ಕೊರಟಗೆರೆ: ತಾಲೂಕಿನ ಕೋಳಾಲ ಹೋಬಳಿಯ ಎಲೆರಾಂಪುರ ಗೋಕುಲ ಗ್ರಾಮದಲ್ಲಿ. ಮಹಾ ಶಿವರಾತ್ರಿ ಹಬ್ಬ ಹಾಗೂ ಅಮಾವಾಸ್ಯೆ ಪ್ರಯುಕ್ತ. ಪಾತಾಲಿಂಗೇಶ್ವರ ಸ್ವಾಮಿ. ವಿನಾಯಕ ಸ್ವಾಮಿ. ಜುಂಜಪ್ಪ ಸ್ವಾಮಿ. ದೇವರಗಳ ಜಾತ್ರಾ ಮಹೋತ್ಸವ ಎರಡು ದಿನಗಳ ಕಾಲ ಅದ್ದೂರಿಯಾಗಿ ನಡೆಯಿತು.
ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದ ಶ್ರೀ ಡಾ: ಹನುಮಂತನಾಥ ಸ್ವಾಮೀಜಿ ಮಾತನಾಡಿ: ಎಲೆರಾಂಪುರ ಗೋಕುಲದಲ್ಲಿ ಹಲವಾರು ವರ್ಷಗಳಿಂದ ಪಾತಲಿಂಗೇಶ್ವರ. ವಿನಾಯಕ. ಜುಂಜಪ್ಪ ಸ್ವಾಮಿ. ದೇವರುಗಳ ಜಾತ್ರಾ ಮಹೋತ್ಸವವನ್ನು ಬಹಳ ಅಚ್ಚುಕಟ್ಟಾಗಿ ಮಾಡಿಕೊಂಡು ಬರುತ್ತಿದ್ದು ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಸದಾ ಭಕ್ತಿಯಿಂದ ನೆರವೇದವು. ಎರಡು ದಿನಗಳ ಕಾಲ ದೇವರುಗಳಿಗೆ ಅಭಿಷೇಕ ಬಿಲ್ವಾರ್ಚನೆ, ಸಹಸ್ರನಾಮ. ಗಂಗಾಪೂಜಾ ಕಾರ್ಯಕ್ರಮ. 101 ಎಡೆ ಪೂಜಾ ಕಾರ್ಯಕ್ರಮ ನಡೆಯಿತು.
ಇದೇ ಸಂದರ್ಭದಲ್ಲಿ ದೇವರುಗಳ ಉತ್ಸವ. ಇರಕಸಂದ್ರ ಕೆರೆಯಲ್ಲಿ ಗಂಗಾಪೂಜೆ ಕಾರ್ಯಕ್ರಮ ಮಾಡಿದ್ದು ಹಾಗೂ ದೇವಸ್ಥಾನಗಳಲ್ಲಿ ಬಗಬಗೆಯ ಹೂವಿನ ಅಲಂಕಾರ ಭಕ್ತರನ್ನು ನೋಡಿ ಬಹಳ ಸಂತೋಷವಾಗಿದ್ದು. ನಿಮ್ಮಗಳಿಗೆ ಪಾತಲಿಂಗೇಶ್ವರ ಸ್ವಾಮಿ. ವಿನಾಯಕ ಸ್ವಾಮಿ. ಜುಂಜಪ್ಪ ಸ್ವಾಮಿ. ದೇವರುಗಳ ಆಶೀರ್ವಾದ ನಿಮಗಳ ಮೇಲೆ ಇರಲಿ ಎಂದು ಹೇಳುತ್ತಾ. ಹಲವಾರು ಊರುಗಳಿಂದ ಹಾಗೂ ಅಕ್ಕ ಪಕ್ಕದ ಗ್ರಾಮದಿಂದ ಬಂದು ಭಕ್ತರು ಪೂಜೆ ಸಲ್ಲಿಸಿದ್ದಾರೆ.

ಈ ಜಾತ್ರೆಗೆ ಸಹಕರಿಸಿದ ಎಲ್ಲಾ ಭಕ್ತಾದಿಗಳಿಗೂ ಪಾತ ಲಿಂಗೇಶ್ವರ ಸ್ವಾಮಿ ಅಭಿವೃದ್ಧಿ ಪದಾಧಿಕಾರಿಗಳಿಗೂ ದೇವರು ಆರೋಗ್ಯ ಆಯಸ್ಸು ಕೊಡಲೆಂದು ಈ ಸಂದರ್ಭದಲ್ಲಿ ಕೇಳಿಕೊಳ್ಳುತ್ತೇನೆ ಎಂದು ಹೇಳಿದರು.
ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಗೀತಾ ನರಸಿಂಹರಾಜು. ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಚಂದ್ರಶೇಖರಯ್ಯ. ದೇವಸ್ಥಾನದ ಮುಖ್ಯಸ್ಥರಾದ ಪಾತ ಲಿಂಗಯ್ಯ. ಉಮೇಶ್ ಚಂದ್ರ. ಲಕ್ಷ್ಮಿಕಾಂತಯ್ಯ. ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಹನುಮಂತ ರಾಯಪ್ಪ. ನಾರಾಯಣಪ್ಪ. ಶಂಕರಣ್ಣ. ಈರಣ್ಣ.ಹಾಗೂ ಊರಿನ ಗ್ರಾಮಸ್ಥರು ಮತ್ತು ಪಾತಲಿಂಗೇಶ್ವರ ಸ್ವಾಮಿ ಅಭಿವೃದ್ದಿ ಪದಾಧಿಕಾರಿಗಳು ಹಾಜರಿದ್ದರು.
-ನರಸಿಂಹಯ್ಯ ಕೋಳಾಲ