ಕೊರಟಗೆರೆ: ತಾಲೂಕಿನ ಕೋಳಾಲ ಹೋಬಳಿಯ ಚಿನ್ನ ಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೆದೆನಹಳ್ಳಿ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಹೊಳೆ ನಂಜುಂಡೇಶ್ವರ ಸ್ವಾಮಿ ಪುಣ್ಯಕ್ಷೇತ್ರದಲ್ಲಿ ಫೆಬ್ರವರಿ 26 ಹಾಗೂ 27ನೇ ತಾರೀಕು ಅದ್ದೂರಿ ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಕ್ಷೇತ್ರ ಪ್ರಧಾನ ಅರ್ಚಕ ಶಿವಕುಮಾರ್ ಹೇಳಿದ್ದಾರೆ.
ಹೊಳೆ ನಂಜುಂಡೇಶ್ವರ ಸ್ವಾಮಿಯ ಹಲವಾರು ವರ್ಷಗಳ ಇತಿಹಾಸವಿದ್ದು. ಜಾತ್ರಾ ಮಹೋತ್ಸವದ ಅದ್ದೂರಿಯಾಗಿ ಆಚರಣೆಗೆ ತುಮಕೂರು ಜಿಲ್ಲೆ ಸೇರಿದಂತೆ ರಾಜ್ಯದ ಅನೇಕ ಭಾಗಗಳಿಂದ ಭಕ್ತಾದಿಗಳು ಆಗಮನಿಸಿದ್ದಾರೆ. ಭಕ್ತಾದಿಗಳ ಅನುಕೂಲಕ್ಕಾಗಿ 5,000 ಹೆಚ್ಚು ಕಾರು ಮತ್ತು ಬೈಕು ಪಾರ್ಕಿಂಗ್ ವ್ಯವಸ್ಥೆಯನ್ನು ಟ್ರಸ್ಟ್ ಇಂದ ಮಾಡಲಾಗಿದ್ದು.
ಚಿನ್ನಹಳ್ಳಿ ಗ್ರಾಮ ಪಂಚಾಯಿತಿಯಿಂದ ದೇವಸ್ಥಾನದ ಸುತ್ತಲೂ ಸ್ವಚ್ಛತೆಯನ್ನು ಕೂಡ ಮಾಡಿದ್ದು.ಹಾಗೂ ದೇವಸ್ಥಾನಕ್ಕೆ ಬಂದ ಭಕ್ತಾದಿಗಳಿಗೆ ಚಿನ್ನಹಳ್ಳಿ ಗ್ರಾಮದ ಜಗದೀಶ್ ರವರ ನೇತತ್ವದಲ್ಲಿ ಹಲವಾರು ವರ್ಷಗಳಿಂದ ದೇವಸ್ಥಾನಕ್ಕೆ ಬಂದ ಭಕ್ತಾದಿಗಳಿಗೆ ದಾಸೋಹ ಅನ್ನ ಸಂತರ್ಪಣೆ ಅವರ ಜೊತೆಯಲ್ಲಿ ಭಕ್ತಾದಿಗಳು ಕೈಜೋಡಿಸಿ ಮಾಡಿಕೊಂಡು ಬರುತ್ತಿದ್ದು ಈ ವರ್ಷವೂ ಕೂಡ ನಡೆಯುತ್ತದೆ ಹಾಗೂ ಹಬ್ಬದ ದಿನದಂದು ಮಂಗಳವಾದ್ಯ ಅಭಿಷೇಕ ವಿಶೇಷ ಪೂಜೆ ಹೂವಿನ ಅಲಂಕಾರ ವಿವಿಧ ಹಣ್ಣುಗಳ ಅಲಂಕಾರ ಸ್ವಾಮಿಗೆ ನೆರವೇರಲಿದೆ ಮತ್ತು ಬಂದ ಭಕ್ತಾದಿಗಳಿಗೆ ಯಾವುದೇ ತೊಂದರೆಯಾಗದಂತೆ, ಪೊಲೀಸ್ ಸಿಬ್ಬಂದಿಯೂ ಕೂಡ ಕಾರ್ಯನಿರ್ವಹಿಸುತ್ತಾರೆ ಎಂದು ಹೇಳಿದರು.
– ನರಸಿಂಹಯ್ಯ ಕೋಳಾಲ