ಕೊರಟಗೆರೆ :- ಪಟ್ಟಣದ ಆರಾದ್ಯದೈವ ಶ್ರೀ ಗಂಗಾಧರೇಶ್ವರ ಸ್ವಾಮಿಗೆ ಮಹಾಶಿವರಾತ್ರಿ ಅಂಗವಾಗಿ ನೆಡೆದ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಕೊನೆಯದಾಗಿ ಸಿಂಹವಾಹನೋತ್ಸವ ಹಾಗೂ ರಾತ್ರಿ ಶಯನೋತ್ಸವ ಕಾರ್ಯಕ್ರಮ ನಡೆಸಲಾಯಿತು.
ಪಟ್ಟಣಕ್ಕೆ ಹೊಂದಿಕೊಂಡತ್ತೆ ಇರುವ ಗಂಗಾಧರೇಶ್ವರ ಸ್ವಾಮಿ ಬೆಟ್ಟದಲ್ಲಿ ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಕಳೆದ ಒಂದು ವಾರಗಳಿಂದ ನಡೆಯುತ್ತಿರುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಕೊನೆಯದಿನದ ಧಾರ್ಮಿಕ ಕಾರ್ಯಕ್ರಮವಾಗಿ ಪಾರ್ವತಿ ಸಮೇತ ಗಂಗಾಧರೇಶ್ವರ ಸ್ವಾಮಿಗೆ ಪಟ್ಟಣ ಪಂಚಾಯಿತಿ ಸದಸ್ಯ ಹಾಗೂ ಗುತ್ತಿಗೆದಾರ ಕೆ.ಎನ್ ಲಕ್ಷ್ಮಿನಾರಾಯಣ್ ಕುಟುಂಬದಿಂದ ಪ್ರಧಾನ ಅರ್ಚಕ ಬಾಲಾಜಿ ನೇತೃತ್ವದಲ್ಲಿ ಸಿಂಹವಾಹನೋತ್ಸವ ರಾತ್ರಿ ಶಯನೋತ್ಸವ ಕಾರ್ಯಕ್ರಮ ನಡೆಸಿದರು.

ಈ ಕಾರ್ಯಕ್ರಮಕ್ಕೆ ಪಟ್ಟಣದ ವಿವಿಧ ಸಮುದಾಯದ ಮುಖಂಡರು ಹಾಗೂ ಭಕ್ತಾದಿಗಳು ಭಾಗವಹಿಸಿ ವಿಶೇಷ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು.
ಈ ಸಂದರ್ಬದಲ್ಲಿ ಪ.ಪಂ.ಸದಸ್ಯ ಲಕ್ಷ್ಮಿನಾರಾಯಣ್, ಜಿ.ಪಂ. ಮಾಜಿ ಸದಸ್ಯ ಕುಸುಮಾ, ಗೀರಿಶ್, ಗುರುದತ್ತ್, ನಿವೃತ್ತ ಶಿಕ್ಷಕ ನಾರಾಯಣ್, ಬ್ಯಾಂಕ್ ಕೃಷ್ಣಪ್ಪ, ಮಹೇಂದ್ರ ಕುಮಾರ್ ಸೇರಿದಂತೆ ಇನ್ನಿತರ ಭಕ್ತರು ಭಾಗವಹಿಸಿದ್ದರು.