ಕೊರಟಗೆರೆ-ವಿದ್ಯಾರ್ಥಿಯೊಬ್ಬ ಅನುಮಾನಾಸ್ಪದವಾಗಿ ಸಾವಿಗೀಡಾಗಿರುವ ಘಟನೆ ತಾಲೂಕಿನ ಏಕಲವ್ಯ ವಸತಿ ಶಾಲೆಯಲ್ಲಿ ನಡೆದಿದೆ.
8ನೇ ತರಗತಿ ಓದುತ್ತಿದ್ದ ಅಭಿಷೇಕ್ (14 ವರ್ಷ) ಮೃತಪಟ್ಟ ದುರ್ದೈವಿ.
ಎಂದಿನಂತೆ ಶಾಲೆಗೆ ತೆರಳಿದ್ದ ಅಭಿಷೇಕ್ ಮದ್ಯಾನ್ನ ಮರಳಿ ಬಂದು ವಿಶ್ರಾಂತಿ ಪಡೆಯುತ್ತಿದ್ದ ಎನ್ನಲಾಗಿದ್ದು ಸ್ನೇಹಿತರು ಎಬ್ಬಿಸಲು ಹೋದಾಗ ಅಸ್ವಸ್ಥನಾಗಿದ್ದು ಕಂಡುಬಂದಿದೆ.
ತಕ್ಷಣ ಆತನನ್ನು ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸಾಗಿಸಲಾಯಿತಾದರೂ ಅಷ್ಟರೊಳಗೆ ಆತನ ಪ್ರಾಣಪಕ್ಷಿ ಹಾರಿಹೋಗಿತ್ತು ಎನ್ನುವ ಮಾಹಿತಿಗಳಿದ್ದು ಸೂಕ್ತ ಸಮಯಕ್ಕೆ ಚಿಕಿತ್ಸೆ ದೊರೆತಿದ್ದರೆ ಬದುಕುಳಿಯುತ್ತಿದ್ದ ಎನ್ನುವ ಮಾತುಗಳು ಕೇಳಿಬಂದಿವೆ.
ಶಕುನಿ ತಿಮ್ಮನಹಳ್ಳಿ ಗ್ರಾಮದ ರಮೇಶ್,ಮಂಜುಳ ದಂಪತಿಗಳ ಪುತ್ರನಾಗಿದ್ದ ಅಭಿಷೇಕ್ ನ ಸಾವಿನ ಸುತ್ತ ಹಲವನು ಅನುಮಾನಗಳು ಎದ್ದಿದ್ದು ಕೊರಟಗೆರೆ ಪೋಲೀಸರ ನಿಷ್ಪಕ್ಷಪಾತ ತನಿಖೆಯಿಂದಷ್ಟೇ ಸತ್ಯ ಹೊರಬರಬೇಕಿದೆ.
ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಸೇರಿದಂತೆ ಉನ್ನತ ಮಟ್ಟದ ಅಧಿಕಾರಿಗಳ ಭೇಟಿ
ತುಮಕೂರು ಜಿಲ್ಲಾಧಿಕಾರಿ ಶುಭಕಲ್ಯಾಣ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು.ಆಗ ಹಬ್ಬಕ್ಕೆಂದು ಊರಿಗೆ ಹೋಗಿದ್ದ ವಾರ್ಡನ್ ಮಂಜುನಾಥ್ ಹಾಗೂ ಪ್ರಿನ್ಸಿಪಾಲ್ ವಿನೋದ್ ಮರಳಿ ಬಂದಿಲ್ಲದಿರುವುದರ ಬಗ್ಗೆ ಮಾಹಿತಿ ಪಡೆದು ಅವರಿಬ್ಬರ ಅಮಾನತ್ತಿಗೆ ಆದೇಶ ನೀಡಿದರು.
ಈ ಸಂದರ್ಭದಲ್ಲಿ ವಸತಿ ಶಾಲೆಯ ವಿದ್ಯಾರ್ಥಿಗಳು ಹಲವಾರು ದೂರುಗಳನ್ನು ಹೇಳಿದ್ದು ಅವುಗಳೆಲ್ಲವುಗಳ ಬಗ್ಗೆ ಕೂಲಂಕುಷ ತನಿಖೆ ನಡೆಸಿ ವರದಿ ನೀಡುವಂತೆ ಪರಿಶಿಷ್ಟ ಜಾತಿಯ ಜಿಲ್ಲಾ ಕಲ್ಯಾಣ ಅಧಿಕಾರಿ ತ್ಯಾಗರಾಜ್ ಅವರಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವರಿಂದ 2 ಲಕ್ಷ ಪರಿಹಾರ
ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಗೃಹ ಸಚಿವರಾದ ಡಾ.ಜಿ ಪರಮೇಶ್ವರ್ ಎರಡು ಲಕ್ಷ ರೂಪಾಯಿಗಳ ಪರಿಹಾರ ದನವನ್ನು ನೀಡಿದ್ದು ಅವರ ವಿಶೇಷ ಅಧಿಕಾರಿ ನಾಗಣ್ಣ ಪೋಷಕರಿಗೆ ಹಸ್ತಾಂತರಿಸಿದರು.
ಕೊರಟಗೆರೆ ಬ್ಲ್ಯಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಶ್ವಥ್ ನಾರಾಯಣ್, ತಹಶೀಲ್ದಾರ್ ಮಂಜುನಾಥ್, ಸಿಪಿಐ ಅನಿಲ್, ತಾಲೂಕ್ ಪಂಚಾಯತಿ ಇ ಓ ಅಪೂರ್ವ ಅನಂತರಾಮು, ಪಿಎಸ್ಐ ಚೇತನ್ ಗೌಡ, ಯೋಗೇಶ್,ಮಂಜುನಾಥ್ ,ತಾ .ಪಂ ಮಧುಸೂದನ್ ಮೃತ ಬಾಲಕನ ಕುಟುಂಬಕ್ಕೆ ಸಾಂತ್ವನ ಹೇಳಿದರು.
———————-ಶ್ರೀನಿವಾಸ್ ಕೊರಟಗೆರೆ