ಕೊರಟಗೆರೆ:-ನಮ್ಮದು ಬಡವರ ಪರವಾದ ಸರಕಾರ-ಅವರ ಮೇಲೆ ದಬ್ಬಾಳಿಕೆ ಮಾಡಿದರೆ ಗಂಭೀರ ಪರಿಣಾಮ ಎದುರಿಸಲಿದ್ದೀರಿ ಮೈಕ್ರೋ ಪೈನಾನ್ಸ್ ಕಂಪನಿಗಳಿಗೆ ಗೃಹ ಸಚಿವರ ಖಡಕ್ ಎಚ್ಚರಿಕೆ

ಕೊರಟಗೆರೆ:-ಮೈಕ್ರೋ ಪೈನಾನ್ಸ್ ಕಂಪನಿಗಳು ಗೂಂಡಾಗಳ ಮೂಲಕ ಸಾಲ ವಸೂಲಾತಿ ನೇಪದಲ್ಲಿ ಬಡವರ ಮೇಲೆ ದಬ್ಬಾಳಿಕೆ ಅಥವಾ ಶೋಷಣೆ ಮಾಡಿದರೆ ನಾನು ಮತ್ತು ನಮ್ಮ ಸರಕಾರ ಸುಮ್ಮನೇ ಕೂರುವುದಿಲ್ಲ.ಅಂತಹವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಿದ್ದೇವೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ ಖಡಕ್ ಎಚ್ಚರಿಕೆ ನೀಡಿದರು.

ಕೊರಟಗೆರೆ ತಾಲೂಕು ಚನ್ನರಾಯನದುರ್ಗ ಹೋಬಳಿಯ ಕುರಂಕೋಟೆ ಗ್ರಾಮಕ್ಕೆ ಶುಕ್ರವಾರ ಬೇಟಿ ನೀಡಿ ಮೈಕ್ರೋ ಪೈನಾನ್ಸ್ ಸಂತ್ರಸ್ತ ಮಾರುತಿಯ ಕುಟುಂಬಸ್ಥರಿಗೆ ಧೈರ್ಯ ತುಂಬಿ 50ಸಾವಿರ ವೈಯಕ್ತಿಕ ಧನಸಹಾಯ ನೀಡಿ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ರಾಜ್ಯದಲ್ಲಿ ಲಕ್ಷಾಂತರ ಜನರಿಗೆ ಅಧಿಕೃತ ಪೈನಾನ್ಸ್ ಕಂಪನಿಯವರು 59ಸಾವಿರ ಕೋಟಿ ಸಾಲ ನೀಡಿದ್ದಾರೆ. ವಸೂಲಿ ಮಾಡುವಾಗ ಗೂಂಡಗಳನ್ನು ಕಳಿಸೋದು,ಮನೆಗೆ ಬೀಗ ಹಾಕುವುದು,ನಾಮಫಲಕ ಹಾಕುವುದರ ಜೊತೆಗೆ ಹಲ್ಲೆ ನಡೆಸುವಂತಹ ಘಟನೆಗಳು ನಮ್ಮ ಸರಕಾರದ ಗಮನಕ್ಕೆ ಬಂದಿವೆ.ಸಿ.ಎಂ ಈ ವಿಚಾರವನ್ನು ಗಂಭೀರವಾಗಿ ಪರಿಗಣನೆ ಮಾಡಿದ್ದಾರೆ ಎಂದರು.

ಸಿ.ಎಂ ಸಲಹೆಯಂತೆ ಕಂದಾಯ,ಸಹಕಾರಿ ಮತ್ತು ಗೃಹ ಸಚಿವಾಲಯ ಈ ವಿಷಯವನ್ನು ಅತಿ ಸೂಕ್ಷ್ಮವಾಗಿ ಪರಿಗಣಿಸಿ ಹೊಸ ಕಾನೂನು ರಚಿಸಲು ಮುಂದಾಗಿದ್ದೇವೆ.ಕಾನೂನು ಬಾಹಿರವಾಗಿ ಒತ್ತಾಯವಾಗಿ ಹಣ ವಸೂಲಿ ಮಾಡಲು ಮುಂದಾದರೆ ತಕ್ಷಣ ಕ್ರಮ ಕೈಗೊಳ್ಳುವಂತೆ ರಾಜ್ಯದ ಎಲ್ಲಾ ಡಿಸಿ ಮತ್ತು ಎಸ್ಪಿಗಳ ಮೂಲಕ ತಹಶೀಲ್ದಾರ್ ಹಾಗೂ ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ ಎಂದರು.

ಕುರಂಕೋಟೆಯ ಮಾರುತಿಗೆ 2ಲಕ್ಷ 50ಸಾವಿರ ಸಾಲ ನೀಡಿ ಆತನಿಂದ 4ಲಕ್ಷ 50ಸಾವಿರ ಹಣ ವಸೂಲಿ ಮಾಡಲಾಗಿದೆ .ನಂತರವು ಕಿರುಕುಳ ನೀಡಿ ಮನೆಗೆ ಬೀಗ ಹಾಕಿ ಅಡಮಾನದ ಬರಹ ಬರೆದು ಅವಮಾನ ಮಾಡಿ ಮನೆಯ ಪತ್ರ ಪಡೆದಿದ್ದಾರೆ.ಫೈನಾನ್ಸ್ ನ ವ್ಯವಸ್ಥಾಪಕ ಮತ್ತು ಮೇಲ್ವಿಚಾರಕನ ಮೇಲೆ ಪ್ರಕರಣ ದಾಖಲಾಗಿದೆ.

ಗ್ರಾಹಕರಿಗೆ ಸಾಲದ ಅವಶ್ಯಕತೆ ಮತ್ತು ಹಿಂದಿರುಗಿ ಸಾಲ ಕಟ್ಟುವ ಶಕ್ತಿಯಿದ್ದರೇ ಮಾತ್ರ ಸಾಲ ಪಡಿಯಬೇಕು. ಇಲ್ಲವಾದಲ್ಲಿ ವಿನಾಕಾರಣ ಸಾಲ ಪಡೆದು ಸಮಸ್ಯೆಗೆ ಸಿಲುಕ ಬಾರದು. ಪೈನಾನ್ಸ್ ಕಂಪನಿಯವರು ಆರ್‌ಬಿಐ ಗೈಡ್‌ಲೈನ್ ಪರಿಶೀಲನೆ ನಡೆಸಿ ಸಾಲ ನೀಡಬೇಕಿದೆ.ಇಲ್ಲವಾದರೆ ಸಾಲದ ವಿಚಾರವಾಗಿ ಸಮಸ್ಯೆ ಉದ್ಬವವಾಗುತ್ತದೆ. ಅದಕ್ಕೆ ಪೈನಾನ್ಸ್ ಕಂಪನಿಯವರೆ ಹೊಣೆಗಾರರು ಎಂದು ತಿಳಿಸಿದರು.

ಈ ಸಂದರ್ಭ ತುಮಕೂರು ಜಿಪಂ ಸಿಇಓ ಡಾ.ಕೆ.ಪ್ರಭು, ಎಸ್ಪಿ ಕೆ.ವಿ.ಅಶೋಕ್, ಮಧುಗಿರಿ ಎಸಿ ಕೊಟ್ಟೋರು ಶಿವಪ್ಪ, ಕೊರಟಗೆರೆ ತಹಶೀಲ್ದಾರ್ ಮಂಜುನಾಥ.ಕೆ, ಸಿಪಿಐ ಅನಿಲ್, ಪಿಎಸೈ ಚೇತನ್ ಸೇರಿದಂತೆ ಇತರರು ಇದ್ದರು.

ಗ್ರಾ.ಪಂಗೆ ಗೃಹ ಸಚಿವರ ಬೇಟಿ..

ಕುರಂಕೋಟೆ ಗ್ರಾಪಂಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ ಬೇಟಿ ನೀಡಿ ಅಭಿವೃದ್ದಿ ಮತ್ತು ಅನುಧಾನದ ಕಡತಗಳನ್ನು ಪರಿಶೀಲನೆ ನಡೆಸಿದರು. ನರೇಗಾ ಯೋಜನೆಯಡಿ ಕಾಮಗಾರಿಯ ವಿಳಂಬದ ಬಗ್ಗೆ ಗ್ರಾಪಂ ಸದಸ್ಯರು ದೂರಿದರು. ನಂತರ ಜಿಪಂ ಸಿಇಓ ಡಾ.ಪ್ರಭು ಕುರಂಕೋಟೆ ಗ್ರಾಪಂಯ ಎಲ್ಲಾ ಸರಕಾರಿ ಶಾಲೆಗಳ ಕೌಪೌಂಡು ಕಾಮಗಾರಿ ಮುಕ್ತಾಯ ಆಗಿದೆ.ಇನ್ನುಳಿದ ಕಾಮಗಾರಿಗಳನ್ನು ತ್ವರಿತವಾಗಿ ಮುಗಿಸುತ್ತೇವೆ ಎಂದು ಗೃಹ ಸಚಿವರಿಗೆ ಮಾಹಿತಿ ನೀಡಿದರು.

ಡಿಜಿಟಲ್ ಅಭಿಲೇಖಾಲಯ ಉದ್ಘಾಟನೆ..

ಕಂದಾಯ ಇಲಾಖೆ ವ್ಯಾಫ್ತಿಯ 16ಲಕ್ಷ 25ಸಾವಿರ ಪುಟದ ನೂರಾರು ವರ್ಷಗಳ ಹಳೆಯ ಭೂದಾಖಲೆಗಳನ್ನು ಇತ್ತೀಚಿಗೆ ಸರಕಾರದ ಆದೇಶದಂತೆ ಡಿಜಿಟಲೀಕರಣ ಮಾಡಲಾಗಿತ್ತು. ಕಂದಾಯ ಇಲಾಖೆಯಲ್ಲಿನ ರಿಜಿಸ್ಟರ್ ಸೇರಿ 22 ಲಕ್ಷದ 50ಸಾವಿರ ನೂತನ ದಾಖಲೆಗಳನ್ನು ಭೂಸುರಕ್ಷಾ ಯೋಜನೆಯಡಿ ಡಿಜೀಟಲಿಕರಣ ಮಾಡಿರುವ ಅಭಿಲೇಖಾಲಯದ ನೂತನ ಕೊಠಡಿಯನ್ನು ಗೃಹಸಚಿವ ಡಾ.ಜಿ.ಪರಮೇಶ್ವರ ಉದ್ಘಾಟಿಸಿ ಭೂದಾಖಲೆಗಳ ಡಿಜಿಟಲ್ ಗಣಕೀಕರಣಕ್ಕೆ ಚಾಲನೆ ನೀಡಿದರು.

———————--ಶ್ರೀನಿವಾಸ್ ಕೊರಟಗೆರೆ

Leave a Reply

Your email address will not be published. Required fields are marked *

× How can I help you?