್ಯಾರ್ಥಿಗಳ ಸಂಸ್ಕಾರ ಶಿಬಿರದ ವೇದಿಕೆಯಲ್ಲಿ ಡಾ. ಪರಮೇಶ್ವರ್ ಜೊತೆಗೂಡಿ ವೇದಿಕೆ ಹಂಚಿಕೊಂಡ ಕಾರ್ಯಕ್ರಮದಲ್ಲಿ ಕಳಂಕ ರಹಿತ ರಾಜಕಾರಣಿ ಡಾ. ಪರಮೇಶ್ವರ್ ಮುಖ್ಯಮಂತ್ರಿಯಾಗಲಿ ಎಂದು ಆಶಿಸಿದ್ದಾರೆ.

ಡಾ. ಜಿ ಪರಮೇಶ್ವರ್ 2 ಬಾರಿ ಅಧ್ಯಕ್ಷರಾಗಿ ಈ ಹಿಂದೆಯೇ ಮುಖ್ಯಮಂತ್ರಿ ಆಗಬೇಕಾದಂತ ಅವಕಾಶಗಳಿಂದ ವಂಚಿತರಾಗಿದ್ದಾರೆ, ಕೊರಟಗೆರೆ ಅಭಿವೃದ್ಧಿ ದೃಷ್ಟಿಯಿಂದ ಜೊತೆಗೆ ರಾಜ್ಯದ ಶ್ರೇಯೋಭಿವೃದ್ಧಿಗಾಗಿ ಡಾ. ಜಿ ಪರಮೇಶ್ವರ್ ಮುಖ್ಯಮಂತ್ರಿ ಆಗಬೇಕು ಕಳಂಕ ರಹಿತ, ಅಜಾತಶತ್ರು, ಜಾತ್ಯಾತೀತವಾಗಿ ಹಾಗೂ ಪಕ್ಷಾತೀತವಾಗಿ ಎಲ್ಲರನ್ನೂ ಒಟ್ಟಿಗೆ ಕೊಂಡಯುವಂತೆ ಗುಣವುಳ್ಳ ಅಪರೂಪದ ರಾಜಕಾರಣಿ ಡಾ. ಜಿ ಪರಮೇಶ್ವರ್ ಮುಖ್ಯಮಂತ್ರಿಯಾಗಲಿ ಎಂದು ಅಭಿಪ್ರಾಯಪಟ್ಟರು.

ಶ್ರೀಮಠ ಪ್ರಾರಂಭಗೊಂಡು ಹತ್ತು ವರ್ಷ ಕಳೆದಿದೆ ಕಳೆದು ನಾಲ್ಕು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಸಂಸ್ಕಾರ ಶಿಬಿರವನ್ನು ಶ್ರೀಮಠದಲ್ಲಿ ಆಯೋಜಿಸಲಾಗಿದೆ, ವಿದ್ಯಾರ್ಥಿಗಳಿಗೆ ಸಂಸ್ಕಾರ ,ಸಂಸ್ಕೃತಿ ಜೋತೆಗೆ ಉತ್ತಮ ನಡತೆ ಒದಗಿಸುವಂತಹ ಈ ಸಂಸ್ಕಾರ ಶಿಬಿರ ಜಾತ್ಯತೀತವಾಗಿ ಎಲ್ಲಾ ಬಡ ಹಾಗೂ ಶ್ರೀಮಂತ ವರ್ಗದ ವಿದ್ಯಾರ್ಥಿಗಳನ್ನು ಒಗ್ಗೂಡಿಸಿ ಮೇಲು -ಕೀಳು ಎನ್ನದೆ ಎಲ್ಲರನ್ನೂ ಸಮನಾಗಿ ಉತ್ತಮ ಶಿಬಿರ ನೀಡುತ್ತಿರುವ ಎಲೆರಾಂಪುರ ಕುಂಚಿಟಿಗ ಮಠ ಎಲ್ಲರ ಮನ ಗೆದ್ದಿದೆ ಮುಂದಿನ ದಿನಗಳಲ್ಲಿ ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವಂತಹ ಆಶಯ ನಮ್ಮಲ್ಲಿದೆ ಎಂದರು .

ಹತ್ತು ವರ್ಷಗಳ ಹಿಂದೆ ಪ್ರಾರಂಭವಾದ ಈ ಮಠಕ್ಕೆ ದೊಡ್ಡ ಪಿಲ್ಲರ್ ಡಾ. ಜಿ ಪರಮೇಶ್ವರ್, ನಮ್ಮ ರಾಜ್ಯದಲ್ಲಿ ನಿಷ್ಕಲ್ಮಶವಾದ ಕಳಂಕ ರಹಿತ ರಾಜಕಾರಣಿ ಯಾರಾದರೂ ಇದ್ದರೆ ಅದು ಡಾ. ಜಿ ಪರಮೇಶ್ವರ್, ಪರಮೇಶ್ವರ್ ಹೇಳಿದಂತೆ ವಿದ್ಯಾರ್ಥಿಗಳು ಐಎಎಸ್ ಐಪಿಎಸ್ ಏನೆಲ್ಲಾ ಆಗಬಹುದು ಆದರೆ ಸಂಸ್ಕಾರವಂತ ವಿದ್ಯಾರ್ಥಿಗಳಾಗಿ ನಾಡಿಗೆ ಒಳ್ಳೆ ಪ್ರಜೆಗಳಾಗಿ ಪೋಷಕರಿಗೆ ಒಳ್ಳೆ ಮಗನಾಗಿ ಸಂಸ್ಕಾರವಂತ ಮನುಷ್ಯನಾಗಿ ಬೆಳೆಯಬೇಕು, ಮುಂದಿನ ದಿನಗಳಲ್ಲಿ ಡಾ. ಜಿ ಪರಮೇಶ್ವರ್ ಮುಖ್ಯಮಂತ್ರಿಯಾಗಿ ಇದು ನಮ್ಮ ಆಶಯ ಎಂದರು.

ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವರು ಗೃಹ ಸಚಿವ ಡಾ .ಜಿ ಪರಮೇಶ್ವರ್ ಮಾತನಾಡಿ, 30 ಜನ ವಿದ್ಯಾರ್ಥಿಗಳಿದ್ದ ಸಂದರ್ಭದಲ್ಲಿ ಸಂಸ್ಕಾರ ಕಾರ್ಯಕ್ರಮಕ್ಕೆ ಭಾಗವಹಿಸಿದ್ದೇ ಈಗ 465 ಜನ ವಿದ್ಯಾರ್ಥಿಗಳು ಸಂಸ್ಕಾರ ಶಿಬಿರದಲ್ಲಿದ್ದಾರೆ. ಈ ಬೆಳವಣಿಗೆ ನೋಡಿದರೆ ಶ್ರೀ ಮಠ ಎಷ್ಟರಮಟ್ಟಿಗೆ ಬೆಳೆಯುತ್ತಿದೆ ಎಂದು ಮುನ್ಸೂಚನೆ ನೀಡುತ್ತಿದೆ , ಇದು ಉತ್ತಮ ಬೆಳವಣಿಗೆಯಾಗಿದೆ, ವಿದ್ಯಾರ್ಥಿಗಳಿಗೆ ಡಿಗ್ರಿ ಕೊಡಬಹುದು ಆದರೆ ವಿನಯ ಸಂಸ್ಕಾರ ಸಂಸ್ಕೃತಿ ಜೀವನ ಪಾಠವನ್ನು ಹೇಳಿಕೊಡುತ್ತದೆ, ಚಿಕ್ಕವಯಸ್ಸಿನಲ್ಲಿ ಮನುಕುಲದ ಬೀಜವನ್ನ ಮಠ ಬಿತ್ತುತ್ತಿವೆ, ಜಾತ್ಯಾತೀತವಾಗಿ ವಿದ್ಯಾರ್ಥಿಗಳು ಈ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಉತ್ತಮ ಬೆಳವಣಿಗೆ, ಮನುಕುಲಕ್ಕೆ ಧಾರ್ಮಿಕ ವಿಚಾರದಲ್ಲಿ ಜಾತಿ ಇರೋದಿಲ್ಲ ಈ ತತ್ವ ಶ್ರೀ ಮಠ ಸಮಾಜಕ್ಕೆ ಬಿತ್ತುತ್ತಿರುವುದು ಉತ್ತಮ ಬೆಳವಣಿಗೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ಶುಭ ಕಲ್ಯಾಣ್, ಜಿಲ್ಲಾ ಪಂಚಾಯತಿ ಸಿಇಒ ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್ ಗೌಡ, ಮಾಜಿ ಅಧ್ಯಕ್ಷ ರಾಮಕೃಷ್ಣಯ್ಯ, ತಾಸಿಲ್ದಾರ್ ಮಂಜುನಾಥ್, ತಾಲೂಕ್ ಪಂಚಾಯಿತಿ ಇ ಓ ಅಪೂರ್ವ , ಕೊರಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಶ್ವಥ್ ನಾರಾಯಣ್ , ಅರಕೆರೆ ಶಂಕರ್, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಮಹಾಲಿಂಗಯ್ಯ, ಎಂಜಿ ಶ್ರೀನಿವಾಸ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.
- ಶ್ರೀನಿವಾಸ