ಕೊರಟಗೆರೆ :- ಎಸ್ ಎಸ್ ಎಲ್ ಸಿ ಪರೀಕ್ಷಾ ಪಲಿತಾಂಶ ಪ್ರಕಟಗೊಂಡಿದ್ದು, ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ ಕೊರಟಗೆರೆ ಸರಾಸರಿ ಶೇಕಡಾವಾರು 64.7 9 % ಗಳಿಸುವ ಮೂಲಕ ಮೊದಲನೇ ಸ್ಥಾನ ಗಳಿಸಿದ್ದು ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ.
2024- 25 ನೇ ಸಾಲಿನ ಎಸ್ ಎಸ್ ಎಲ್ ಸಿ ಫಲಿತಾಂಶ ತುಮಕೂರು ಜಿಲ್ಲೆ ರಾಜ್ಯದಲ್ಲಿ 20ನೇ ಸ್ಥಾನ ಪಡೆದರೆ ಕೊರಟಗೆರೆ ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ ಮೊದಲನೇ ಸ್ಥಾನ ಗಳಿಸುವ ಮೂಲಕ ತೃಪ್ತಿ ಪಟ್ಟುಕೊಂಡಿದ್ದು, ಈ ಬಾರಿ 2073 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಪಾಲ್ಗೊಂಡು 580 ವಿದ್ಯಾರ್ಥಿಗಳು 776 ವಿದ್ಯಾರ್ಥಿನಿಯರು ತೇರ್ಗಡೆಗೊಂಡು ಒಟ್ಟು 1356 ಜನ ಉತ್ತೀರ್ಣರಾಗಿ, 5 ವಿದ್ಯಾರ್ಥಿಗಳು 98.75 % ಮೂಲಕ ಸಾಧನೆ ಗೈದು ಟಾಪರ್ ಗಳಾಗಿ ಹೊರಹೊಮ್ಮಿದರೆ , ಕೊರಟಗೆರೆ ಸರಾಸರಿ 64.79% ಪಡೆಯುವ ಮೂಲಕ ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ ಪ್ರಥಮ ಸ್ಥಾನದಲ್ಲಿದೆ.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ(KSEAB) ಶುಕ್ರವಾರ 2024-25ನೇ ಸಾಲಿನ SSLC-1 ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟಿಸಿದ್ದು, ಇಂದಿನ ಶೈಕ್ಷಣಿಕ ವರ್ಷಕ್ಕಿಂತ ಈ ಬಾರಿ ಸುಧಾರಣೆಗೊಂಡಿದ್ದು ಇಂದಿನ ಬಾರಿ 62.00% ಇದ್ದ ಫಲಿತಾಂಶ ಈ ಬಾರಿ ಸರಾಸರಿ ಶೇಕಡವಾರು 64.79% ಪಡೆದಿದ್ದು, ಐದು ಜನ ವಿದ್ಯಾರ್ಥಿಗಳು 98 ಹಾಗೂ 99 ಶೇಕಡಾವಾರು ಪರ್ಸೆಂಟೇಜ್ ಪಡೆಯುವ ಮೂಲಕ ಸಾಧನೆಗೈದಿದ್ದಾರೆ,
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಟಾಪರ್ ಪಡೆದಿರುವ 5 ಜನ ವಿದ್ಯಾರ್ಥಿಗಳ ಪೈಕಿ ಕೊರಟಗೆರೆ ಪಟ್ಟಣದ ಚಾಣಕ್ಯ ಪಬ್ಲಿಕ್ ಶಾಲೆಯ ಆದಿಲ್ ಲಾಲಾ ಸಾಬ್ ರಾಮದುರ್ಗ ಎಂಬ ವಿದ್ಯಾರ್ಥಿ 99.36 ಪಡೆದರೆ ಪಟ್ಟಣದ ರವೀಂದ್ರ ಭಾರತಿ ಶಾಲೆಯ ಸೂರಜ್ ಎಂ.ಎ ನ್ 98.88 ಪಡೆದರೆ ಅದೇ ಶಾಲೆಯ ಸುಹಾಸ್ . ಪಿ 98.88 ಮುಂದೆ ಶಾಲೆಯ ಇಬ್ಬರೂ ವಿದ್ಯಾರ್ಥಿಗಳು ಸಮಾನಾಂತರ ಅಂಕ ಪಡೆದು ಸಾಧನೆಗೈದರೆ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ವಿನು .ಎ 98.72 ಪರ್ಸೆಂಟೇಜ್ ಪಡೆದರೆ ರವೀಂದ್ರ ಭಾರತಿ ಶಾಲೆಯ ಮತ್ತೋರ್ವ ವಿದ್ಯಾರ್ಥಿ ಅಮೂಲ್ಯ ಜಿ ಎಚ್ 98.72 ಪಡೆದಿದ್ದು ಉಳಿದಂತೆ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿನಿ ಗೀತಾ ಟಿ.ಜಿ 98.24, ರೆಡ್ಡಿ ಕಟ್ಟೆ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿ ಮಂಜುನಾಥ್ 97.44, ಐ ಕೆ ಕಾಲೋನಿಯ ಕೆಪಿಎಸ್ ಶಾಲೆಯ ಮೋಹನ್ 97.44, ಕೊರಟಗೆರೆ ಜಿ ಜಿ ಎಚ್ಎಸ್ ಸೋನು 96.64 ಹಾಗೂ ಸರ್ಕಾರಿ ಪ್ರೌಢಶಾಲೆ ದುಡ್ಡುನಹಳ್ಳಿ ಸಿದ್ದರಾಜು 96.64 ಶೇಕಡವಾರು ಪರ್ಸೆಂಟೇಜ್ ಗಳಿಸುವ ಮೂಲಕ ಟಾಪರ್ಗಳಾಗಿ ಹೊರಹೊಮ್ಮಿದ್ದಾರೆ.

ಈ ಬಾರಿಯ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಸರ್ಕಾರಿ ಶಾಲೆಗಳಿಂದ ಯಲಚಗೆರೆ ಸರ್ಕಾರಿ ಪ್ರೌಢಶಾಲೆ 98.14 ಶೇಕಡಾವಾರು ಅತಿ ಹೆಚ್ಚು ಅಂಕ ಗಳಿಸುವ ಮೂಲಕ ಸಾಧನೆಗೈದರೆ ಅಕ್ಕಿ ರಾಂಪುರ ಸರ್ಕಾರಿ ಪ್ರೌಢಶಾಲೆ ಶೇಕಡ ವಾರು 42% ಪರ್ಸೆಂಟ್ ಪಡೆಯುವ ಮೂಲಕ ಕಳಪೆ ಫಲಿತಾಂಶ ಪ್ರದರ್ಶಿಸಿದರೆ, ಅನುದಾನಿತ ಶಾಲೆಗಳ ಪೈಕಿ ಕುರಂಕೋಟೆಯ ಕೆಎಂಎಂ ಪ್ರೌಢಶಾಲೆ ಶೇಕಡಾವಾರು ಸರಾಸರಿ 70 ಪರ್ಸೆಂಟ್ ಗಳಿಸಿ ಸಾಧನೆಗೈದರೆ ಕಾಳಿದಾಸ 39% ಗಳಿಸಿದೆ, ಅನುದಾನ ರಹಿತ ಶಾಲೆಗಳಲ್ಲಿ ಕೊರಟಗೆರೆ ಪಟ್ಟಣದ ರವೀಂದ್ರ ಭಾರತಿ ಪ್ರೌಢಶಾಲೆ 91.22 ಸರಾಸರಿ ಪರ್ಸೆಂಟೇಜ್ ಗಳಿಸುವ ಮೂಲಕ ಸಾಧನೆಗೈದರೆ ಹೊಳವನಹಳ್ಳಿ ಜೈನಾಬಿಯ ಪ್ರೌಢ ಶಾಲೆ ಶೇಕಡ 60 ಹಾಗೂ ಸೆಂಟ್ ಮೇರಿಸ್ ಶೇಕಡ 50 ಪಡೆಯುವ ಮೂಲಕ ಕಳಪೆ ಫಲಿತಾಂಶ ನೀಡಿದೆ ಉಳಿದಂತೆ ವಸತಿ ಶಾಲೆಗಳ ಪೈಕಿ ಕೋಳಲಾ ಡಾಕ್ಟರ್ ಬಿ ಆರ್ ಅಂಬೇಡ್ಕರ್ ವಸತಿ ಶಾಲೆ ಶೇಕಡ 94% ಸರಾಸರಿ ಫಲಿತಾಂಶ ಪಡೆಯುವ ಮೂಲಕ ಸಾಧನೆಗೈದು ಬಿಗಿದರೆ ಭಜ್ಜನಹಳ್ಳಿ ಏಕಲವ್ಯ ವಸತಿ ಶಾಲೆ ಶೇಕಡ ಸರಾಸರಿ 53.57 ಪರ್ಸೆಂಟ್ ಗಳಿಸುವ ಮೂಲಕ ಕಳಪೆ ಫಲಿತಾಂಶ ಮೂಡಿ ಬಂದಿದೆ.

ಒಟ್ಟಾರೆ 2024 – 25 ನೇ ಸಾಲಿನ ಈ ಬಾರಿಯ ಶೈಕ್ಷಣಿಕ ವರ್ಷದ ಎಸ್ ಎಸ್ ಎಲ್ ಸಿ ಫಲಿತಾಂಶ ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದು, ಈ ಹಿಂದಿನ ಫಲಿತಾಂಶದಿಂದ ಜಿಲ್ಲಾ ಉಸ್ತುವಾರಿ ಸಚಿವರ ಹಾಗೂ ಗೃಹ ಸಚಿವರಾದ ಡಾ. ಜಿ ಪರಮೇಶ್ವರ್ ಶಿಕ್ಷಣ ಇಲಾಖೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಸೇರಿದಂತೆ ಎಲ್ಲಾ ಶಿಕ್ಷಕರು ಈ ಬಾರಿಯ ಫಲಿತಾಂಶ ಉತ್ತಮ ಮಟ್ಟದಲ್ಲಿ ಬರಬೇಕು ಎಂದು ತಾಕೀತು ಮಾಡಿದ ಬೆನ್ನಲ್ಲೇ ಸರಾಸರಿ 64 .79 ಫಲಿತಾಂಶ ಹೊರಹೊಮ್ಮುವ ಮೂಲಕ ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ ಕೊರಟಗೆರೆ ಪ್ರಥಮ ಸ್ಥಾನ ಗಳಿಸುವ ಮೂಲಕ ಸಮಾಧಾನ ಪಟ್ಟು ಕೊಂಡಿದೆ.
– ಶ್ರೀನಿವಾಸ್ ಕೊರಟಗೆರೆ