ಕೊರಟಗೆರೆ:ಎಲೆರಾಂಪುರ ಗ್ರಾಮಪಂಚಾಯತಿಯ ನೂತನ ಸಾರಥಿಯಾಗಿ ಗೀತಾ ನರಸಿಂಹರಾಜು ಆಯ್ಕೆಯಾಗಿದ್ದಾರೆ.
ಒಟ್ಟು ಹದಿನೆಂಟು ಸದಸ್ಯರ ಬಲಾಬಲ ಹೊಂದಿರುವ ಗ್ರಾಮಪಂಚಾಯತಿಯ ಅಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಗೆ ಗೀತಾ ನರಸಿಂಹರಾಜು ಹಾಗೂ ಡಿ.ನಾಗೇನಹಳ್ಳಿಯ ಚಂದ್ರಯ್ಯ ಇಬ್ಬರು ನಾಮಪತ್ರವನ್ನು ಸಲ್ಲಿಸಿದ್ದರು.
ಗೀತಾ ನರಸಿಂಹರಾಜು 10 ಮತಗಳನ್ನು ಪಡೆಯುವುದರ ಮೂಲಕ ಅಧ್ಯಕ್ಷಗಾದಿಗೆ ಏರಿದರೆ,ಡಿ.ನಾಗೇನಹಳ್ಳಿಯ ಚಂದ್ರಯ್ಯ ಅವರು 8 ಮತಗಳನ್ನು ಪಡೆದು ಪರಾಭವಗೊಂಡರು.
ಚುನಾವಣಾಧಿಕಾರಿಯಾದ ತಹಸೀಲ್ದಾರ್ ಕೆ.ಮಂಜುನಾಥ್ ಕರ್ತವ್ಯ ನಿರ್ವಹಿಸಿದರು.
ನೂತನ ಅಧ್ಯಕ್ಷೆ ಗೀತಾ ನರಸಿಂಹರಾಜು ಮಾತನಾಡಿ,ಎಲೆರಾಂಪುರ ಗ್ರಾ,ಪಂ ವ್ಯಾಪ್ತಿಗೆ ಬರುವ ಗ್ರಾಮಗಳ ಅಭಿವೃದ್ದಿಗಾಗಿ ಎಲ್ಲಾ ಸದಸ್ಯರ ಸಹಕಾರ ಪಡೆದು ಕಾರ್ಯನಿರ್ವಹಿಸಲಾಗುವುದು.ಗ್ರಾಮಗಳಲ್ಲಿರುವ ನೀರು, ಚರಂಡಿ, ಬೀದಿ ದೀಪ, ಸೇರಿದಂತೆ ಇತರ ಸಮಸ್ಯೆಗಳಿಗೆ ಶೀಘ್ರವಾಗಿ ಸ್ಪಂದಿಸುವುದರ ಜೊತೆಗೆ ಗ್ರಾಮಗಳ ಸಮಗ್ರ ಅಭಿವೃದ್ದಿಗೆ ಒತ್ತು ಕೊಡಲಾಗುವುದು.ನನ್ನನ್ನು ಅಧ್ಯಕ್ಷೆಯಾಗಿ ಆಯ್ಕೆ ಮಾಡಿದ ಗ್ರಾ.ಪಂ ಸದಸ್ಯರು,ಊರಿನ ಮುಖಂಡರು ಎಲ್ಲರಿಗೂ ಧನ್ಯವಾದಗಳನ್ನ ತಿಳಿಸುತ್ತೇನೆ ಎಂದರು.
ಸದಸ್ಯೆ ಮಮತಾ ಮಾತನಾಡಿ,ಗ್ರಾಮಗಳ ಅಭಿವೃದ್ದಿಗೆ ಎಲ್ಲಾ ಸದಸ್ಯರು ಅಧ್ಯಕ್ಷರಿಗೆ ಸಹಕಾರ ನೀಡುತ್ತೇವೆ ಎಂದು ತಿಳಿಸಿದರು.
ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸುರೇಶ್,ವೇದಾವತಿ,ಸದಸ್ಯರುಗಳಾದ ಗೌರಮ್ಮ, ವೈ ಎಚ್ ಹನುಮಂತರಾಯಪ್ಪ,ತ್ರಿವೇಣಿ, ಕೃಷ್ಣವೇಣಿ,ಹನುಮಂತರಾಯಪ್ಪ,ಪ್ರಕಾಶ್,ಕುಮಾರ್,ಹನುಮಂತರಾಯಪ್ಪ, ನಳಿನ, ಗಂಗಮ್ಮ, ಗಂಗಾದೇವಿ, ರಂಗಯ್ಯ,ಸರ್ವೇಶ್,ಉಮೇಶ್ ಚಂದ್ರ,ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗ,ಹಾಗೂ ಕೋಳಾಲ ಪಿ.ಎಸ್.ಐ ಯೋಗೀಶ್ ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು.
————--ನರಸಿಂಹಯ್ಯ ಕೋಳಾಲ