ಕೊರಟಗೆರೆ :- ಹೊಳವನಹಳ್ಳಿ ಪ್ರಾಥಮಿಕ ಕೃಷಿ ಪತ್ತಿ ಸಹಕಾರ ಸಂಘದ ನೂತನ ಅಧ್ಯಕ್ಷನಾಗಿ ಕೇಶವಮೂರ್ತಿ ಉಪಾಧ್ಯಕ್ಷರಾಗಿ ರವಿಕುಮಾರ್ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಹಾಗೂ ಸಿಡಿಒ ಗುರುರಾಜ್ ಘೋಷಣೆ ಮಾಡಿದರು.
ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಏರ್ಪಡಿಸಲಾಗಿದ್ದ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಹನುಮಾನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆಶ್ವಥ್‌ನಾರಾಯಣ್, ಡಿಸಿಸಿ ಬ್ಯಾಂಕ್ ಮೇಲ್ವಾಚರಕ ಬೋರಣ್ಣ, ಸೇರಿದಂತೆ ಊರಿನ ಮುಖಂಡರು ಒಮ್ಮತದಿಂದ ಅಧ್ಯಕ್ಷ ಸ್ಥಾನಕ್ಕೆ ಕೇಶವಮೂರ್ತಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ರವಿಕುಮಾರ್ ಅವರು ಮಾತ್ರ ನಾಮಪತ್ರ ಸಲ್ಲಿಸಿದರು. ಇವರ ವಿರುದ್ದ ಯಾರು ನಾಮಪತ್ರ ಸಲ್ಲಿಸದ ಹಿನ್ನಲೇಯಲ್ಲಿ ಅಧ್ಯಕ್ಷರಾಗಿ ಕೇಶವಮೂರ್ತಿ ಉಪಾಧ್ಯಕ್ಷರಾಗಿ ರವಿಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನೂತನ ಅಧ್ಯಕ್ಷ ಕೇಶವಮೂರ್ತಿ ಮಾತನಾಡಿ, ನಾನು ಈ ಸಹಕಾರ ಸಂಘದ ಅಧ್ಯಕ್ಷನಾಗಲು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಕೆ.ಎನ್.ರಾಜಣ್ಣ ಆಶೀರ್ವಾದ ಹಾಗೂ ಎಂಎಲ್ಸಿ ರಾಜೇಂದ್ರಣ್ಣ ಎಲ್ಲಾ ನನ್ನ ನಿರ್ದೇಶಕರ ಸಹಕಾರದಿಂದ ಅಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ. ಮುಂದಿನ ದಿನಗಳಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಕೆ.ಎನ್ ರಾಜಣ್ಣ ನವರ ಸಹಕಾರ ಪಡೆದು ನಮ್ಮ ಸಂಘದ ವ್ಯಾಪ್ತಿಗೆ ಬರುವ ರೈತರಿಗೆ ಸಾಲ ಸೇರಿದಂತೆ ಇತರೆ ಸವಲತ್ತುಗಳನ್ನ ನೀಡಲಾಗುವುದು. ಅಧ್ಯಕ್ಷನಾಗಲು ಸಹಕಾರ ನೀಡಿದ ಎಲ್ಲರಿಗೂ ಅಭಿನಂದನೆಗಳನ್ನ ತಿಳಿಸಿದರು.
ಕೊರಟಗೆರೆ ಡಿಸಿಸಿ ಬ್ಯಾಂಕ್ ಮೇಲ್ವಾಚರಕರಾದ ಬೋರಣ್ಣ ಮಾತನಾಡಿ, ಬಂದು ಸಹಕಾರ ಸಂಘ ಅಭಿವೃದ್ಧಿಯಾಗಬೇಕಾದರೆ ನಿರ್ದೇಶಕರ ಸಹಮತ ಬೇಕು. ಎಲ್ಲರೂ ಒಟ್ಟಾಗಿ ಸಂಘದ ಅಭಿವೃದ್ಧಿಗಾಗಿ ಕೆಲಸ ಮಾಡಬೇಕು. ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಕೆ.ಎನ್.ರಾಜಣ್ಣ ಅವರು ರೈತರಿಗೆ ಬೀದಿ ಬದಿ ವ್ಯಾಪಾರಿಗಳಿಗೆ ಹಾಗೂ ನಿರುದ್ಯೋಗಿ ಯುವಕ ಯುವತಿಯರಿಗೆ ಅನೇಕ ಸವಲತ್ತು ನೀಡುವ ಯೋಜನೆಗಳನ್ನ ತರಲಾಗಿದ್ದು, ಅವುಗಳನ್ನ ಸಮರ್ಪಕವಾಗಿ ಬಳಸಿಕೊಳ್ಳಿ. ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ಅಭಿನಂದನೆಗಳು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾರ್ಯನಿರ್ವಾಹಣಾಧಿಕಾರಿ ಸತೀಶ್‌ಕುಮಾರ್, ನಿರ್ದೇಶಕರಾದ ರಂಗರಾಜು, ಶಿವಕುಮಾರ್, ಸುರೇಶ್, ಮನ್ಸೂರ್ ಪಾಷ, ಮಲ್ಲಿಕಾರ್ಜುನಯ್ಯ, ನರಸಮ್ಮ, ಲತಾ, ಮರುಡಪ್ಪ, ಜಯರಾಮು ಹಾಗೂ ಸ್ವಾತಿಕಿರಣ್, ಮುಖಂಡರಾದ ರಂಗನಾಥ್, ನರಸಿಂಹಮೂರ್ತಿ, ತಿಮ್ಮಯಲ್ಲಗಪ್ಪ, ಕಾಳಿಚರಣ್, ಹನುಮಂತರಾಯಪ್ಪ, ಕರಿಬಸವಯ್ಯ, ನಾಸೀರ್, ಜಯರಾಜ್, ರವಿಕುಮಾರ್, ಬಿದಲೋಟಿ, ಹನುಮಂತರಾಜು, ನರಸಿಂಹಮೂರ್ತಿ, ರಂಗಣ್ಣ, ಕುಮಾರ್, ಕದರಪ್ಪ, ಸೇರಿದಂತೆ ಇತರರು ಇದ್ದರು.