ಕೊರಟಗೆರೆ : ತಾಲ್ಲೂಕಿನ ಕೋಳಾಲ ಹೋಬಳಿಯ ಗೆದ್ಮೆನಹಳ್ಳಿ ಗ್ರಾಮದ ಪುಣ್ಯಕ್ಷೇತ್ರ ಶ್ರೀ ಹೊಳೆ ನಂಜುಂಡೇಶ್ವರ ಸ್ವಾಮಿ ದೇವಾಲಯದಲ್ಲಿ ಹಬ್ಬದ ದಿನದಂದು ಜಾತ್ರಾ ಮಹೋತ್ಸವದ ದೇವಾಲಯದಲ್ಲಿ. ವಿಶೇಷ ಪೂಜಾ ಕೈಂಕರ್ಯಗಳು ಸದಾ ಭಕ್ತಿಯಿಂದ ನೆರವೇರಿದವು. ಮುಂಜಾನೆಯಿಂದಲೇ ಹೊಳೆ ನಂಜುಂಡೇಶ್ವರ ಸ್ವಾಮಿಗೆ ಅಭಿಷೇಕ. ಬಿಲ್ವಾರ್ಚನೆ. ಸಾಹಸನಾಮ. ಸೇರಿದಂತೆ ವಿವಿಧ ಪೂಜಾ ಕಾರ್ಯಗಳು ನಡೆದವು.
ಶೈಲಜ ವಿ. ಸೋಮಣ್ಣ ಮಾತನಾಡಿ, ಹಬ್ಬದ ದಿನದಂದು ಹೊಳೆ ನಂಜುಂಡೇಶ್ವರ ದೇವಾಲಯದಲ್ಲಿ ಭಕ್ತರನ್ನು ನೋಡಿ ನನಗೆ ಬಹಳ ಸಂತೋಷವಾಗಿದ್ದು. ನಿಮ್ಮಗಳಿಗೆ ನಂಜುಂಡೇಶ್ವರ ಸ್ವಾಮಿ ಈ ಭಾಗದ ಜನರಿಗೆ ಹಾಗೂ ಬಂದ ಭಕ್ತಾದಿಗಳಿಗೆ ಆರೋಗ್ಯ ಆಯಸ್ಸು ಕೊಡಲಿ ಎಂದು ದೇವರಲ್ಲಿ ಕೇಳಿಕೊಳ್ಳುತ್ತೇನೆ.
ನನ್ನ ಪತಿಪತಿಯವರಾದ ವಿ. ಸೋಮಣ್ಣನವರು ಅನುಪಸ್ಥಿತಿಯಲ್ಲಿ, ನಾನು ದೇವಾಲಯಕ್ಕೆ ದೇವರ ದರ್ಶನ ಮಾಡುವುದಕ್ಕೆ ನನಗೆ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ ಸ್ವಾಮಿಗೆ ವಿವಿಧ ಬಗೆಯ ಹೂ ಹಣ್ಣುಗಳಿಂದ ಅಲಂಕಾರ ಮಾಡಿದ್ದು ರಾಜ್ಯ ಹಾಗೂ ತಾಲೂಕಿನ ಅತ್ಯಂತ ಉತ್ತಮ ಮಳೆ ಬೆಳೆಯಾಗಿ ಜನ ಜಾನುವಾರುಗಳು ಕಷ್ಟ ಕಾರ್ಪಣ್ಯಗಳು ದೂರವಾಗಿ, ಸುಖ- ಶಾಂತಿ ನಡೆಸಲಿ ಎಂದು ದೇವರಲ್ಲಿ ಕೇಳಿಕೊಳ್ಳುತ್ತೇನೆ ಎಂದು ಹೇಳಿದರು.
ತಾಲೂಕಿನ ತುಮಲ್ ನಿರ್ದೇಶಕ ವಿ. ಸಿದ್ದಗಂಗಯ್ಯ ಮಾತನಾಡಿ, ಪ್ರತಿ ವರ್ಷ ಮಹಾಶಿವರಾತ್ರಿ ಹಬ್ಬದ ದಿನದಂದು ಕ್ಷೇತ್ರದಲ್ಲಿ ಜಾತ್ರೆ ನಡೆಯುತ್ತದೆ. ಬೆಂಗಳೂರು. ತುಮಕೂರು. ಕೊರಟಗೆರೆ. ನೆಲಮಂಗಲ. ದೊಡ್ಡಬಳ್ಳಾಪುರ. ಸೇರಿದಂತೆ ಮತ್ತಿತರ ಕಡೆಯಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆಯುತ್ತಾರೆ.

ಅದೇ ರೀತಿ ಇಂದು ಕೂಡ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಪೂಜೆ ಸಲ್ಲಿಸಿದ್ದಾರೆ. ವೈದ್ಯಲೋಕಕ್ಕೆ ಸವಾಲದ ಕಣ್ಣು. ಕಿವಿ ಹಾಗೂ ಚರ್ಮ ಕಾಯಿಲೆಗೆ ಸಂಬಂಧಪಟ್ಟ ಕಾಯಿಲೆಗಳು. ಗುಣಮುಖವಾದ ಸಾಕಷ್ಟು ಉದಾಹರಣೆಗಳಿವೆ. ಬಹುದಿನದ ಕಾಯಿಲೆಗಳು ಗುಣಮುಖವಾಗಲು. ಭಕ್ತಿಯಿಂದ ಹರಕೆ ಕಟ್ಟಿ ನಿಯಮದಂತೆ ನಡೆದುಕೊಂಡರೆ.
ಗುಣಮುಖವಾಗುತ್ತದೆ ಎಂಬುದು ಈ ಭಾಗದ ಭಕ್ತರ ನಂಬಿಕೆಯಾಗಿದೆ. ಹಳೆಯ ದಂಡೆಯ ಸುಂದರ ಪರಿಸರದಲ್ಲಿ ಸ್ವಾಮಿಯ ನೆಲೆಸಿರುವದರಿಂದ ಹೊಳೆ ನಂಜುಂಡೇಶ್ವರ ಎಂಬ ಹೆಸರು ಬಂದಿದೆ ಎಂದು ಇತಿಹಾಸವಿದೆ. ಪ್ರತಿನಿತ್ಯ ಸ್ವಾಮಿಗೆ ಪೂಜಾ ಕಾರ್ಯಗಳು ನಡೆಯುತ್ತವೆ. ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಪುನೀತರಾದರು. ಕುಡಿಯುವ ನೀರು ವಾಹನ ನಿಲುಗಡೆ ಸೇರಿದಂತೆ ಮತ್ತಿತರ ಮೂಲಭೂತ ಸೌಕರ್ಯವನ್ನು ದೇವಾಲಯದ ಅರ್ಚಕರು ಹಾಗೂ ಆಡಳಿತ ಮಂಡಳಿ ವತಿಯಿಂದ ಅಚ್ಚುಕಟ್ಟಾಗಿ ಮಾಡಲಾಗಿತ್ತು. ಹಾಗೂ ವಿಶೇಷವಾಗಿ ಬಂದ ಭಕ್ತಾದಿಗಳಿಗೆ ಚಿನ್ನಹಳ್ಳಿ ಗ್ರಾಮದ ಜಗದೀಶ್ ರವರ ನೇತೃತ್ವದಲ್ಲಿ ಅವರ ಜೊತೆಗೆ ಈ ಭಾಗದ ಭಕ್ತಾದಿಗಳ ಸಹಾಯದಿಂದ. ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಮಾಡಲಾಗಿತ್ತು. ಮುಂಜಾನೆಯಿಂದಲೂ ಕೂಡ ಭಕ್ತಾದಿಗಳು ಆಗಮಿಸಿ ದೇವರ ದರ್ಶನ ಪಡೆದರು ಎಂದು ಹೇಳಿದರು.

ಈ ಸಂದರ್ಭದಲ್ಲಿ ಚಿನ್ನಹಳ್ಳಿ ಜಗದೀಶ್. ಸಿ.ಆರ್. ಹರೀಶ್. ಗೆದ್ಮೆನಹಳ್ಳಿ ಶಿವಣ್ಣ. ಆರ್ ಟಿ ಓ ಲಕ್ಷ್ಮಯ್ಯ. ಮಂಜುನಾಥ. ರಂಗಪ್ಪ. ಅಂಜಿನಪ್ಪ. ಗ್ರಾಮ ಪಂಚಾಯತಿ ಸದಸ್ಯರಾದ ಕುಮಾರ್. ನಾಗೇಂದ್ರ ಸಿ.ಎನ್. ಶಿವಣ್ಣ. ಶಿವರಾಜ್. ಪಿಎಸ್ಐ ಗಳಾದ ರೇಣುಕಾ ಯಾದವ್. ಯೋಗೀಶ್. ಹಾಗೂ ಸಿಬ್ಬಂದಿ ವರ್ಗ ಮತ್ತು ಭಕ್ತಾದಿಗಳು ಹಾಜರಿದ್ದರು.
– ನರಸಿಂಹಯ್ಯ ಕೋಳಾಲ