ಕೊರಟಗೆರೆ :– ಗ್ರಾಮೀಣ ಪ್ರದೇಶದ ಬಡ ಜನತೆ ಆರೋಗ್ಯ ಸುಧಾರಣೆಯ ದೃಷ್ಟಿಯಿಂದ ಇಂತಹ 10 ಹಲವು ಉಚಿತ ಆರೋಗ್ಯ ತಪಾಸಣಾ ಶಿಬಿರಗಳು ಅಗತ್ಯತೆ ಇದ್ದು,ಕೊರಟಗೆರೆ ರೋಟರಿ ಕ್ಲಬ್ ಅಧ್ಯಕ್ಷ ಡಿ ಟಿ ಶ್ರೀನಿವಾಸ್ ಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಅರಸಾಪುರ ಸರ್ಕಾರಿ ಪ್ರೌಢಶಾಲೆ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಅವರಣದಲ್ಲಿ ಗ್ರಾಮ ಪಂಚಾಯತಿ ಸಹಯೋಗ ಸೇರಿದಂತೆ ರೋಟರಿ ಕ್ಲಬ್ ಕೊರಟಗೆರೆ, ಸಿದ್ದಾರ್ಥ ವೈದ್ಯಕೀಯ ಮಹಾವಿದ್ಯಾಲಯ ತುಮಕೂರು, ಗ್ರಾಮ ಪಂಚಾಯಿತಿ ಅರಸಾಪುರ ಮತ್ತು ಪರಿವರ್ತನ ಸಂಸ್ಥೆ ಕೊರಟಗೆರೆ, ಸೋಶಿಯಲ್ ವೆಲ್ಫೇರ್ ಮತ್ತು ರೂರಲ್ ಡೆವಲಪ್ಮೆಂಟ್ ಸೊಸೈಟಿ ಜನಜಾಗೃತಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ಕನಸು ಚಾರಿಟಬಲ್ ಟ್ರಸ್ಟ್, ಪ್ರತಿಷ್ಠಿತ ಫೌಂಡೇಶನ್ ಆಸರೆ ಫೌಂಡೇಶನ್, ದಾರಿ ಸೇವಾ ಫೌಂಡೇಶನ್, ಹಾಗೂ ತಾಲೂಕು ಲಂಬಾಣಿ (ಬಂಜಾರ) ಸೇವಾ ಸಂಘ , ಸಹಕಾರದಲ್ಲಿ ಹಮ್ಮಿಕೊಳ್ಳಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಕಡೆ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಹಮ್ಮಿಕೊಳ್ಳುವ ಮೂಲಕ ಬಡಜನತೆಗೆ ಆಸರೆಯಾಗುವ ಸಂಕಲ್ಪ ಹೊಂದಿರುವುದಾಗಿ ಹೇಳಿದರು.

ರೋಟರಿ ಕ್ಲಬ್ ಕಾರ್ಯದರ್ಶಿ ವಿ ಎಸ್ ಮೂರ್ತಿ ಮಾತನಾಡಿ ಹಳ್ಳಿಗಾಡಿನ ಪ್ರದೇಶಗಳಲ್ಲಿ ಎಷ್ಟೂ ಮಹಿಳೆಯರು, ಅಂಗವಿಕಲರು, ವೃದ್ಧರು ಹಲವು ರೋಗ ರುಜನಗಳಿಂದ ಬಳಲುತ್ತಿದ್ದು, ತಾಲೂಕು ಕೇಂದ್ರ ಸ್ಥಾನಗಳಿಗೆ ಹಾಗೂ ಆಸ್ಪತ್ರೆಗಳಿಗೆ ಬಂದು ತೋರಿಸಲಾಗದ ಪರಿಸ್ಥಿತಿಯಲ್ಲಿದ್ದು ಅಂತಹ ಅಶಕ್ತ ಬಡ ಜನತೆಗೆ ಉಚಿತ ಆರೋಗ್ಯ ಶಿಬಿರಗಳು ವರದಾನ ವಾಗಲಿವೆ ಎಂದರು.
ರೋಟರಿ ಕ್ಲಬ್ ನ ಖಜಾಂಚಿ ನರಸಿಂಹಮೂರ್ತಿ ಮಾತನಾಡಿ ಗ್ರಾಮೀಣ ಪ್ರದೇಶದ ಬಡ ಜನತೆ ಪ್ರಸಕ್ತ ಸನ್ನಿವೇಶದಲ್ಲಿ ಬಹಳಷ್ಟು ಜನ ದೃಷ್ಟಿ ದೋಷ, ಕನ್ನಡಕಗಳ ಕೊರತೆ, ಬಿಪಿ ಶುಗರ್ ಬಗ್ಗೆ ಅರಿವಿಲ್ಲದೆ ಬಹಳಷ್ಟು ರೋಗ ರುಜ ನಗಳಿಂದ ಬಳಲುತ್ತಿದ್ದು, ಇಂತಹ ಬಡ ಜನತೆಗೆ ಆಸರೆಯಾಗುವ ದೃಷ್ಟಿಯಿಂದ ಕೊರಟಗೆರೆ ರೋಟರಿ ಕ್ಲಬ್ ಕೊರಟಗೆರೆ ತಾಲೂಕಿನಲ್ಲಿ ಹೋಬಳಿವಾರು ಉಚಿತ ತಪಾಸಿನ ಶಿಬಿರಗಳನ್ನ ಹಮ್ಮಿಕೊಳ್ಳುವ ಮೂಲಕ ಗ್ರಾಮೀಣ ಭಾಗದ ಜನತೆಯ ಅಸರೆಗೆ ನಿಲ್ಲಲಾಗುವುದು ಎಂದು ಅಭಿಪ್ರಾಯಪಟ್ಟರು.
ತುಮಕೂರು ಶ್ರೀ ಸಿದ್ದಾರ್ಥ ಆಸ್ಪತ್ರೆಯ ವೈದ್ಯರಾದ ಪುಷ್ಪಾಂಜಲಿ ಮಾತನಾಡಿ ವೈದ್ಯಕೀಯ ವೃತ್ತಿ ಎಂಬುದು ಸೇವಾ ಹಿನ್ನಲೆಯಲ್ಲಿ ಮಾನವೀಯ ಕಳಕಳಿಯಿಂದ ರೋಗಿಗಳಿಗೆ ಚಿಕಿತ್ಸೆ ನೆಡೆಯುವ ಒಂದು ವೃತ್ತಿ ಆಗಬೇಕೆ ವಿನಹ ವ್ಯಾಪಾರವಾಗಬಾರದು , ವೈದ್ಯರಾದವರು ರೋಗಿಯ ಚಿಕಿತ್ಸೆಯಲ್ಲಿಯೇ ನೆಮ್ಮದಿ ಪಡೆಯಬೇಕು ಎಂದು ಅಭಿಪ್ರಾಯ ಪಟ್ಟರು.

ಅರಸಾಪುರ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಚಂದ್ರಕಲಾ ರಾಜಣ್ಣ ಮಾತನಾಡಿ ಪ್ರತಿ ಗ್ರಾಮಗಳಲ್ಲಿಯೂ ಆರೋಗ್ಯದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಇಲ್ಲದೆ ಬಹಳಷ್ಟು ರೋಗಗಳಿಂದ ಸಾರ್ವಜನಿಕರು ಬಳಲುತ್ತಿದ್ದು, ಬಿಪಿ, ಶುಗರ್ , ಹಲ್ಲಿನ ಸಮಸ್ಯೆ, ಕಣ್ಣಿನ ಸಮಸ್ಯೆ, ಗರ್ಭಕೋಶ ಸಮಸ್ಯೆ, ಬಹಳಷ್ಟು ವೃದ್ಧಾಪ್ಯ ವರ್ಗ ದೃಷ್ಟಿದೋಷದಿಂದ ಶಸ್ತ್ರ ಚಿಕಿತ್ಸೆ ಪಡೆಯಲಾಗದೆ ದೃಷ್ಟಿ ಹೀನತೆಯಿಂದ ಬಳಲುತ್ತಿದ್ದು ಮತ್ತಷ್ಟು ಬಡ ಜನತೆ ಕನ್ನಡಕಗಳ ಕೊರತೆಯಿಂದ ಬಳಲುತ್ತಿರುವುದು ಇಂತಹ ಉಚಿತ ತಪಾಸಣಾ ಶಿಬಿರಗಳು ಸಾರ್ವಜನಿಕರಿಗೆ ಆಸರೆಯಾಗುವ ಮೂಲಕ ಮಾನವೀಯತೆ ಮೆರೆಯಬೇಕು ಎಂದು ಮನವಿ ಮಾಡಿಕೊಂಡರು.

ಅರಸಾಪುರ ಗ್ರಾಮ ಪಂಚಾಯತಿ ಪಿಡಿಒ ಪೃಥ್ವಿಭಾ ಮಾತನಾಡಿ ರೋಟರಿ ಕ್ಲಬ್ ಮತ್ತು ಸಿದ್ದಾರ್ಥ ವೈದ್ಯಕೀಯ ಆಸ್ಪತ್ರೆ ಹಾಗೂ ಹಲವು ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಗಡಿಭಾಗವಾದ ನಮ್ಮ ಗ್ರಾಮಕ್ಕೆ ರೋಟರಿ ಕ್ಲಬ್ ಪ್ರಪ್ರಥಮವಾಗಿ ಆದ್ಯತೆ ನೀಡಿ ಬಂದಿರುವುದು ನಮ್ಮೆಲ್ಲರ ಸೌಭಾಗ್ಯ ಆರೋಗ್ಯ ಎನ್ನುವುದು ಮಹಾಭಾಗ್ಯವಾಗಿದೆ.
ನಾವು ದುಡಿದಂತ ಹಣವನ್ನು, ಸಮಯವನ್ನು ಆರೋಗ್ಯಕ್ಕೆ ಮೀಸಲಿಡುವ ಪರಿಸ್ಥಿತಿ ಬಂದಿದೆ ಇಂದಿನ ಆಹಾರ ಪದ್ಧತಿ ಇನ್ನು ಹಲವು ಕರ್ಣಗಳಿಂದ ನಮ್ಮ ಪಂಚಾಯತಿ ವ್ಯಾಪ್ತಿಯಲ್ಲಿ ಇಂತಹ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಂತಸದ ವಿಚಾರ ಇಂತಹ ಕಾರ್ಯಕ್ರಮಗಳಿಂದ ಗ್ರಾಮೀಣ ಭಾಗದ ಬಡ ಜನತೆಗೆ ಅನುಕೂಲವಾಗಲಿದೆ ಗ್ರಾಮದ ಜನತೆ ಇದರ ಸುದೂಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
- ಶ್ರೀನಿವಾಸ್ ಕೊರಟಗೆರೆ