ಕೊರಟಗೆರೆ:- ದೇಶದಲ್ಲಿ ಈಗಾಗಲೇ ನಾನಾ ಕಾಯಿಲೆಗಳು ಹರಡುತ್ತಿದ್ದು, ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳ ಆರೋಗ್ಯದ ಬಗ್ಗೆ ಗಮನ ಹರಿಸಬೇಕು. ಎಂದು ಸಂಕಲ್ಪ ಫೌಂಡೇಶನ್ ಅಧ್ಯಕ್ಷ ಎಸ್.ಮಹೇಶ್ ತಿಳಿಸಿದರು.
ತಾಲೂಕಿನ ಕಸಬಾ ಹೋಬಳಿ ಬೋಡಬಂಡೇನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಸಂಕಲ್ಪ ಫೌಂಡೇಶನ್, ಮೈಕ್ರೋಲ್ಯಾಂಡ್ ಹಾಗೂ ಟೈಡ್ ಸಹಯೋಗದೊಂದಿಗೆ 50ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಚಿತವಾಗಿ ಆಯುಷ್ಮಾನ್ ಭಾರತ್ ಕಾರ್ಡ್ ನೀಡಿ ಮಾತನಾಡಿದರು.

ನಮ್ಮ ಭಾರತ ದೇಶ ಬಡತನದ ದೇಶವಾಗಿದ್ದು, ಗ್ರಾಮೀಣ ಭಾಗದಲ್ಲಿ ಮಕ್ಕಳು ವಿಧ್ಯಾಬ್ಯಾಸ ಇಲ್ಲದೆ ವಂಚಿತರಾಗಬಾರದು ಎನ್ನುವ ಉದ್ದೇಶದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನೇಕ ಯೋಜನೆಗಳನ್ನ ಜಾರಿಗೆ ತರಲಾಗಿದ್ದು, ಪೋಷಕರು ಸರ್ಕಾರದ ಯೋಜನೆಗಳನ್ನ ಸಮರ್ಪಕವಾಗಿ ಬಳಸಿಕೊಂಡು ತಮ್ಮ ಮಕ್ಕಳ ಭವಿಷ್ಯವನ್ನ ರೂಪಿಸಿ. ಈ ದೇಶಕ್ಕೆ ಉತ್ತಮ ಪ್ರಜೆ ನೀಡುವುದು ನಮ್ಮ ನಿಮ್ಮೇಲ್ಲರ ಕರ್ತವ್ಯ ಎಂದು ಹೇಳಿದರು.

ಗ್ರಾಮೀಣ ಭಾಗ ಎಷ್ಟೋ ಮಕ್ಕಳು ಇಂದಿಗೂ ಆಯುಷ್ಮಾನ್ ಭಾರತ್ ಕಾರ್ಡ್ ಇಲ್ಲದೆ ಇರುವುದು ನಮ್ಮ ಸಂಕಲ್ಪ ಫೌಂಡೇಶನ್ ಮೈಕ್ರೋಲ್ಯಾಂಡ್ ಹಾಗೂ ಟೈಡ್ ಪದಾಧಿಕಾರಿಗಳ ಗಮನಕ್ಕೆ ಬಂದಿದ್ದು, ಅದರಿಂದ ಬೋಡಬಂಡೇನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ 50 ಕ್ಕೂ ಹೆಚ್ಚು ಮಕ್ಕಳಿಗೆ ಉಚಿತವಾಗಿ ಕಾರ್ಡ್‍ಗಳನ್ನ ಮಾಡಿಕೊಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಅನೇಕ ಶಾಲೆಗಳಿಗೆ ಭೇಟಿ ನೀಡಿ ಆಯುಷ್ಮಾನ್ ಭಾರತ್ ಕಾರ್ಡ್ ಮಾಡಿಕೊಡಲಾಗುವುದು ಎಂದು ತಿಳಿಸಿದರು.
ಇದೆ ಸಂದರ್ಭದಲ್ಲಿ ಸಿ ಅರ್ ಪಿ ರಮೇಶ್, ಶಾಲೆಯ ಮುಖ್ಯ ಶಿಕ್ಷಕಿ ಸಾವಿತ್ರಮ್ಮ, ಗ್ರಾಪಂ ಸದಸ್ಯ ರಂಗನಾಥ್, ಟೈಡ್ ಮುಖ್ಯಸ್ಥರಾದ ರಂಗಸ್ವಾಮಿ, ನಾಗರಾಜು, ಸ್ವಯಂ ಸೇವಕರಾದ ಸೌಮ್ಯ, ಧರ್ಮಪಾಲ್, ಜ್ಯೋತಿ, ಗೀತಾ, ಮಧು, ಅಂಕಿತ್, ಭರತೇಶ್, ಮೈಕ್ರೋಲ್ಯಾಂಡ್ ಹಾಗೂ ಟೈಡ್ ಪದಾಧಿಕಾರಿಗಳು ಸೇರಿದಂತೆ ಇತರರು ಇದ್ದರು.
ವರದಿ ನರಸಿಂಹಯ್ಯ ಕೋಳಾಲ